HomeIndiaಬೈಕ್​ಗಳ ಅಪಘಾತ - ಇಬ್ಬರ ಸಾವು: ಭಯಾನಕ ವಿಡಿಯೋ ವೈರಲ್​

ಬೈಕ್​ಗಳ ಅಪಘಾತ – ಇಬ್ಬರ ಸಾವು: ಭಯಾನಕ ವಿಡಿಯೋ ವೈರಲ್​

ತೆಲಂಗಾಣದ ಕರೀಂನಾಗಾ ಜಿಲ್ಲೆಯಲ್ಲಿ ಭಯಾನಕ ರಸ್ತೆ ಅಪಘಾತ ನಡೆದಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ. ಒಬ್ಬ ಬೈಕರ್​ ಹಿಂದೆ ಮುಂದೆ ನೋಡದೆ ಯೂಟರ್ನ್​ ಮಾಡಲು ಹೋಗಿದ್ದೇ ಈ ಅವಘಡಕ್ಕೆ ಕಾರಣವಾಗಿದೆ.

ಯೂಟರ್ನ್​ ಮಾಡಲು ಹೋದ ಬೈಕ್​ ಸವಾರ ಚೆನ್ನಾಗಿದ್ದು, ಬೇರೆ ಇಬ್ಬರು ಮೃತಪಟ್ಟಿದ್ದಾರೆ!

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರ ಘಟನೆ ಸಿಸಿ ಟಿವಿಯಲ್ಲಿ ದಾಖಲಾಗಿದೆ. ವಿಡಿಯೋದಲ್ಲಿ ಒಬ್ಬಾತ ಬೈಕ್​ ಅನ್ನು ಯೂಟರ್ನ್​ ಮಾಡಲು ಹೋದದ್ದನ್ನು ನೋಡಬಹುದು. ಈ ಸಂದರ್ಭದಲ್ಲಿ ಹಿಂದುಗಡೆಯಿಂದ ವೇಗದಲ್ಲಿ ಬರುತ್ತಿದ್ದ ಬೈಕ್​ ಸವಾರ ಅವನಿಗೆ ಡಿಕ್ಕಿ ಹೊಡೆದಿದ್ದಾನೆ. ಯೂಟರ್ನ್​ ಮಾಡಲು ಹೋದವ ಬಿದ್ದಿದ್ದಾನೆ.

ಆದರೆ ನಿಯಂತ್ರಣ ಕಳೆದುಕೊಂಡ ಹಿಂದಿನ ಬೈಕ್​ ಸವಾರ ಮುಂದೆ ಬರುತ್ತಿದ್ದ ಬೈಕ್​ಗೆ ಗುದ್ದಿದ್ದಾನೆ. ಅಲ್ಲಿ ಭಯಾನಕ ಅಪಘಾತ ನಡೆದಿದ್ದು, ಇಬ್ಬರೂ ಬಿದ್ದಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆದರೆ ಯೂಟರ್ನ್​ ಮಾಡಿ ಈ ಆವಾಂತರಕ್ಕೆ ಕಾರಣವಾದವ ಆರಾಮಾಗಿ ಎದ್ದಿದ್ದಾನೆ. ನಂತರ ಮುಂದೆ ಡಿಕ್ಕಿಯಾದ ಬೈಕ್​ನಲ್ಲಿ ಇದ್ದವರು ಇಬ್ಬರು ಮೃತಪಟ್ಟಿದ್ದರೆ, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular