HomeLatest Newsಕೋರ್ಟ್ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ; ಮಹಿಳೆ ಸಾವು; ಮೂವರ ಸ್ಥಿತಿ ಗಂಭೀರ

ಕೋರ್ಟ್ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ; ಮಹಿಳೆ ಸಾವು; ಮೂವರ ಸ್ಥಿತಿ ಗಂಭೀರ

ಹೈದರಾಬಾದ್: ಕುಟುಂಬವೊಂಡು ನ್ಯಾಯಾಲಯದ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ಘಟನೆಯಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ.

ತೆಲಂಗಾಣದಲ್ಲಿ ಈ ಘಟನೆ ನಡೆದಿದ್ದು, ಕೋರ್ಟ್ ಕಟ್ಟಡದಿಂದ ಜಿಗಿದು ಮಹಿಳೆ, ಆಕೆಯ ಪತಿ ಹಾಗೂ ಇಬ್ಬರು ಮಕ್ಕಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕಟ್ಟಡದಿಂದ ಜಿಗಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪಿದ್ದಾರೆ. ಪತಿ ಹಾಗೂ ಆಕೆಯ ಇಬ್ಬರು ಮಕ್ಕಳ ಸ್ಥಿತಿ ಗಂಭೀರವಾಗಿದೆ.

ರಮ್ಯಾ ಮೃತ ಮಹಿಳೆ ಎಂದು ತಿಳಿದುಬಂದಿದೆ. ರಾಯಂಪೇಟೆ ಮಂಡಲದ ಲಕ್ಷ್ಮಾಪುರ ನಿವಾಸಿಯಾದ ರಮ್ಯಾ, ದೌಲತಾಬಾದ್ ನ ನವೀನ್ ಅನ್ನು ಪ್ರೇಮ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು. ಕೌಟುಂಬಿಕ ಕಲಹದಿಂದಾಗಿ ಪತಿ-ಪತ್ನಿ ನಡುವೆ ಗಲಾಟೆಯಾಗಿದೆ. ನವೀನ್ ತನ್ನ ಪತ್ನಿ ಮನೆಯ ಮೇಲೆಯೇ ಕಳೆದ ವರ್ಷ ಬಾಂಬ್ ಎಸೆದು ಜೈಲಿಗೆ ಸೇರಿದ್ದ. ಬಿಡುಗಡೆಯಾಗಿ ಬಂದ ಬಳಿಕವೂ ಪತ್ನ ಜೊತೆ ಗಲಾಟೆ ಮಾಡಿಕೊಂಡಿದ್ದ. ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೀಗ ಕುಟುಂಬ ನ್ಯಾಯಾಲಯದ ಕಟ್ಟಡದ ಮೇಲಿಂದ ಜಿಗಿದಿದ್ದು, ಆತ್ಮಹತ್ಯೆಗೆ ಯತ್ನಿಸಿ ರಮ್ಯಾ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ ಮೂವರ ಸ್ಥಿತಿ ಗಂಭೀರವಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular