HomeLatest Newsತಮಿಳುನಾಡು ಮತ ಎಣಿಕೆ: ಅರ್ಧಶತಕ ಬಾರಿಸಿದ ಡಿಎಂಕೆ, ಆರಂಭದಲ್ಲೇ ವಿಜಯ್ ಟಿವಿಕೆ ಪರದಾಟ!

ತಮಿಳುನಾಡು ಮತ ಎಣಿಕೆ: ಅರ್ಧಶತಕ ಬಾರಿಸಿದ ಡಿಎಂಕೆ, ಆರಂಭದಲ್ಲೇ ವಿಜಯ್ ಟಿವಿಕೆ ಪರದಾಟ!

ಇಂದು ( ಮೇ 4 ) ದೇಶದ ಐದು ರಾಜ್ಯಗಳಾದ ತಮಿಳುನಾಡು, ಕೇರಳಂ, ಪಶ್ಚಿಮ ಬಂಗಾಳ, ಪುದುಚೆರಿ ಹಾಗೂ ಅಸ್ಸಾಂ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ಕಾರ್ಯ ನಡೆಯುತ್ತಿದೆ.

ತಮಿಳುನಾಡಿನಲ್ಲಿ ಬೆಳಗ್ಗೆ ಎಂಟು ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, 8.35ರ ಸಮಯಕ್ಕೆ ಡಿಎಂಕೆ 70, ಎಐಎಡಿಎಂಕೆ 7 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ನಟ ವಿಜಯ್ ಕಟ್ಟಿದ ಹೊಸ ಪಕ್ಷ ಟಿವಿಕೆ ಕೇವಲ 1 ಕ್ಷೇತ್ರದಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ.

ಒಟ್ಟು 234 ವಿಧಾನಸಭಾ ಕ್ಷೇತ್ರಗಳಿರುವ ತಮಿಳುನಾಡಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು 118 ಕ್ಷೇತ್ರಗಳನ್ನು ಗೆಲ್ಲಬೇಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸದ್ಯ ಅಂಚೆ ಮತ ಎಣಿಕೆಯಲ್ಲಿ ಟಿವಿಕೆ ಪಕ್ಷ ಭಾರೀ ಹಿನ್ನಡೆಯನ್ನು ಕಂಡಿದ್ದು, ಚುನಾವಣೆ ಮುನ್ನ ವ್ಯಕ್ತವಾಗಿದ್ದ ವಿಶ್ವಾಸಕ್ಕೂ, ಬೆಂಬಲಕ್ಕೂ ಈಗಿರುವ ಅಂಕಿಗೂ ಸಂಬಂಧವೇ ಇಲ್ಲ ಎಂಬಂತಾಗಿದೆ.

ಇನ್ನು ವಿಜಯ್ ಸ್ಪರ್ಧಿಸಿರುವ ಪೆರಂಬೂರಿನಲ್ಲಿ ತಾವೇ ಆರಂಭಿಕ ಹಿನ್ನಡೆಯನ್ನು ಅನುಭವಿಸಿದ್ದು, ಇದು ಪಕ್ಷಕ್ಕೆ ಭಾರೀ ಹಿನ್ನಡೆಯನ್ನು ತಂದಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular