HomeEntertainment'ಹರಿಹರ ವೀರ ಮಲ್ಲು' ಚಿತ್ರದ ಟೀಸರ್ ರಿಲೀಸ್

‘ಹರಿಹರ ವೀರ ಮಲ್ಲು’ ಚಿತ್ರದ ಟೀಸರ್ ರಿಲೀಸ್

ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷಿತ ಹರಿಹರ ವೀರ ಮಲ್ಲು ಚಿತ್ರದ ಟೀಸರ್ ಅನ್ನು ಇಂದು ಮೇಘ ಸೂರ್ಯ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಲಾಗಿದೆ.  ಈ ಟೀಸರ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ಯೂಟ್ಯೂಬ್ ನಲ್ಲಿ  ಧೂಳೆಬ್ಬಿಸಿದೆ.

ಕ್ರಿಶ್ ಜಗರ್ಲಾಮುಡಿ ಈ ಚಿತ್ರವನ್ನು ನಿರ್ದೇಶಿಸಿದ್ದು, ಪವನ್ ಕಲ್ಯಾಣ್ ಸೇರಿದಂತೆ ಭಾಭಿ ಡಿಯೋಲ್, ನಿಧಿ ಅಗರ್ವಾಲ್, ವಿಕ್ರಂಜಿತ್, ನೋರಾ ಫತೇಹಿ, ಎಂ. ನಾಸರ್, ಸುನಿಲ್, ರಘುಬಾಬು, ಮತ್ತು ಸುಬ್ಬರಾಜು ಬಣ್ಣ ಹಚ್ಚಿದ್ದಾರೆ. ಎಂಎಂ ಕಿರಾವಾಣಿ ಸಂಗೀತ ಸಂಯೋಜನೆ ನೀಡಿದ್ದು, ಜ್ಞಾನಶೇಖರ್ ಛಾಯಾಗ್ರಹಣ, ಪ್ರವೀಣ್ ಕೆಎಲ್, ಸಂಕಲನವಿದೆ. ಮೇಘ ಸೂರ್ಯ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಎ ದಯಾಕರ್ ರಾವ್ ಮತ್ತು ಏ ಎಂ ರತ್ನಂ ಬಂಡವಾಳ ಹೂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular