HomeLatest News'ರಾಜ್ಯಪಾಲರನ್ನು ಅಡ್ಡಗಟ್ಟಿದ ವಿಧಾನ ಪರಿಷತ್ ಸದಸ್ಯರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಿ' : ಸಭಾಧ್ಯಕ್ಷರಿಗೆ ಆರ್.ಅಶೋಕ್ ಪತ್ರ.!

‘ರಾಜ್ಯಪಾಲರನ್ನು ಅಡ್ಡಗಟ್ಟಿದ ವಿಧಾನ ಪರಿಷತ್ ಸದಸ್ಯರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಿ’ : ಸಭಾಧ್ಯಕ್ಷರಿಗೆ ಆರ್.ಅಶೋಕ್ ಪತ್ರ.!

 ಬೆಂಗಳೂರು :   ರಾಜ್ಯಪಾಲರು ಅಧಿವೇಶನದಿಂದ ನಿರ್ಗಮಿಸುವ ಸಂದರ್ಭದಲ್ಲಿ ಅಡ್ಡಗಟ್ಟಿದ  ವಿಧಾನ ಪರಿಷತ್ ಸದದ್ಯರುಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿ ಸಭಾಧ್ಯಕ್ಷರಿಗೆ ಆರ್. ಅಶೋಕ್ ಪತ್ರ ಬರೆದು ಆಗ್ರಹಿಸಿದ್ದಾರೆ .

ಆರ್ . ಆಶೋಕ್ ಪತ್ರದಲ್ಲೇನಿದೆ..?

ರಾಜ್ಯಪಾಲರು  ಜಂಟಿ  ಸದನವನ್ನುದೇಶಿಸಿ ಭಾಷಣ ಮುಗಿಸಿ ನಿರ್ಗಮಿಸುವ ಸಂದರ್ಭದಲ್ಲಿ ಸದನದಲ್ಲಿ ಹಾಜರಿದ್ದ ವಿಧಾನಸಭೆ / ವಿಧಾನ ಪರಿಷತ್ತಿನ ಸದಸ್ಯರುಗಳು ಅವರನ್ನು ಅಡ್ಡಗಟ್ಟಿ ತಳ್ಳಾಡಿ ನೂಕುನುಗ್ಗಲು ಉಂಟು ಮಾಡಿ, ಘನತೆವೆತ್ತ ರಾಜ್ಯಪಾಲರಿಗೆ ಅಗೌರವ ತೋರಿರುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ-27ರಂತೆ “ರಾಜ್ಯಪಾಲರ ಭಾಷಣದ ಅವಧಿಯಲ್ಲಿ ಅನುಸರಿಸಬೇಕಾದ ಕ್ರಮ: ಸಂವಿಧಾನದ 175 ಅಥವಾ 176ನೇ ಅನುಚ್ಛೇದದ ಮೇರೆಗೆ ವಿಧಾನಮಂಡಲದ ಮೇರೆಗೆ ಉಭಯ ಸದನಗಳು ಸಭೆ ಸೇರುವಾಗ ಅಥವಾ 175ನೇ ಅನುಚ್ಛೇದದ ಮೇರಗೆ ವಿಧಾನಸಭಾ ಸದಸ್ಯರು ಮಾತ್ರ ಸಭೆ ಸೇರಿರುವಾಗ, ರಾಜ್ಯಪಾಲರ ಭಾಷಣದ ಅವಧಿಯಲ್ಲಿ ಯಾರೇ ಸದಸ್ಯರು ಯಾವುದೇ ಭಾಷಣ ಮಾಡುವ ಮೂಲಕ ಅಥವಾ ಯಾವುದೇ ಕ್ರಿಯಾಲೋಪವೆತ್ತಿ ರಾಜ್ಯಪಾಲರ ಭಾಷಣಕ್ಕೆ ಮುಂಚೆಯಾಗಲಿ ಅಥವಾ ತರುವಾಯವಾಗಲಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಯನ್ನುಂಟುಮಾಡತಕ್ಕುದಲ್ಲ ಅಥವಾ ವಿಘ್ನವನ್ನುಂಟುಮಾಡತಕ್ಕುದಲ್ಲ ಮತ್ತು ಅಂಥ ಅಡ್ಡಿಯನ್ನು ಅಥವಾ ವಿಘ್ನವನ್ನು ಸದನದ ಆದೇಶದ ತೀವ ಉಲ್ಲಂಘನೆಯೆಂದು ಪರಿಗಣಿಸಿ ವಿಧಾನಸಭೆಯ ಮುಂದಿನ ಉಪವೇಶನದಲ್ಲಿ ವಿಧಾನಸಭಾಧ್ಯಕ್ಷರು ಆ ಬಗ್ಗೆ, ಹಾಗೆ ವ್ಯವಹರಿಸತಕ್ಕದು”.ಎಂದು ತಿಳಿಸಿದ್ದು ಸದರಿ ನಿಯಮದನ್ವಯ ಘನತೆವತ್ತ ರಾಜ್ಯಪಾಲರು ನಿರ್ಗಮಿಸುವ ಸಂದರ್ಭದಲ್ಲಿ ಅಗೌರವ ತೋರಿದ ವಿಧಾನಸಭೆಯ / ವಿಧಾನ ಪರಿಷತ್ತಿನ ಸದಸ್ಯರುಗಳ ವಿರುದ್ಧ ಕೂಡಲೇ ಶಿಸ್ತು ಕ್ರಮ ಜರುಗಿಸುವಂತೆ ಕೋರುತ್ತೇನೆ ಎಂದು ಆಗ್ರಹಿಸಿದ್ದಾರೆ.

View this post on Instagram

A post shared by Kannada Dunia (@kannada_dunia_official)

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular