HomeKarnatakaBREAKING NEWS: ಅತಿಥಿ ಶಿಕ್ಷಕಿಗೆ ಅಶ್ಲೀಲ ಮೆಸೇಜ್ ಕಳುಹಿಸಿ ಕಿರುಕುಳ ಪ್ರಕರಣ: ಸಹ ಶಿಕ್ಷಕ ಸಸ್ಪೆಂಡ್

BREAKING NEWS: ಅತಿಥಿ ಶಿಕ್ಷಕಿಗೆ ಅಶ್ಲೀಲ ಮೆಸೇಜ್ ಕಳುಹಿಸಿ ಕಿರುಕುಳ ಪ್ರಕರಣ: ಸಹ ಶಿಕ್ಷಕ ಸಸ್ಪೆಂಡ್

ರಾಯಚೂರು: ಅತಿಥಿ ಶಿಕ್ಷಕಿಗೆ ಅಶ್ಲೀಲ ಮೆಸೇಜ್ ಕಳುಹಿಸಿ ಕಿರುಕುಳ ನೀಡುತ್ತಿದ್ದ ಸಹ ಶಿಕ್ಷಕನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ರಾಯಚೂರು ಹೊರವಲಯದಲ್ಲಿರುವ ಆದರ್ಶ ಸರ್ಕಾರಿ ಶಾಲೆಯ ಸಹ ಶಿಕ್ಷಕ ಮೊಹಬೂಬ್ ಅಲಿ ಅಮಾನತುಗೊಂಡಿರುವ ಶಿಕ್ಷಕ. ಮೊಹಬೂಬ್ ಅಲಿ ಆದರ್ಶ್ ಸರ್ಕಾರಿ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಕೂಡ ಆಗಿದ್ದ. ಪ್ರಕರಣದ ಬೆಳಕಿಗೆ ಬರುತ್ತಿದ್ದಂತೆ ರಾಯಚೂರು ಡಿಡಿಪಿಐ ಕೆ.ಡಿ.ಬಡಿಗೇರ್ ಶಿಕ್ಷಕನನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.

ಶಿಕ್ಷಕ ಮೆಹಬೂಬ ಅಲಿ, ಆದರ್ಶ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಗೆ ಅಶ್ಲೀಲವಾಗಿ ಮೆಸೇಜ್ ಕಳುಹಿಸಿ ಮಂಚಕ್ಕೆ ಕರೆದಿದ್ದ. ಶಿಕ್ಷಕನ ಕಿರುಕುಳಕ್ಕೆ ಬೇಸತ್ತು ಶಿಕ್ಷಕಿ ಮನೆಯಲ್ಲಿ ತಿಳಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಾಲೆಗೆ ಧಾವಿಸಿ ಬಂದ ಶಿಕ್ಷಕಿಯ ಕುಟುಂಬದವರು, ಸಾರ್ವಜನಿಕರು ಮೆಹಬೂಬ ಅಲಿಯನ್ನು ಹಿಡಿದು, ಧರ್ಮದೇಟು ನೀಡಿ ಬುದ್ಧಿ ಕಲಿಸಿದ್ದರು. ಮಾಡಿದ ತಪ್ಪಿಗೆ ಶಿಕ್ಷಕ, ಶಿಕ್ಷಕಿಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದ. ಅಲ್ಲದೇ ತಪ್ಪೊಪ್ಪಿಗೆ ಪತ್ರ ಬರೆದು ಕ್ಷಮೆಯಾಚಿಸಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

For Latest News Updates, Join Our Whatsapp Community🚩
RELATED ARTICLES

Most Popular