HomeLatest Newsಯುಟ್ಯೂಬರ್ 'ಫುಡ್ ಜಿಹಾದ್' ಆರೋಪ ಧಿಕ್ಕರಿಸಿದ ಜನತೆ; ಮುಸ್ಲಿಂ ವ್ಯಾಪಾರಿಗೆ ಜೈ ಎಂದ ಹಿಂದೂಗಳು: ವಿಡಿಯೊ

ಯುಟ್ಯೂಬರ್ ‘ಫುಡ್ ಜಿಹಾದ್’ ಆರೋಪ ಧಿಕ್ಕರಿಸಿದ ಜನತೆ; ಮುಸ್ಲಿಂ ವ್ಯಾಪಾರಿಗೆ ಜೈ ಎಂದ ಹಿಂದೂಗಳು: ವಿಡಿಯೊ

ಸಾಮಾಜಿಕ ಜಾಲತಾಣದಲ್ಲಿ ಧರ್ಮಗಳ ಹೆಸರಿನಲ್ಲಿ ವಿಡಿಯೊ ಮಾಡಿ ವೀಕ್ಷಣೆ ಪಡೆದುಕೊಳ್ಳುವ ಶೋಕಿಗೆ ಬಿದ್ದವರ ಸಂಖ್ಯೆ ಕಡಿಮೆಯೇನಿಲ್ಲ. ಸುಖಾಸುಮ್ಮನೆ ಕ್ಯಾಮೆರಾ, ಮೈಕ್ ಹಿಡಿದು ಆರೋಪ ಮಾಡಿ ಎರಡು ಧರ್ಮಗಳ ನಡುವೆ ಬೆಂಕಿ ಹಚ್ಚುವ ಕಿಡಿಗೇಡಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದಾರೆ.

ಇನ್ನು ಇಂಥವರ ಪಿತೂರಿಗೆ ಬಲಿಯಾಗುತ್ತಿರುವವರು ಮಾತ್ರ ಬಡ ವ್ಯಾಪಾರಿಗಳು. ಇದೇ ಸಾಲಿಗೆ ಸೇರುತ್ತಿದೆ ಇತ್ತೀಚೆಗೆ ತೆಲಂಗಾಣದ ‘ಫುಡ್ ಜಿಹಾದ್’ ವೈರಲ್ ವಿಡಿಯೊ. ತೇಜಸ್ವಿನಿ ನ್ಯೂಸ್ ಎಂಬ ಯುಟ್ಯೂಬ್ ಚಾನೆಲ್‌ನ ನಿರೂಪಕ ರಸ್ತೆ ಬದಿಯಲ್ಲಿ ಬನ್‌ಗೆ ಕೋವಾ ಹಾಕಿ ಮಾರುತ್ತಿದ್ದ ಮುಸ್ಲಿಂ ವ್ಯಕ್ತಿ ವಲಿ ಎಂಬಾತನ ಬಳಿ ಬಂದು ಬನ್ ಕವರ್ ಮೇಲಿನ ಎಕ್ಸ್‌ಪೈರಿ ಡೇಟ್ ತೋರಿಸುವಂತೆ ತಾಕೀತು ಮಾಡಿದ್ದ.

ಅಲ್ಲದೇ ಆತನ ಆಧಾರ್ ಕಾರ್ಡ್ ಕೇಳಿ ಆತ ತಯಾರಿಸುತ್ತಿರುವ ತಿನಿಸು ಎಷ್ಟು ಸೇಫ್ ಎಂದು ಪ್ರಶ್ನಿಸಿ ಇದು ಫುಡ್ ಜಿಹಾದ್ ಎಂದು ಆರೋಪಿಸಿದ್ದ. ಇದನ್ನು ತಿನ್ನುವ ಮಕ್ಕಳ ಗತಿಯೇನು ಎಂದು ಪ್ರಶ್ನೆ ಹಾಕಿ ಆ ಮುಸ್ಲಿಂ ವ್ಯಕ್ತಿ ಮೇಲೆ ಜನರಲ್ಲಿ ಅನುಮಾನ ಮೂಡುವ ಯತ್ನ ಮಾಡಿದ್ದ. ಇನ್ನು ಆತನಿಗೆ ಸಾಥ್ ಕೊಡಲೆಂದೇ ಸಿದ್ದರಾಗಿ ಬಂದಿದ್ದ ಇತರರು ಇದು ಸೇಫ್ ಅಲ್ಲ ಎಂದು ಬೊಬ್ಬೆ ಹೊಡೆದು ಎಲ್ಲರಿಗೂ ಇದನ್ನು ಮಾರಾಟ ಮಾಡುವ ನೀವೇ ಇದನ್ನು ತಿನ್ನುವುದಿಲ್ಲ ಎಂದಿದ್ದರು. ಹೀಗೆ ತನ್ನ ಮೇಲೆ ಆರೋಪ ಕೇಳಿಬರುತ್ತಿದ್ದಂತೆ ಆ ಮುಸ್ಲಿಂ ವ್ಯಾಪಾರಿ ತಾನು ಮಾರುತ್ತಿದ್ದ ತಿನಿಸನ್ನು ಕ್ಯಾಮೆರಾ ಮುಂದೆಯೇ ತಿಂದು ತೋರಿಸಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಷ್ಟಾದರೂ ಸಹ ಆ ವಿಡಿಯೊ ಫುಡ್ ಜಿಹಾದ್ ಹೆಸರಿನಡಿಯಲ್ಲಿ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಮಾರಾಟ ಮಾಡುವ ಮುಸ್ಲಿಂ ವ್ಯಕ್ತಿಗಳ ಬಳಿ ಯಾರೂ ತಿನಿಸುಗಳನ್ನು ಖರೀದಿಸಬೇಡಿ ಎಂದು ಕಾಮೆಂಟ್‌ಗಳು ಹರಿದುಬಂದಿದ್ದವು.

ಆದರೆ ಜನತೆ ಮಾತ್ರ ಇದನ್ನು ಒಪ್ಪಲು ಸಿದ್ಧರಿಲ್ಲ. ಮುಸ್ಲಿಂ ವ್ಯಕ್ತಿ ಮನೆ ಬಳಿಗೆ ಬಂದು ಆತ ಮಾರುತ್ತಿದ್ದ ತಿನಿಸನ್ನು ಸ್ವೀಕರಿಸಿ ತಿಂದು ತಾವು ತುಂಬಾ ವರ್ಷಗಳಿಂದ ಇವರ ಬಳಿ ತಿನಿಸು ಖರೀದಿಸಿ ತಿನ್ನುತ್ತಿದ್ದು, ತಮಗೆ ಏನೂ ಸಹ ಆಗಿಲ್ಲ, ಹಿಂದೂ – ಮುಸ್ಲಿಮರು ಚೆನ್ನಾಗಿಯೇ ಇದ್ದೇವೆ, ನಮ್ಮ ಮಧ್ಯೆ ದ್ವೇಷ ಹುಟ್ಟುಹಾಕಬೇಡಿ ಎಂದು ಸ್ವತಃ ಹಿಂದೂಗಳೇ ಹೇಳಿಕೆ ನೀಡಿ ಮುಸ್ಲಿಂ ವ್ಯಾಪಾರಿಗೆ ಬೆಂಬಲ ನೀಡಿದ್ದಾರೆ.

ಇನ್ನು ಆ ಮುಸ್ಲಿಂ ವ್ಯಕ್ತಿ ಸಹ ತನ್ನ ಪುಟ್ಟ ಮಗುವಿಗೆ ಅದೇ ತಿನಿಸನ್ನು ತಿನ್ನಿಸಿ ತಾನು ಜೀವನಕ್ಕಾಗಿ ಮಾಡುತ್ತಿರುವ ಕೆಲಸವನ್ನು ಗೌರವಿಸಿದ್ದಾರೆ. ಒಟ್ಟಿನಲ್ಲಿ ಫುಡ್ ಜಿಹಾದ್ ಆರೋಪ ಮಾಡಿ ಮಾಡಿದ್ದ ಆ ವ್ಯಕ್ತಿಗೆ ಸ್ವತಃ ಹಿಂದೂಗಳೇ ಕೌಂಟರ್ ಕೊಟ್ಟಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular