HomeInternationalಅಮ್ಮನ ಮದುವೆಗೆ ಮಕ್ಕಳೇ ಸಾಕ್ಷಿ: ಇಬ್ಬರು ವಿದೇಶಿ ಪ್ರೇಮಿಗಳ ಜೊತೆ ಹಸೆಮಣೆ ಏರಿದ ಥೈಲ್ಯಾಂಡ್ ಮಹಿಳೆ

ಅಮ್ಮನ ಮದುವೆಗೆ ಮಕ್ಕಳೇ ಸಾಕ್ಷಿ: ಇಬ್ಬರು ವಿದೇಶಿ ಪ್ರೇಮಿಗಳ ಜೊತೆ ಹಸೆಮಣೆ ಏರಿದ ಥೈಲ್ಯಾಂಡ್ ಮಹಿಳೆ

ಬ್ಯಾಂಕಾಕ್: ಮದುವೆ ಎಂದರೆ ಒಬ್ಬ ಪುರುಷ ಮತ್ತು ಒಬ್ಬ ಮಹಿಳೆಯ ನಡುವಿನ ಪವಿತ್ರ ಬಂಧ ಎಂಬುದು ಸಾಮಾನ್ಯ ನಂಬಿಕೆ. ಆದರೆ ಥೈಲ್ಯಾಂಡ್‌ನಲ್ಲಿ ನಡೆದ ಒಂದು ವಿವಾಹ ಈಗ ಇಡೀ ವಿಶ್ವದ ಗಮನ ಸೆಳೆಯುತ್ತಿದೆ. 37 ವರ್ಷದ ಮಹಿಳೆಯೊಬ್ಬರು ಒಂದೇ ಸಮಾರಂಭದಲ್ಲಿ ಆಸ್ಟ್ರಿಯಾದ ಇಬ್ಬರು ವ್ಯಕ್ತಿಗಳನ್ನು ವಿವಾಹವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಪ್ರಖೋನ್ ಚಾಯ್ ಜಿಲ್ಲೆಯಲ್ಲಿ ನಡೆದ ಈ ವಿಶಿಷ್ಟ ಮದುವೆಯ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಗಾಯಕಿ ಮತ್ತು ಗೀತರಚನೆಗಾರ್ತಿಯಾಗಿದ್ದ ದುವಾಂಗ್‌ಡುವಾನ್ ಕೆತ್ಸಾರೊ ಎಂಬಾಕೆಯೇ ಈ ಅಪರೂಪದ ಮದುವೆಯ ವಧು. ಈಕೆ ಮದುವೆಯಾಗಿರುವುದು ಆಸ್ಟ್ರಿಯಾದ ನಿವೃತ್ತ ಪೊಲೀಸ್ ಅಧಿಕಾರಿ ರೋಮನ್ ಮತ್ತು ಅವರ ಆಪ್ತ ಗೆಳೆಯ, ಪ್ರಸ್ತುತ ಪೊಲೀಸ್ ಅಧಿಕಾರಿಯಾಗಿರುವ ಮ್ಯಾಕಿ ಎಂಬುವವರನ್ನು. ವಿಶೇಷವೆಂದರೆ ಈ ಇಬ್ಬರು ವರರು ಪರಸ್ಪರ ಆತ್ಮೀಯ ಸ್ನೇಹಿತರು ಎಂಬುದು ಇಲ್ಲಿನ ಕುತೂಹಲಕಾರಿ ಸಂಗತಿ.

ಕಳೆದ ಐದು ವರ್ಷಗಳಿಂದ ರೋಮನ್ ಜೊತೆ ಸಂಬಂಧದಲ್ಲಿದ್ದ ದುವಾಂಗ್‌ಡುವಾನ್, ನಂತರ ಅವರ ಗೆಳೆಯ ಮ್ಯಾಕಿ ಅವರ ಪರಿಚಯ ಮಾಡಿಕೊಂಡಿದ್ದರು. ಕಳೆದ ಒಂದು ವರ್ಷದಿಂದ ಈ ಮೂವರು ಪರಸ್ಪರ ಇಷ್ಟಪಟ್ಟಿದ್ದು, ಕೊನೆಗೆ ಮೂವರೂ ಒಟ್ಟಾಗಿ ಜೀವನ ನಡೆಸಲು ನಿರ್ಧರಿಸಿದ್ದಾರೆ. ಮದುವೆಗೂ ಮುನ್ನ ದುವಾಂಗ್‌ಡುವಾನ್ ತಮ್ಮ ಪೋಷಕರು ಮತ್ತು ಮಕ್ಕಳೊಂದಿಗೆ ಚರ್ಚಿಸಿದ್ದು, ಕುಟುಂಬದವರು ಕೂಡ ಈ ಸಂಬಂಧಕ್ಕೆ ಒಪ್ಪಿಗೆ ನೀಡಿದ್ದಾರೆ. ಇಬ್ಬರೂ ವ್ಯಕ್ತಿಗಳು ತಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವುದೇ ಈ ಒಪ್ಪಿಗೆಗೆ ಕಾರಣ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಫೆಬ್ರವರಿ 28 ರಂದು ಥಾಯ್ ಸಂಪ್ರದಾಯದಂತೆ ವಿವಾಹ ಸಮಾರಂಭ ನಡೆದಿದ್ದು, ಕುಟುಂಬದವರು ಮತ್ತು ಆಪ್ತರು ಮಾತ್ರ ಭಾಗವಹಿಸಿದ್ದರು. ಈ ಮದುವೆಯಲ್ಲಿ ಇಬ್ಬರೂ ವರರು ತಲಾ 1 ಮಿಲಿಯನ್ ಭಾತ್ (ಸುಮಾರು 29 ಲಕ್ಷ ರೂಪಾಯಿ) ವರದಕ್ಷಿಣೆ ನೀಡಿರುವುದು ವಿಶೇಷ. ಮದುವೆಯ ನಂತರ ಇಬ್ಬರೂ ವರರು ಸಂಭ್ರಮದಿಂದ ಕೊಳಕ್ಕೆ ಹಾರಿ ಸಂಭ್ರಮಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ವಧು, “ಒಬ್ಬರನ್ನು ಮದುವೆಯಾದರೆ ಯಾರೂ ನೆನಪಿಟ್ಟುಕೊಳ್ಳುವುದಿಲ್ಲ, ಆದರೆ ಇಬ್ಬರನ್ನು ಏಕಕಾಲಕ್ಕೆ ಮದುವೆಯಾದರೆ ಎಲ್ಲರಿಗೂ ನೆನಪಿರುತ್ತದೆ” ಎಂದು ತಮಾಷೆಯಾಗಿ ಹೇಳಿದ್ದಾರೆ. ಆದರೆ, ಥೈಲ್ಯಾಂಡ್ ಕಾನೂನಿನ ಪ್ರಕಾರ ಬಹುಪತ್ನಿತ್ವ ಅಥವಾ ಬಹುಪತಿತ್ವಕ್ಕೆ ಅಧಿಕೃತ ಮಾನ್ಯತೆ ಇಲ್ಲದ ಕಾರಣ, ಸರ್ಕಾರಿ ದಾಖಲೆಗಳಲ್ಲಿ ಕೇವಲ ಒಬ್ಬರೊಂದಿಗೆ ಮಾತ್ರ ಮದುವೆ ನೋಂದಣಿ ಮಾಡಲು ಅವಕಾಶವಿದೆ.

https://www.facebook.com/permalink.php?story_fbid=122161170218663838&id=61569915145916&ref=embed_post

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular