HomeIndiaಬೆಚ್ಚಿಬಿದ್ದ ಎಸಿಬಿ ಅಧಿಕಾರಿಗಳು: ಸಾರಿಗೆ ಅಧಿಕಾರಿ ಸಂಬಳ 1 ಲಕ್ಷ, ಆಸ್ತಿ 100 ಕೋಟಿ! 

ಬೆಚ್ಚಿಬಿದ್ದ ಎಸಿಬಿ ಅಧಿಕಾರಿಗಳು: ಸಾರಿಗೆ ಅಧಿಕಾರಿ ಸಂಬಳ 1 ಲಕ್ಷ, ಆಸ್ತಿ 100 ಕೋಟಿ! 

ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ಮಹಬೂಬ್ ನಗರ ಜಿಲ್ಲೆಯ ಉಪ ಸಾರಿಗೆ ಆಯುಕ್ತ ಮೂದ್ ಕಿಶನ್ ವಿರುದ್ಧ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ ದೂರಿನ ಅನ್ವಯ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಪತ್ತೆಯಾದ ಆಸ್ತಿ ಸುಮಾರು 100 ಕೋಟಿ ರೂ.ಗಳು.

ಐಷಾರಾಮಿ ಹೋಟೆಲ್‌ನಲ್ಲಿ ಪಾಲು, ಕೋಟ್ಯಾಂತರ ರೂಪಾಯಿ ಮೌಲ್ಯದ ಫ್ಲ್ಯಾಟ್‌ಗಳು, ಕೃಷಿ ಭೂಮಿ, ವಾಹನ, ನಗದು, ಚಿನ್ನ, ಬೆಳ್ಳಿ ಸರ್ಕಾರಿ ಅಧಿಕಾರಿ ಮೂದ್ ಕಿಶನ್ ಆಸ್ತಿಗೂ ಅವರ ವೇತನಕ್ಕೂ ಹೊಂದಾಣಿಕೆಯೇ ಆಗುತ್ತಿಲ್ಲ.

ಎಸಿಬಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ಮಾಡಿ ಮೂದ್ ಕಿಶನ್ ವಿರುದ್ಧ ಅಕ್ರಮ ಆಸ್ತಿಗಳಿಕೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರೆಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ತೆಲಂಗಾಣ ಎಸಿಬಿ ನಡೆಸಿದ ಬಹುದೊಡ್ಡ ದಾಳಿ ಇದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೂದ್ ಕಿಶನ್ ಆಸ್ತಿ, ವೇತನ: ಮಹಬೂಬ್ ನಗರ ಜಿಲ್ಲೆಯ ಉಪ ಸಾರಿಗೆ ಆಯುಕ್ತ ಮೂದ್ ಕಿಶನ್ ನಿವಾಸ, ಸೇರಿದಂತೆ ಅವರ ಸಂಬಂಧಿಕರಿಗೆ ಮತ್ತು ಆಪ್ತರಿಗೆ ಸೇರಿದ ಒಟ್ಟು 12 ಸ್ಥಳಗಳಲ್ಲಿ ಏಕಕಾಲಕ್ಕೆ ಎಸಿಬಿ ದಾಳಿ ಮಾಡಿತ್ತು.

ಈ ದಾಳಿಯ ಸಂದರ್ಭದಲ್ಲಿ ಸುಮಾರು 100 ಕೋಟಿ ರೂ. ಆಸ್ತಿ ಪತ್ತೆಯಾಗಿದೆ. ವಾಣಿಜ್ಯ ಸಂಕೀರ್ಣವನ್ನು ಬಾಡಿಗೆಗೆ ನೀಡಲಾಗಿದೆ. ಸರ್ಕಾರಿ ಅಧಿಕಾರಿಯ ಚರ ಮತ್ತು ಸ್ಥಿರ ಆಸ್ತಿಗಳ ಪಟ್ಟಿಯನ್ನು ಎಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.

  • ಲಹರಿ ಇಂಟರ್ನ್ಯಾಷನಲ್ ಹೋಟೆಲ್‌ನಲ್ಲಿ ಶೇ. 50ರಷ್ಟು ಪಾಲು, 3000 ಚದರ ಅಡಿಯ ರಾಯಲ್ ಓಕ್ ಫರ್ನಿಚರ್ ಸಂಕೀರ್ಣ, ನಿಜಾಮಾಬಾದ್‌ನಲ್ಲಿ 10 ಎಕರೆ ವಾಣಿಜ್ಯ ಭೂಮಿ.
  • ಅಶೋಕ ಟೌನ್‌ಶಿಪ್‌ನಲ್ಲಿ 2 ಫ್ಲ್ಯಾಟ್‌ಗಳು.
  • ಸಂಗಾರೆಡ್ಡಿ ಜಿಲ್ಲೆಯ ನಿಜಾಂಪೇಟ್ ಮಂಡಲದಲ್ಲಿ 31 ಎಕರೆ ಕೃಷಿ ಭೂಮಿ, ಪಾಲಿಹೌಸ್ ಮತ್ತು 4000 ಚದರ ಅಡಿಯ ಶೆಡ್.
  • ಇನ್ನೋವಾ ಕ್ರಿಸ್ಟಾ ಮತ್ತು ಹೋಂಡಾ ಸಿಟಿ ಕಾರುಗಳು.
  • 1000.4 ಗ್ರಾಂ ಚಿನ್ನಾಭರಣಗಳು ಮತ್ತು 1.37 ಕೋಟಿ ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್.

ಸದ್ಯ ಸಂಗ್ರಹ ಮಾಡಿರುವ ದಾಖಲೆಗಳ ಮೌಲ್ಯದ ಪ್ರಕಾರ ಪತ್ತೆಯಾದ ಒಟ್ಟು ಆಸ್ತಿಯ ಮೌಲ್ಯ ಸುಮಾರು 12.72 ಕೋಟಿ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಎಸಿಬಿ ಅಧಿಕಾರಿಗಳು ಹೇಳಿದ್ದಾರೆ.

ಸರ್ಕಾರದ ಮಾಹಿತಿ ಪ್ರಕಾರ ಮೂದ್ ಕಿಶನ್ ಮಾಸಿಕ ವೇತನ 1 ರಿಂದ 1.15 ಲಕ್ಷಗಳು. ಆದರೆ ಅವರ ಆಸ್ತಿ ಮೌಲ್ಯ ಅದಕ್ಕಿಂತಲೂ ಹೆಚ್ಚಾಗಿದ್ದು, ಸಂಬಂಧಿಕರು, ಆಪ್ತರ ಹೆಸರಿನಲ್ಲಿ ಸಹ ಆಸ್ತಿಗಳನ್ನು ನೋಂದಣಿ ಮಾಡಿಸಿದ್ದಾರೆ.

ಅಕ್ರಮ ಆಸ್ತಿಗಳಿಕೆ, ಭ್ರಷ್ಟಾಚಾರ ನಿಗ್ರಹ ಕಾಯ್ದೆ 13(1) ಬಿ, 13(2)ರ ಅಡಿ ಮೂದ್ ಕಿಶನ್ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ಎಸಿಬಿ ಅಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದಾರೆ.

ಎಸಿಬಿ ಅಧಿಕಾರಿಗಳು ಮೂದ್ ಕಿಶನ್ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಕೋರ್ಟ್ ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶವನ್ನು ಹೊರಡಿಸಿದೆ.

ಮೂದ್ ಕಿಶನ್ ಶ್ಯಾಡೋ ಎಂಫೈರ್ ಎಂಬ ಕಂಪನಿಯನ್ನು ಹೊಂದಿದ್ದು, ಆಸ್ಪತ್ರೆ, ರಿಯಲ್ ಎಸ್ಟೇಟ್ ಸೇರಿದಂತೆ ವಿವಿಧ ಮಾದರಿ ಸೇವೆಗಳನ್ನು ಅದು ನೀಡುತ್ತದೆ. ಸರ್ಕಾರಿ ಅಧಿಕಾರಿಯ ಅಕ್ರಮ ಆಸ್ತಿ ಬಗ್ಗೆ ಖಚಿತ ಮಾಹಿತಿ ಆಧರಿಸಿ ಈ ದಾಳಿಯನ್ನು ಎಸಿಬಿ ನಡೆಸಿತ್ತು, ಇನ್ನೂ ಸಹ ಹಲವಾರು ಜನರ ಹೆಸರಿನಲ್ಲಿರುವ ಆಸ್ತಿಗಳ ಕುರಿತು ಎಸಿಬಿ ತನಿಖೆ ಮುಂದುವರೆದಿದೆ. ಮೂದ್ ಕಿಶನ್ ಹೂಡಿಕೆ, ಬ್ಯಾಂಕ್ ಲಾಕರ್‌ಗಳ ಪರಿಶೀಲನೆ ಇನ್ನೂ ಸಹ ನಡೆಯುತ್ತಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular