HomeLatest Newsಚುನಾವಣೆಯಲ್ಲಿ ಸೋಲಿಸಿ ಸ್ಟಾಲಿನ್ ಮುಗಿಸಿದೆ ಎಂದು ಬೀಗುತ್ತಿರುವ 'ಟಿವಿಕೆ ಬಾಬು' ಮೊದಲು ಎಂಎಲ್‌ಎ ಆಗಿದ್ದು ಡಿಎಂಕೆಯಿಂದಲೇ;...

ಚುನಾವಣೆಯಲ್ಲಿ ಸೋಲಿಸಿ ಸ್ಟಾಲಿನ್ ಮುಗಿಸಿದೆ ಎಂದು ಬೀಗುತ್ತಿರುವ ‘ಟಿವಿಕೆ ಬಾಬು’ ಮೊದಲು ಎಂಎಲ್‌ಎ ಆಗಿದ್ದು ಡಿಎಂಕೆಯಿಂದಲೇ; ಇದು ‘ನೀನೇ ಸಾಕಿದ ಗಿಣಿ ಕಥೆ’!

ನಿನ್ನೆ ( ಮೇ 4 ) ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿತ್ತು. ಟಿವಿಕೆ 108 ಸ್ಥಾನಗಳಲ್ಲಿ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, ಡಿಎಂಕೆ 59 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡು ಅಧಿಕಾರ ಕಳೆದುಕೊಂಡಿತು.

ಇನ್ನು ತಮಿಳುನಾಡಿನ ಈ ಫಲಿತಾಂಶ ಅನಿರೀಕ್ಷಿತವೆಂದೇ ಹೇಳಲಾಗುತ್ತಿದ್ದು, ಸ್ಟಾಲಿನ್ ನೇತೃತ್ವದ ಡಿಎಂಕೆ ವಿರುದ್ಧ ಟಿವಿಕೆ ಈ ಮಟ್ಟಿಗೆ ಗೆಲ್ಲಲಿದೆ ಎಂದು ಯಾರೂ ಊಹಿಸಿರಲಿಲ್ಲ. ಇನ್ನು ಡಿಎಂಕೆ ಸೋಲಿಗಿಂತ ಹೆಚ್ಚು ಅಚ್ಚರಿ ಹುಟ್ಟುಹಾಕಿದ್ದು ಸ್ಟಾಲಿನ್ ಸೋಲು.

ಹೌದು, ತನ್ನ ಕ್ಷೇತ್ರದಲ್ಲಿ ಯಾರೂ ಮಾಡಿರದ ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡಿದ ಹೊರತಾಗಿಯೂ ಸ್ಟಾಲಿನ್‌ಗೆ ಜನತೆ ಸೋಲುಣಿಸಿದರು. ವಿಜಯ್ ಅಲೆಯೋ, ಉಚಿತ ಭಾಗ್ಯಗಳ ಒಲವೋ, ಸ್ಟಾಲಿನ್‌ಗೆ ಸೋಲನ್ನು ತಂದಿಟ್ಟಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1996ರ ಚುನಾವಣೆಯಿಂದ 2021ರ ಚುನಾವಣೆವರೆಗೆ ಸೋಲೇ ಇಲ್ಲದೇ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದ ಸ್ಟಾಲಿನ್‌ಗೆ ಈ ಬಾರಿ ಟಿವಿಕೆ ಪಕ್ಷದ ವಿಎಸ್‌ ಬಾಬು ಸೋಲುಣಿಸಿದ್ದಾರೆ. ಕೊಳತ್ತೂರು ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ವಿಎಸ್‌ ಬಾಬು ಇದೇ ಕ್ಷೇತ್ರದಲ್ಲಿ ಸತತ ಮೂರು ಬಾರಿ ಗೆದ್ದಿದ್ದ ಸ್ಟಾಲಿನ್‌ ವಿರುದ್ಧ 8795 ಮತಗಳ ಅಂತರದಿಂದ ಗೆಲುವು ಕಂಡರು.

ಸ್ಟಾಲಿನ್ 74202 ಮತಗಳನ್ನು ಪಡೆದರೆ, ವಿಎಸ್ ಬಾಬು 82997 ಮತಗಳನ್ನು ಪಡೆದುಕೊಂಡರು. ಮುಖ್ಯಮಂತ್ರಿ ಸ್ಥಾನದಲ್ಲಿದ್ದ ಸ್ಟಾಲಿನ್ ಅವರನ್ನೇ ಸೋಲಿಸಿದ ವಿಎಸ್ ಬಾಬು ಚುನಾವಣೆಗೂ ಮುನ್ನ ಸ್ಟಾಲಿನ್ ಮಾಡಿದ್ದ ‘ಎಲ್ಲ ಮುಗಿಯಿತು’ ಎಂಬ ಕೈ ಸನ್ನೆಯ ಸೆಲೆಬ್ರೇಷನ್ ಮಾಡಿದ್ದರು.

ಹೀಗೆ ಸ್ಟಾಲಿನ್‌ಗೆ ದುಸ್ವಪ್ನವಾಗಿ ಪರಿಣಮಿಸಿದ ಈ ವಿಎಸ್ ಬಾಬು ಬೇರೆ ಯಾರೂ ಅಲ್ಲ, ಇದೇ ಡಿಎಂಕೆ ಪಕ್ಷದ ಮೂಲಕ ರಾಜಕೀಯಕ್ಕೆ ಪದಾರ್ಪಣೆ ಮಾಡಿದವರು. ಡಿಎಂಕೆ ಪಕ್ಷದ ಉತ್ತರ ಚೆನ್ನೈ ವಿಭಾಗದ ಕಾರ್ಯದರ್ಶಿ ಜವಾಬ್ದಾರಿ ಹೊರುವ ಮುನ್ನ ಸಣ್ಣ ಕಾರ್ಯಕರ್ತನಾಗಿ ಕೆಲಸ ಮಾಡಿದ್ದ ವಿಎಸ್ ಬಾಬು ಕಾಲಕ್ರಮೇಣ ಚೆನ್ನೈ ನಗರ ರಾಜಕೀಯದಲ್ಲಿ ಹೆಸರು ಮಾಡಿದರು.

2006ರ ಚುನಾವಣೆಯಲ್ಲಿ ಪುರಸವಲ್ಕಮ್ ಕ್ಷೇತ್ರದಲ್ಲಿ ಡಿಎಂಕೆ ಪರ ಕಣಕ್ಕಿಳಿದ ವಿಎಸ್ ಬಾಬು ಗೆದ್ದು ಎಂಎಲ್‌ಎಯಾಗಿ ಹೊರಹೊಮ್ಮಿದರು. ಆದರೆ ಕಾಲ ಕಳೆದಂತೆ ಪಕ್ಷದ ಹಿರಿಯ ನಾಯಕರ ಬೆಳವಣಿಗೆಯಿಂದಾಗಿ ವಿಎಸ್ ಬಾಬುಗೆ ಇದಕ್ಕಿಂತ ಹೆಚ್ಚಿನ ಸ್ಥಾನ ದೊರಕಲಿಲ್ಲ. ಜತೆಗೆ ಪಕ್ಷದ ಪ್ರಮುಖ ಜವಾಬ್ದಾರಿಗಳಿಂದಲೂ ಬಾಬು ಅವರನ್ನು ಕೈಬಿಡಲಾಯಿತು.

ಇದರಿಂದ ಬೇಸರಕ್ಕೊಳಗಾದ ವಿಎಸ್ ಬಾಬು ಡಿಎಂಕೆಯಿಂದ ಹೊರಬಂದು ಎಐಎಡಿಎಂಕೆ ಜತೆ ಕೈಜೋಡಿಸಿದರು. ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಬಾಬು ವಿಜಯ್ ನೇತೃತ್ವದ ಟಿವಿಕೆ ಸೇರ್ಪಡೆಗೊಂಡರು. ಸದ್ಯ ತನ್ನ ಮೊದಲ ಪಕ್ಷದ ನಾಯಕನನ್ನೇ ಸೋಲಿಸಿ ತಮ್ಮ ರಾಜಕೀಯ ಜೀವನದಲ್ಲಿ ಮಹಾ ತಿರುವು ಪಡೆದುಕೊಂಡಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular