HomeEntertainment'ಲವ್ ಲಿ' ಚಿತ್ರಕ್ಕೆ ಪ್ರೇಕ್ಷಕ ಪ್ರಭುಗಳು ಫಿದಾ

‘ಲವ್ ಲಿ’ ಚಿತ್ರಕ್ಕೆ ಪ್ರೇಕ್ಷಕ ಪ್ರಭುಗಳು ಫಿದಾ

ಜೂನ್ 14ರಂದು ರಾಜ್ಯದ್ಯಂತ ತೆರೆ ಕಂಡಿದ್ದ ವಸಿಷ್ಟ ಸಿಂಹ ಅಭಿನಯದ ‘ಲವ್ ಲಿ’ ಚಿತ್ರ ರಾಜ್ಯದಲ್ಲೆಡೆ ಯಶಸ್ವಿ ಪ್ರದರ್ಶನ  ಕಾಣುವುದಲ್ಲದೆ ಪ್ರೇಕ್ಷಕರ ಮನ ಮುಟ್ಟಿದೆ. ವಿಲನ್ ಪಾತ್ರದಲ್ಲಿ ಮಿಂಚುತ್ತಿದ್ದ ವಸಿಷ್ಟ ಸಿಂಹ ಮತ್ತೊಮ್ಮೆ ನಾಯಕನಟನಾಗಿ ಅಭಿನಯಿಸಿದ್ದು, ತುಂಬಾ ಅದ್ಭುತವಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ.

ಚೇತನ್ ಕೇಶವ್ ನಿರ್ದೇಶನದ ಈ ಚಿತ್ರದಲ್ಲಿ ವಶಿಷ್ಠ ಸಿಂಹ ಹಾಗೂ ಸ್ಟೆಫಿ ಪಟೇಲ್ ಪ್ರಮುಖ ಪಾತ್ರದಲ್ಲಿದ್ದು, ಅಬುವಾನಸ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ರವೀಂದ್ರ ಕುಮಾರ್ ನಿರ್ಮಾಣ ಮಾಡಿದ್ದಾರೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆ ನೀಡಿದ್ದು, ಹರೀಶ್ ಕೊಮ್ಮೆ ಸಂಕಲನ, ಚೇತನ್ ಕುಮಾರ್ ಹಾಗೂ ಕೆ ಎಲ್ ರಾಜಶೇಖರ್ ಸಂಭಾಷಣೆ, ಅಶ್ವಿನ್ ಕೆನಡಿ ಛಾಯಾಗ್ರಹಣವಿದೆ. ಇದೊಂದು  ಫ್ಯಾಮಿಲಿ ಎಂಟರ್ಟೈನರ್  ಸಿನಿಮಾ ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular