ಬೀಜಿಂಗ್: ಚೀನಾದಲ್ಲಿ ಹೊಸ ಆ್ಯಪ್ ಒಂದು ಸಂಚಲನ ಸೃಷ್ಟಿಸುತ್ತಿದೆ. ‘ಆರ್ ಯು ಡೆಡ್ ಆ್ಯಪ್’ ಈಗ ಚೀನಾದಲ್ಲಿ ವೈರಲ್ ಆಗುತ್ತಿದೆ. ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವವರ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದೆ. ಇದರೊಂದಿಗೆ, ಆ್ಯಪ್ ರಚಿಸಿದ ಕಂಪನಿಯು ಈಗ ಅದಕ್ಕೆ ಚಂದಾದಾರಿಕೆ ಶುಲ್ಕವನ್ನು ಸಹ ಪರಿಚಯಿಸಿದೆ. ಈ ಆ್ಯಪ್ ಅನ್ನು ಚೈನೀಸ್ ಭಾಷೆಯಲ್ಲಿ ಸಿಲಿಮಿ ಎಂದು ಕರೆಯಲಾಗುತ್ತದೆ. ಇಂಗ್ಲಿಷ್ನಲ್ಲಿ ಇದನ್ನು ‘Are You Dead?’ ಎಂದು ಕರೆಯಲಾಗುತ್ತದೆ.
ಆರ್ ಯು ಡೆಡ್ ಎಂದರೆ ನೀವು ಸತ್ತಿದ್ದೀರಾ..? ಎಂದರ್ಥ…ಈ ಆ್ಯಪ್ ನ ಹೆಸರೇ ನಮ್ಮನ್ನು ಬೆಚ್ಚಿ ಬೀಳಿಸುವಂತಿದೆ. ಹೌದು. ಈ ಆ್ಯಪ್ ಒಂದೇ ಇದರ ಉದ್ದೇಶ ಒಂದೇ. ನೀವು ಇದ್ದೀರಾ ಅಥವಾ ಇಲ್ಲವೇ ಎಂಬುದನ್ನು ಇದು ನಿಮ್ಮ ಸ್ನೇಹಿತರಿಗೆ ಹೇಳುತ್ತದೆ. ಈ ಆ್ಯಪ್ ಅನ್ನು ಚೀನಾದಲ್ಲಿ ಕಂಡುಹಿಡಿಯಲಾಯಿತು. ಅಲ್ಲಿ, ಝೆಂಗ್ಝೌ ಎಂಬ ನಗರದಲ್ಲಿ, ಮೂವರು ವ್ಯಕ್ತಿಗಳು ಸುಮಾರು 1000 ಯುವಾನ್ (ಭಾರತೀಯ ಕರೆನ್ಸಿಯಲ್ಲಿ ಸರಿಸುಮಾರು 13000 ರೂ.) ಖರ್ಚು ಮಾಡಿ ಈ ಆ್ಯಪ್ ಅನ್ನು ವಿನ್ಯಾಸಗೊಳಿಸಿದರು.
ಈ ಆ್ಯಪ್ ಅನ್ನು ಒಂಟಿಯಾಗಿರುವ ಜನರಿಗಾಗಿ ರಚಿಸಲಾಗಿದೆ. ಈ ಆ್ಯಪ್ ಅನ್ನು ಒಂಟಿ ವಿದ್ಯಾರ್ಥಿಗಳು ಅಥವಾ ಕಚೇರಿಗಳಲ್ಲಿ ಕೆಲಸ ಮಾಡುವ ಒಂಟಿ ಜನರು ಅಥವಾ ಒಂಟಿ ಜೀವನವನ್ನು ಇಷ್ಟಪಡುವವರನ್ನು ಗುರಿಯಾಗಿಸಿಕೊಂಡು ರಚಿಸಲಾಗಿದೆ.
ಏನಿದು. ‘Are You Dead?’ ಆ್ಯಪ್..? ಏನಿದರ ಸ್ಪೆಷಾಲಿಟಿ
ಚೀನಾದಲ್ಲಿ ಸೈಲೆಮ್ ಎಂದು ಕರೆಯಲಾಗುವ ಆ್ಯಪ್ ಡೌನ್ ಲೋಡ್ ಮಾಡಿದ ನಂತರ ಜನರು 48 ಗಂಟೆಗಳಿಗೊಮ್ಮೆ ಹಸಿರು ಬಟನ್ ಒತ್ತಬೇಕಾಗುತ್ತದೆ. ಹಾಗೆ ಮಾಡದಿದ್ದರೆ ಅವರ ತುರ್ತು ಸಂಪರ್ಕಗಳಿಗೆ ಸ್ವಯಂಚಾಲಿತವಾಗಿ ಸುದ್ದಿ ಮುಟ್ಟಿಸುತ್ತದೆ. ಏನೂ ಪ್ರಕ್ರಿಯೆ ಬಾರದಿದ್ದಾಗ ಆ್ಯಪ್ ಬಳಕೆದಾರರು ಅಪಾಯದಲ್ಲಿದ್ದಾರೆ ಎಂದು ಹೇಳುತ್ತದೆ.
ಎಷ್ಟು ಹಣ ಪಾವತಿಸಬೇಕು.?
ಆರಂಭದಲ್ಲಿ ಇದು ಉಚಿತವಾಗಿ ಸಿಗುತ್ತಿತ್ತು. ಆದರೆ ಈಗ ಇದನ್ನು 99 ರೂ ಪಾವತಿಸಿ ಡೌನ್ ಲೋಡ್ ಮಾಡಬೇಕು.ಚೀನಾದಲ್ಲಿ ಒಂಟಿಯಾಗಿ ವಾಸಿಸುವ ಜನರ ಸಂಖ್ಯೆ ಸುಮಾರು 200 ಮಿಲಿಯನ್ ಎಂದು ಅಂದಾಜಿಸಲಾಗಿದೆ. ಒಂಟಿಯಾಗಿ ವಾಸಿಸುವ ಜನರ ಸಂಖ್ಯೆ ವಾರ್ಷಿಕವಾಗಿ ಶೇಕಡಾ 30 ರಷ್ಟು ಹೆಚ್ಚುತ್ತಿದೆ ಎಂದು ಅಂದಾಜಿಸಲಾಗಿದೆ. ಚೀನಾದಲ್ಲಿನ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಒಂಟಿ ಜನರಿಗೆ ಅಪ್ಲಿಕೇಶನ್ ಅನ್ನು ವಿಶ್ವಾದ್ಯಂತ ಬಿಡುಗಡೆ ಮಾಡಲಾಗಿದೆ.
ಆರ್ ಯು ಡೆಡ್ ಆಪ್ ನ ಪರಿಕಲ್ಪನೆ ತುಂಬಾ ಸರಳವಾಗಿದೆ. ನೀವು ಪ್ರತಿ ಎರಡು ದಿನಗಳಿಗೊಮ್ಮೆ ಚೆಕ್ ಇನ್ ಮಾಡಬೇಕು. ನೀವು ಆ್ಯಪ್ ನಲ್ಲಿರುವ ಗ್ರೀನ್ ಬಟನ್ ಒತ್ತಿದರೆ, ನೀವು ಜೀವಂತವಾಗಿದ್ದೀರಿ ಎಂದು ಆಪ್ ಗುರುತಿಸುತ್ತದೆ. ನೀವು ಮಾಡದಿದ್ದರೆ, ಅದು ತುರ್ತು ಸಂಖ್ಯೆಯನ್ನು ಸಂಪರ್ಕಿಸುತ್ತದೆ. ನೀವು ಇರುವ ಪರಿಸ್ಥಿತಿಯ ಬಗ್ಗೆ ಅದು ಆ ಸಂಖ್ಯೆಗೆ ಮಾಹಿತಿಯನ್ನು ಒದಗಿಸುತ್ತದೆ. ವಾಸ್ತವವಾಗಿ, ಈ ಆಪ್ ಅನ್ನು ಕಳೆದ ವರ್ಷ ಮೇ ತಿಂಗಳಲ್ಲಿ ಬಿಡುಗಡೆ ಮಾಡಲಾಯಿತು. ಆದರೆ ಕಳೆದ ಕೆಲವು ವಾರಗಳಲ್ಲಿ ಈ ಆಪ್ ಮೇಲಿನ ಕ್ರೇಜ್ ಹೆಚ್ಚಾಗಿದೆ. ಚೀನಾದ ನಗರಗಳಲ್ಲಿ ಒಂಟಿಯಾಗಿ ವಾಸಿಸುವ ಜನರು ಈ ಆಪ್ ಅನ್ನು ಹೆಚ್ಚು ಹೆಚ್ಚು ಡೌನ್ಲೋಡ್ ಮಾಡುತ್ತಿದ್ದಾರೆ. ಇದು ದೇಶದಲ್ಲಿ ಅತಿ ಹೆಚ್ಚು ಡೌನ್ಲೋಡ್ ಮಾಡಲಾದ ಪಾವತಿಸಿದ ಆಪ್ ಆಗಿ ಮಾರ್ಪಟ್ಟಿದೆ.

