HomeIndiaBIG NEWS: ರಸ್ತೆಬದಿ ಕುಳಿತಿದ್ದವರ ಮೇಲೆ ಹರಿದ ವಾಹನ; 7 ಜನರು ದುರ್ಮರಣ

BIG NEWS: ರಸ್ತೆಬದಿ ಕುಳಿತಿದ್ದವರ ಮೇಲೆ ಹರಿದ ವಾಹನ; 7 ಜನರು ದುರ್ಮರಣ

ತಿರುಪತ್ತೂರ್: ಇಂದು ಮುಂಜಾನೆಯಿಂದಲೇ ಸಾಲು ಸಾಲು ಅಪಘಾತ ಪ್ರಕರಣಗಳು ವರದಿಯಾಗುತ್ತಿದ್ದು, ತಿರುಪತ್ತೂರು ಜಿಲ್ಲೆಯಲ್ಲಿ ಕುಳಿತಿದ್ದವರ ಮೇಲೆ ವಾಹನ ಹರಿದು 7 ಜನರು ಸಾವನ್ನಪ್ಪಿರುವ ಘೋರ ಘಟನೆ ನಡೆದಿದೆ.

ತಮಿಳುನಾಡಿನ ತಿರುಪತ್ತೂರು ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ. ಬೆಳಿಗ್ಗೆ ರಸ್ತೆ ಬದಿ ಕುಳಿತಿದ್ದವರ ಮೇಲೆ ಸರಕು ಸಾಗಣೆ ವಾಹನವೊಂದು ಹರಿದು ಹೋಗಿದೆ. ಪರಿಣಾಮ 7 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೃತರು ತಮ್ಮ ವಾಹನದಲ್ಲಿ ಸಮಸ್ಯೆಯಾಗಿದ್ದರಿಂದ ಕೆಟ್ಟು ನಿಂತಿತ್ತು. ಹಾಗಾಗಿ ರಸ್ತೆಬದಿ ಕುಳಿತುಕೊಂಡಿದ್ದರು. ಈ ವೇಳೆ ಸರಕು ಸಾಗಣೆ ವಾಹನವೊಂದು ಬರುತ್ತಿತ್ತು. ಆ ವಾಹನಕ್ಕೆ ವೇಗವಾಗಿ ಬಂದ ಲಾರಿಯೊಂದು ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆಬದಿ ಕುಳಿತಿದ್ದ ಜನರ ಮೇಲೆ ವಾಹನ ಹರಿದು ಈ ದುರಂತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular