HomeEntertainment'ತಾಜ್' ಚಿತ್ರದ ಟೀಸರ್ ರಿಲೀಸ್

‘ತಾಜ್’ ಚಿತ್ರದ ಟೀಸರ್ ರಿಲೀಸ್

ರಾಜರತ್ನ ರಚಿಸಿ ನಿರ್ದೇಶಿಸಿರುವ ತಾಜ್ ಚಿತ್ರದ ಟೀಸರ್ ಟೀಸರನ್ನು ನಿನ್ನೆ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ನೋಡುಗರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ. ನಟ ಷಣ್ಮುಖ ಜೈ ಅವರ ಖಡಕ್ ಲುಕ್ ಮತ್ತು ಮಾಸ್ ಡೈಲಾಗ್ ಗ್ಗೆ ಸಿನಿಪ್ರೇಕ್ಷಕರು ಫಿದಾ ಆಗಿದ್ದಾರೆ.

ಆಕ್ಷನ್ ಡ್ರಾಮಾ ಕಥಾಧಾರಿತ ಈ ಚಿತ್ರದಲ್ಲಿ ಷಣ್ಮುಖ ಜೈ ಮತ್ತು ಅಪ್ಸರಾ ಮುಖ್ಯ  ಭೂಮಿಕೆಯಲ್ಲಿದ್ದು, ಶೋಭರಾಜ್, ಪದ್ಮ ವಸಂತಿ, ಬಾಲರಾಜ್, ಪಟ್ರೆ ನಾಗರಾಜ್, ವರ್ಧನ್, ಸೂರಜ್, ಕಡ್ಡಿ ವಿಶ್ವ, ಮೈಸೂರು ಜಗದೀಶ್ ಮತ್ತು ಇಂಚರ ಉಳಿದ ಪಾತ್ರ ವರ್ಗದಲ್ಲಿದ್ದಾರೆ.

ಶ್ರೀ ಪಾವನಿ ಲಕ್ಷ್ಮಿ ಕಂಬೈನ್ಡ್ಸ್ ಬ್ಯಾನರ್ ನಲ್ಲಿ ಶ್ರೀಮತಿ ಲಕ್ಷ್ಮಿ ಷಣ್ಮುಖ ಹಾಗೂ ಯರಂಗಳ್ಳಿ ಮರಿಯಮ್ಮ ಬಂಡವಾಳ ಹೂಡಿದ್ದಾರೆ. ಶ್ರೀ ಜವಳಿ ಸಂಕಲನ, ಚಂದ್ರು ಬಂಡೆ ಸಾಹಸ ನಿರ್ದೇಶನ ಹಾಗೂ ಜೈ ಆರ್ಯ ನೃತ್ಯ ನಿರ್ದೇಶನವಿದೆ. ಜೆಸ್ಸಿ ಗಿಫ್ಟ್ ಮತ್ತು ಬಿ.ಆರ್. ಸುರೇಂದ್ರನಾಥ್ ಸಂಗೀತ ಸಂಯೋಜನೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular