HomeIndiaತಮಿಳುನಾಡಲ್ಲಿ ಡಿಎಂಕೆ ವಿರುದ್ಧ ಮೈತ್ರಿ ಪಕ್ಷಗಳ ಅಸಮಾಧಾನ

ತಮಿಳುನಾಡಲ್ಲಿ ಡಿಎಂಕೆ ವಿರುದ್ಧ ಮೈತ್ರಿ ಪಕ್ಷಗಳ ಅಸಮಾಧಾನ

ತಮಿಳುನಾಡು ವಿಧಾನಸಭಾ ಚುನಾವಣೆ 2026 ಘೋಷಣೆಯಾಗಿದೆ. ರಾಜ್ಯದ 234 ಸ್ಥಾನಗಳಿಗೆ ಏಪ್ರಿಲ್‌ 23ರಂದು ಚುನಾವಣೆ ನಡೆಯಲಿದೆ. ರಾಜ್ಯದ ಹಾಲಿ ಆಡಳಿತ ಪಕ್ಷ ಡಿಎಂಕೆ. ಎಂ.ಕೆ.ಸ್ಟಾಲಿನ್ ಮುಖ್ಯಮಂತ್ರಿ. ದ್ರಾವಿಡ ಮುನ್ನೇಟ್ರಾ ಕಳಗಂ (ಡಿಎಂಕೆ) ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟ (ಎಸ್‌ಪಿಎ)ದ ಪಕ್ಷಗಳು ಡಿಎಂಕೆ ವಿರುದ್ಧ ಅಸಮಾಧಾನಗೊಂಡಿವೆ.

ಸೀಟು ಹಂಚಿಕೆ ವಿಚಾರದಲ್ಲಿ ಎಸ್‌ಪಿಎ ಮೈತ್ರಿಕೂಟದ ಪಕ್ಷಗಳಲ್ಲಿ ಅಸಮಾಧಾನ ಉಂಟಾಗಿದೆ. ಡಿಎಂಕೆ ಪಕ್ಷ ಸಿಪಿಐ(ಎಂ) ಪಕ್ಷಕ್ಕೆ 5 ಸೀಟುಗಳನ್ನು ನೀಡಿದೆ. ಆದರೆ ಈ ಕುರಿತು ತೀರ್ಮಾನ ಮಾಡಲು ಕಾಲಾವಕಾಶ ಬೇಕು ಎಂದು ಪಕ್ಷ ಹೇಳಿದೆ.

ತಮಿಳಗ ವಳುರಿಮೈ ಕಚ್ಚಿ ಪಕ್ಷದ ಸ್ಥಾಪಕ ಟಿ. ವೇಲ್‌ ಮುರುಗನ್ ಭಾನುವಾರ ಡಿಎಂಕೆ ವಿರುದ್ಧ ಅಸಮಾಧಾನಗೊಂಡಿದ್ದು, ಡಿಎಂಕೆ ದೊಡ್ಡಣ್ಣನಂತೆ ವರ್ತಿಸುತ್ತಿದೆ ಎಂದು ಆರೋಪಿಸಿದ್ದಾರೆ. ಎಸ್‌ಪಿಎ ಮೈತ್ರಿಕೂಟದಿಂದ ಹೊರ ಬರುತ್ತೇವೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

22 ಪಕ್ಷಗಳನ್ನು ಹೊಂದಿರುವ ಬೃಹತ್ ಮೈತ್ರಿಕೂಟ ಎಸ್‌ಪಿಎ. ಹೆಚ್ಚು ಪಕ್ಷಗಳು ಇರುವ ಕಾರಣಕ್ಕೆ ಕಡಿಮೆ ಸಂಖ್ಯೆಯ ಸೀಟುಗಳನ್ನು ಡಿಎಂಕೆ ಪಕ್ಷ ಮೈತ್ರಿಕೂಟದ ಪಕ್ಷಗಳಿಗೆ ಎಂ.ಕೆ.ಸ್ಟಾಲಿನ್ ನೇತೃತ್ವದಲ್ಲಿಯೇ ಹಂಚಿಕೆ ಮಾಡುತ್ತಿದೆ.

ಆದರೆ ಇದು ಅಸಮಾಧಾನಕ್ಕೆ ಕಾರಣವಾಗಿದೆ. ತಮಿಳಗ ವಳುರಿಮೈ ಕಚ್ಚಿ ನಾಯಕ ಟಿ. ವೇಲ್ಮುರುಗನ್ ಡಿಎಂಕೆ ನೇತೃತ್ವದ ಮೈತ್ರಿಯಿಂದ ಹೊರಬರುವ ಘೋಷಣೆ ಮಾಡಿದ ಬಳಿಕ ಸಿಪಿಐ(ಎಂ) ಪಕ್ಷವು ಸಂಧಾನದ ಆಯ್ಕೆಯನ್ನು ಮುಂದಿಟ್ಟಿದೆ.

ಏಪ್ರಿಲ್ 23ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕೇವಲ 5  ಸೀಟುಗಳು ಸಾಕಾಗುವುದಿಲ್ಲ. ಡಿಎಂಕೆಯ ಪ್ರಸ್ತಾಪವನ್ನು ಮತ್ತೊಮ್ಮೆ ಪರಿಶೀಲಿಸುವುದಾಗಿ ಪಕ್ಷವು ತಿಳಿಸಿದೆ. ಈ ಮೂಲಕ ಸಿಪಿಐ(ಎಂ) ಪಕ್ಷದ ಅಸಮಾಧಾನ ಹೊರಬಂದಿದೆ.

ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಸಿಪಿಐ(ಎಂ) ಪಕ್ಷಕ್ಕೆ 6 ಸೀಟುಗಳನ್ನು ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ ಎಂಬ ಮಾಹಿತಿಯೂ ಇದೆ. ಆದರೆ ಇದಕ್ಕೆ ಪಕ್ಷ ಒಪ್ಪಲಿದೆಯೇ? ಎಂಬುದು ಸದ್ಯದ ಪ್ರಶ್ನೆಯಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular