HomeLatest Newsಹೊಸ ಕಂಪನಿಗಳಲ್ಲಿ ಷೇರು ಹೂಡಿಕೆ ಮಾಡಿದರೆ ತಿಂಗಳಿಗೆ ಶೇ. 300ರಷ್ಟು ಲಾಭ ಎಂದು ನಂಬಿಸಿ ಶಿಕ್ಷಕನಿಗೆ...

ಹೊಸ ಕಂಪನಿಗಳಲ್ಲಿ ಷೇರು ಹೂಡಿಕೆ ಮಾಡಿದರೆ ತಿಂಗಳಿಗೆ ಶೇ. 300ರಷ್ಟು ಲಾಭ ಎಂದು ನಂಬಿಸಿ ಶಿಕ್ಷಕನಿಗೆ 11.93 ಲಕ್ಷ ರೂ. ವಂಚನೆ

ದಾವಣಗೆರೆ: ಹೊಸ ಕಂಪನಿಗಳಲ್ಲಿ ಷೇರು ಹೂಡಿಕೆ ಮಾಡಿದರೆ ತಿಂಗಳಿಗೆ ಶೇಕಡ 300 ರಷ್ಟು ಲಾಭಗಳಿಸಬಹುದು ಎಂದು ನಂಬಿಸಿ ದಾವಣಗೆರೆ ಜಿಲ್ಲೆ ಹೊನ್ನಾಳಿಯ ಶಿಕ್ಷಕರೊಬ್ಬರಿಗೆ ಆನ್ಲೈನ್ ಮೂಲಕ 11.93 ಲಕ್ಷ ರೂಪಾಯಿ ವಂಚನೆ ಎಸಗಿದ್ದ ಘಟನೆ ಬೆಳಕಿಗೆ ಬಂದಿದೆ.

ವಾಟ್ಸಪ್ ಗ್ರೂಪ್ ಗೆ ಶಿಕ್ಷಕರ ಮೊಬೈಲ್ ಸಂಖ್ಯೆಯನ್ನು ಸೇರಿಸಿದ್ದ ವಂಚಕರು ಷೇರು ಹೂಡಿಕೆಗೆ ಉತ್ತೇಜಿಸಿದ್ದರು. ವಂಚಕರು ಹೇಳಿದಂತೆ ಅವರು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಲಾಭದ ಆಸೆಗಾಗಿ ಶಿಕ್ಷಕ ಹಂತ ಹಂತವಾಗಿ 11.93 ಲಕ್ಷ ರೂ. ಮೊತ್ತವನ್ನು ಮತ್ತು ಆನ್ಲೈನ್ ಮೂಲಕ ವರ್ಗಾವಣೆ ಮಾಡಿದ್ದಾರೆ. ಕೊನೆಗೆ ಹಣ ಬಿಡಿಸಿಕೊಳ್ಳಲು ಸಾಧ್ಯವಾಗದಿರುವುದನ್ನು ಪ್ರಶ್ನಿಸಲು ಮುಂದಾದಾಗ ವಂಚಕರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ವಂಚನೆಗೊಳಗಾದ ಶಿಕ್ಷಕ ದಾವಣಗೆರೆಯ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular