ಚೆನ್ನೈ: ಬಿಡುಗಡೆಗೆ ನಾನಾ ಅಡೆತಡೆಗಳನ್ನು ಎದುರಿಸುತ್ತಿದ್ದ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅಭಿನಯದ ಕೊನೆಯ ಚಿತ್ರ ‘ಜನನಾಯಗನ್’ ಬಿಡುಗಡೆಗೆ ವಿಘ್ನ ನಿವಾರಣೆಯಾಗಿದೆ.
ಬಿಡುಗಡೆಯಾಗಲು ನಾನಾ ಅಡೆತಡೆಗಳನ್ನು ಎದುರಿಸುತ್ತಿದ್ದ ‘ಜನ ನಾಯಗನ್’ ವಿಜಯ್ ಮುಖ್ಯಮಂತ್ರಿಯಾಗುತ್ತಿದ್ದಂತೆ ವಿಘ್ನ ನಿವಾರಣೆಯಾದಂತಾಗಿದೆ. ಮುಂದಿನ ಎರಡು ವಾರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.
ನಿರ್ಮಾಪಕ ವೆಂಕಟ್ ಕೆ. ನಾರಾಯಣ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜನ ನಾಯಗನ್’ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ನೀಡಬೇಕಾದ ಪ್ರಮಾಣ ಪತ್ರ ಅಂತಿಮ ಅಂತದಲ್ಲಿದ್ದು, ಮಾತುಕತೆ ನಡೆಸುತ್ತಿದ್ದೇವೆ. ತುಂಬಾ ಸಂತೋಷ ಮತ್ತು ಉತ್ಸುಕರಾಗಿದ್ದೇವೆ ಎಂದು ಹೇಳಿದ್ದಾರೆ.
ಈ ವರ್ಷದ ಜನವರಿ 9ರಂದು ಜನನಾಯಗನ್ ಬಿಡುಗಡೆಯಾಗಬೇಕಿತ್ತು, ಆದರೆ ಸೆನ್ಸಾರ್ ಪ್ರಮಾಣ ಪತ್ರ ಸಿಗದೆ ಬಿಡುಗಡೆ ಮುಂದೂಡಿಕೆಯಾಗುತ್ತಾ ಬಂದಿತ್ತು. ಈ ನಡುವೆ ಚಿತ್ರದ ಕೆಲವು ತುಣುಕುಗಳು ಆನ್ಲೈನ್ನಲ್ಲಿಯೂ ಸೋರಿಕೆಯಾಗಿದ್ದವು.

