HomeKarnatakaBREAKING: ಸ್ನೇಹಿತರೊಂದಿಗೆ ಜಲಪಾತ ನೋಡಲು ಬಂದಾಗಲೇ ದುರಂತ: ಕಾಲು ಮುರಿದುಕೊಂಡ ಟೆಕ್ಕಿ

BREAKING: ಸ್ನೇಹಿತರೊಂದಿಗೆ ಜಲಪಾತ ನೋಡಲು ಬಂದಾಗಲೇ ದುರಂತ: ಕಾಲು ಮುರಿದುಕೊಂಡ ಟೆಕ್ಕಿ

ಚಿಕ್ಕಬಳ್ಳಾಪುರ: ಫಾಲ್ಸ್ ನೋಡಲು ಬಂದ ಟೆಕ್ಕಿ ಕಾಲು ಮುರಿದುಕೊಂಡ ಘಟನೆ ಕೇತನಹಳ್ಳಿ ಜಲಪಾತದ ಬಳಿ ನಡೆದಿದೆ.

ಮುಂಬೈ ಮೂಲದ ಟೆಕ್ಕಿ ಅರ್ಪಿತಾ ಕಾಲು ಮುರಿದುಕೊಂಡವರು. ಚಿಕ್ಕಬಳ್ಳಾಪುರ ತಾಲೂಕಿನ ಕೇತನಹಳ್ಳಿ ಜಲಪಾತದ ಬಳಿ ಅವರು ಜಾರಿ ಬಿದ್ದಿದ್ದು, ಅವರ ಕಾಲು ಮುರಿದಿದೆ. ಸ್ನೇಹಿತರೊಂದಿಗೆ ಫಾಲ್ಸ್ ನೋಡಲು ಬಂದಿದ್ದಾಗ ಘಟನೆ ನಡೆದಿದೆ. ಕಾಡಿನ ಹಾದಿಯಲ್ಲಿ ಬರುವಾಗ ಅವರು ಜಾರಿ ಬಿದ್ದಿದ್ದಾರೆ.

ಕಾಡಿನ ಹಾದಿಯಲ್ಲಿ ಬರುವಾಗ ಜಾರಿ ಬಿದ್ದು, ಕಾಲು ಮುರಿದುಕೊಂಡಿದ್ದ ಅರ್ಪಿತಾ ಅವರನ್ನು ಸ್ನೇಹಿತರು ಸ್ಟ್ರೆಚರ್ ನಲ್ಲಿ 2 ಕಿಮೀ ಹೊತ್ತು ಕರೆತಂದಿದ್ದಾರೆ. ಅವರನ್ನು ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular