alex Certify movie | Kannada Dunia | Kannada News | Karnataka News | India News - Part 28
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಪ್ಟೆಂಬರ್ 2ಕ್ಕೆ ‘ಧಮಾಕ’‌ ಚಿತ್ರ ರಿಲೀಸ್

ಟ್ರೈಲರ್ ನಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಲಕ್ಷ್ಮೀ ರಮೇಶ್ ನಿರ್ದೇಶನದ ‘ಧಮಾಕ’ ಎಂಬ ಹಾಸ್ಯಭರಿತ ಚಿತ್ರ ಮುಂದಿನ ತಿಂಗಳು ಸೆಪ್ಟಂಬರ್ ಎರಡರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ Read more…

ಖ್ಯಾತ ಬಾಲಿವುಡ್ ನಿರ್ಮಾಪಕ ಕೆ.ಸಿ. ಶರ್ಮಾ ಇನ್ನಿಲ್ಲ

ಬಾಲಿವುಡ್ ಚಿತ್ರರಂಗದ ಖ್ಯಾತ ನಿರ್ಮಾಪಕ ಕೆ.ಸಿ. ಶರ್ಮಾ ವಿಧಿವಶರಾಗಿದ್ದಾರೆ. ಕಳೆದ ರಾತ್ರಿ ಹೃದಯಾಘಾತಕ್ಕೊಳಗಾಗಿದ್ದ 89 ವರ್ಷದ ಶರ್ಮಾ ತಮ್ಮ ನಿವಾಸದಲ್ಲೇ ಸಾವನ್ನಪ್ಪಿದ್ದಾರೆ. ಧರ್ಮೇಂದ್ರ, ಅಕ್ಷಯ್ ಕುಮಾರ್ ಸೇರಿದಂತೆ ಹಲವು Read more…

ಸಿನಿಮಾ ಪ್ರಮೋಷನ್ ವೇಳೆ ನಿರೀಕ್ಷೆಗೂ ಮೀರಿ ಆಗಮಿಸಿದ ಜನ; ಪ್ರಚಾರ ಕಾರ್ಯಕ್ರಮವೇ ರದ್ದು

ಮಲೆಯಾಳಂನ ಬಹು ನಿರೀಕ್ಷಿತ ತಳ್ಳುಮಾಲಾ ಆಗಸ್ಟ್​ 12ರಂದು ಬಿಡುಗಡೆಗೆ ಸಿದ್ಧವಾಗಿದೆ. ಟೊವಿನೋ ಥಾಮಸ್​ ಮತ್ತು ಕಲ್ಯಾಣಿ ಪ್ರಿಯದರ್ಶನ್​ ಚಿತ್ರದ ಪ್ರಮುಖ ಪಾತ್ರ ನಿಭಾಯಿಸಿದ್ದು, ಇದೀಗ ಚಿತ್ರದ ತಯಾರಕರು ಪ್ರಚಾರದ Read more…

ಆಗಸ್ಟ್ 12 ರಂದು ವಿಶ್ವಾದ್ಯಂತ ತೆರೆ ಕಾಣಲಿದೆ ‘ಗಾಳಿಪಟ-2’

ಬಹುನಿರೀಕ್ಷಿತ ‘ಗಾಳಿಪಟ-2’ ಚಿತ್ರ ಆಗಸ್ಟ್ 12 ರಂದು ವಿಶ್ವಾದ್ಯಂತ ತೆರೆ ಕಾಣಲಿದೆ ಎಂದು ಸಿನಿಮಾ ಪ್ರಚಾರ ತಂಡದ ಕಲಾವಿದರಾದ ನಯನಾ ಶರತ್ ಮತ್ತು ಮಡೇನೂರು ಮನು ತಿಳಿಸಿದರು. ಅವರು Read more…

ಶ್ರೀಲಂಕಾ ಅಧ್ಯಕ್ಷರ ನಿವಾಸಕ್ಕೆ ನುಗ್ಗಿದ ದೃಶ್ಯ ವೀಕ್ಷಿಸಿ ‘ಭೂತಯ್ಯನ ಮಗ ಅಯ್ಯು’ ನೆನಪಿಸಿಕೊಂಡ ಕನ್ನಡಿಗರು

ನೆರೆರಾಷ್ಟ್ರ ಶ್ರೀಲಂಕಾ ಭೀಕರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಕಳೆದ ಒಂದು ದಶಕದಿಂದ ಆ ದೇಶವನ್ನಾಳಿದ್ದ ರಾಜಪಕ್ಸೆ ಕುಟುಂಬ ತಮ್ಮ ವೈಯಕ್ತಿಕ ಲಾಭಕ್ಕೆ ಆಡಳಿತವನ್ನು ಬಳಸಿಕೊಂಡು ದೇಶವನ್ನು ಅಧೋಗತಿಗೆ ಇಳಿಸಿದೆ. Read more…

25 ದಿನ ಪೂರೈಸಿದ ‘777 ಚಾರ್ಲಿ’ ಸಿನಿಮಾ

ಕಿರಣ್ ರಾಜ್ ನಿರ್ದೇಶನದ ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಚಿತ್ರ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಮನುಷ್ಯ ಹಾಗೂ ಶ್ವಾನದ ನಡುವಿನ ಪ್ರೀತಿಯ Read more…

ಲೂಸ್ ಮಾದ ಯೋಗಿ ಹುಟ್ಟುಹಬ್ಬಕ್ಕೆ ಪೋಸ್ಟರ್ ರಿಲೀಸ್ ಮಾಡಿದ ‘ಹೆಡ್ ಬುಷ್ ಚಿತ್ರತಂಡ’

‘ದುನಿಯಾ’ ಚಿತ್ರದಲ್ಲಿ ಲೂಸ್ ಮಾದ ಎಂಬ ಕಳನಾಯಕನ ಪಾತ್ರದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಪ್ರತಿಭಾವಂತ ನಟ ಯೋಗಿ, ಲೂಸ್ ಮಾದ ಎಂದೇ ಖ್ಯಾತಿ Read more…

ಕಿಚ್ಚ ಸುದೀಪ್ ನಟನೆಯ ‘ಹುಚ್ಚ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 21 ವರ್ಷ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಸೂಪರ್ ಡೂಪರ್ ಹಿಟ್ ‘ಹುಚ್ಚ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 21 ವರ್ಷವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರದ ಪೋಸ್ಟರ್ ಹಂಚಿಕೊಳ್ಳುವ ಮೂಲಕ Read more…

ಜುಲೈ 8ಕ್ಕೆ ತೆರೆಮೇಲೆ ಬರಲಿದೆ ‘ತೂತು ಮಡಿಕೆ’

ಚಂದ್ರಕೀರ್ತಿ ನಿರ್ದೇಶನದ ‘ತೂತು ಮಡಿಕೆ’ ಚಿತ್ರ ಜುಲೈ 8ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಚಂದ್ರಕೀರ್ತಿ ಪಾವನಾ ಗೌಡ ಹಾಗೂ ಪ್ರಮೋದ್ ಶೆಟ್ಟಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ Read more…

50 ದಿನ ಪೂರೈಸಿದ ‘ಸರ್ಕಾರು ವಾರಿಪಾಟ’

ಪರಶುರಾಮ್ ನಿರ್ದೇಶನದ ಮಹೇಶ್ ಬಾಬು ನಟನೆಯ ಆಕ್ಷನ್ ಡ್ರಾಮಾ ಆಧಾರಿತ ‘ಸರ್ಕಾರು ವಾರಿಪಾಟ’ ಚಿತ್ರ ಮೇ 12ರಂದು ಬಿಡುಗಡೆ ಮಾಡಲಾಗಿತ್ತು ಈ ಸಿನಿಮಾ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುವ ಮೂಲಕ Read more…

ಖೈದಿಗಳ ಮನ ಪರಿವರ್ತನೆಗೆ ಪ್ರೇರಣೆಯಾದ `ದಾಸ್ವಿ’

ಒಂದು ಸಿನೆಮಾ ಸಾಮಾಜಿಕ ಸ್ವಾಸ್ಥ್ಯವನ್ನು ಉತ್ತಮಗೊಳಿಸಬಲ್ಲದು. ಹಲವಾರು ಜೀವನದಲ್ಲಿ ಸುಧಾರಣೆ ತರಬಹುದು. ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ನಟಿಸಿರುವ ದಾಸ್ವಿ ಎಂಬ ಚಿತ್ರದಿಂದ ಪ್ರೇರೇಪಣೆಗೊಂದ ಆಗ್ರಾದ ಕೇಂದ್ರ ಕಾರಾಗೃಹದ Read more…

‘ಪುಷ್ಪಾ’ ಸಿನಿಮಾ ಸ್ಟೈಲ್ ನಲ್ಲಿ ಸ್ಮಗ್ಲಿಂಗ್ ಮಾಡಲು ಹೋಗಿ ಸಿಕ್ಕಿಬಿದ್ದ ಆರೋಪಿ

ಉತ್ತರ ಪ್ರದೇಶದ ಆಗ್ರಾದಲ್ಲಿ ಆರೋಪಿಯೊಬ್ಬ ನಿಷೇಧಿತ ಮರಿಜುವಾನ ಮಾದಕ ವಸ್ತುವನ್ನು ‘ಪುಷ್ಪಾ’ ಸಿನಿಮಾ ಸ್ಟೈಲ್ ನಲ್ಲಿ ಸ್ಮಗ್ಲಿಂಗ್ ಮಾಡಲು ಹೋಗಿ ಪೋಲಿಸರಿಗೆ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಗುಂಡಿನ ಚಕಮಕಿ Read more…

ರಿಲೀಸ್ ಆಗಿ 39 ದಿನವಾದರೂ ನಾನ್​ ಸ್ಟಾಪ್​​ ಆಗಿ ಮುನ್ನುಗ್ಗುತ್ತಿದೆ ʼಕೆಜಿಎಫ್ ಚಾಪ್ಟರ್-2ʼ

ಕೆಜಿಎಫ್ ಚಾಪ್ಟರ್-2 ಅಂದಾಕ್ಷಣ.. ಈ ಸಿನೆಮಾದ ಒಂದೊಂದು ಫ್ರೇಮ್ ಕಣ್ಣೆದುರು ಬಂದು ಬಿಡುತ್ತೆ. ಕಿವಿಯಲ್ಲಿ ಈ ಸಿನೆಮಾದ ಮ್ಯೂಜಿಕ್. ಇನ್ನೂ ಕೂಡಾ ಯಾರೂ ಕೆ.ಜಿ.ಎಫ್ ಚಾಪ್ಟರ್-2 ಹ್ಯಾಂಗ್​ವೋವರ್​ನಿಂದ ಹೊರಗೆ Read more…

Big Breaking: ಕೇವಲ 16 ದಿನದಲ್ಲಿ ಸಾವಿರ ಕೋಟಿ ರೂ. ಗಳಿಕೆ ಮಾಡಿದ ʼಕೆಜಿಎಫ್‌ ಚಾಪ್ಟರ್ -2ʼ

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ʼಕೆಜಿಎಫ್‌ ಚಾಪ್ಟರ್‌ -2ʼ ಚಿತ್ರ ಬಾಕ್ಸಾಫೀಸ್‌ ಧೂಳಿಪಟ ಮಾಡುತ್ತಿದ್ದು, ಕಲೆಕ್ಷನ್‌ ನಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಬಿಡುಗಡೆಯಾದ ಕೇವಲ 16 ದಿನಗಳಲ್ಲಿ ಒಂದು Read more…

ಬೆರಗಾಗಿಸುತ್ತೆ ‘ಕೆಜಿಎಫ್ – 2’ ಚಿತ್ರದ ಮೊದಲ ದಿನದ ಗಳಿಕೆ….!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಕೆಜಿಎಫ್ – 2 ಚಿತ್ರ ಗುರುವಾರದಂದು ವಿಶ್ವದಾದ್ಯಂತ ತೆರೆಕಂಡಿದೆ. ಭಾರತವೂ ಸೇರಿದಂತೆ 70 ದೇಶಗಳಲ್ಲಿ ಈ ಚಿತ್ರ ತೆರೆಕಂಡಿದ್ದು, ಮೊದಲ Read more…

KGF ಚಾಪ್ಟರ್ 2: ಬುಕಿಂಗ್ ಆರಂಭವಾದ ಮೊದಲ ದಿನವೇ ಮುಗಿಬಿದ್ದು ಟಿಕೆಟ್ ಖರೀದಿಸಿದ ಪ್ರೇಕ್ಷಕರು

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಇದರ ಮಧ್ಯೆ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು, ದೇಶದಾದ್ಯಂತ ಪ್ರೇಕ್ಷಕರು ಮುಗಿಬಿದ್ದು ಖರೀದಿಸಿದ್ದಾರೆ. Read more…

ಕಿರುತೆರೆಯಲ್ಲಿ ಪ್ರಸಾರವಾಗಲಿದೆ ನಿಖಿಲ್ ಕುಮಾರಸ್ವಾಮಿ ನಟನೆಯ ‘ರೈಡರ್’

ವಿಜಯ್ ಕುಮಾರ್ ಕೊಂಡ ನಿರ್ದೇಶನದ ನಿಖಿಲ್ ಕುಮಾರಸ್ವಾಮಿ ಅಭಿನಯದ ‘ರೈಡರ್’ ಚಿತ್ರ ಜೀ ಕನ್ನಡ ವಾಹಿನಿಯಲ್ಲಿ ಅತಿ ಶೀಘ್ರದಲ್ಲೇ ಪ್ರಸಾರವಾಗಲಿದೆ, ಈ ಕುರಿತು ಜೀ ಕನ್ನಡ ವಾಹಿನಿ ತನ್ನ Read more…

ನಾಳೆ ತೆರೆಮೇಲೆ ಬರಲಿದೆ ವರುಣ್ ತೇಜ್ ಅಭಿನಯದ ‘ಗನಿ’ ಸಿನಿಮಾ

ಕಿರಣ್ ನಿರ್ದೇಶನದ ವರುಣ್ ತೇಜ್ ನಟನೆಯ ‘ಗನಿ’ ಚಿತ್ರದ ಟ್ರೈಲರ್ ನಿನ್ನೆ ಬಿಡುಗಡೆಯಾಗಿದ್ದು ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ. ಈಗಾಗಲೇ ಟೀಸರ್ ಹಾಗೂ ಟ್ರೈಲರ್ ಮೂಲಕ ಸಾಕಷ್ಟು ಕುತೂಹಲ ಮೂಡಿಸಿರುವ Read more…

ಮೇ 6ಕ್ಕೆ ತೆರೆಮೇಲೆ ಬರಲಿದೆ ‘ಟಕ್ಕರ್’

ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಕ್ಕನ ಮಗ ಮನೋಜ್ ಕುಮಾರ್ ನಾಯಕನಾಗಿ ಅಭಿನಯಿಸಿರುವ ‘ಟಕ್ಕರ್’ ಸಿನಿಮಾ ಮುಂದಿನ ತಿಂಗಳು ಮೇ 6ರಂದು Read more…

ಶೀಘ್ರದಲ್ಲೇ ತೆರೆಗೆ ಬರಲಿದೆ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾ

ಸಂತೋಷ್ ಆನಂದ್ ರಾಮ್ ನಿರ್ದೇಶನದ ನವರಸನಾಯಕ ಜಗ್ಗೇಶ್ ನಟನೆಯ ‘ರಾಘವೇಂದ್ರ ಸ್ಟೋರ್ಸ್’ ಚಿತ್ರ ಈಗಾಗಲೇ ಟೈಟಲ್ ನಿಂದಲೇ ಸಾಕಷ್ಟು ಸದ್ದು ಮಾಡಿದೆ. 2019ರಲ್ಲಿ ‘ಕಾಳಿದಾಸ ಮೇಷ್ಟ್ರು’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ Read more…

ಬಿಡುಗಡೆಗೆ ಸಜ್ಜಾದ ‘ಪುರುಷೋತ್ತಮ’ ಸಿನಿಮಾ

ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಜಿಮ್ ರವಿ ಅಭಿನಯದ ‘ಪುರುಷೋತ್ತಮ’ ಸಿನಿಮಾ ಮುಂದಿನ ತಿಂಗಳು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಅಮರ್ ನಾಥ್ ಎಸ್.ವಿ ನಿರ್ದೇಶನದ ಈ ಚಿತ್ರವನ್ನು Read more…

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ಯುವರತ್ನ’ ಬಿಡುಗಡೆಯಾಗಿ ಇಂದಿಗೆ ಒಂದು ವರ್ಷ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ, ಸಂತೋಷ್ ಆನಂದ್ ರಾಮ್ ನಿರ್ದೇಶನದ ಆಕ್ಷನ್ ಡ್ರಾಮಾ ಆಧಾರಿತ ಸಿನಿಮಾ ‘ಯುವರತ್ನ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 1 ವರ್ಷಗಳಾಗಿವೆ. ಈ Read more…

‘ದೊಡ್ಮನೆ ಹುಡ್ಗ’ ಸಿನಿಮಾ ಶೂಟಿಂಗ್ ಸಮಯದಲ್ಲಿನ ಫೋಟೋ ಹಂಚಿಕೊಂಡ ಸುಮಲತಾ ಅಂಬರೀಶ್

ದುನಿಯಾ ಸೂರಿ ನಿರ್ದೇಶನದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರಾಧಿಕಾ ಪಂಡಿತ್ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ ‘ದೊಡ್ಮನೆ ಹುಡ್ಗ’ ತೆರೆಮೇಲೆ ಬಂದು ಈಗಾಗಲೇ 6 Read more…

’ದಿ ಕಾಶ್ಮೀರ್‌ ಫೈಲ್ಸ್‌’ ನೋಡಿ, ನ್ಯಾಯಕ್ಕಾಗಿ ಧ್ವನಿಯೆತ್ತಿ ಎಂದ ಕ್ರಿಕೆಟಿಗ

ವಿವೇಕ್‌ ರಂಜನ್‌ ಅಗ್ನಿಹೋತ್ರಿ ನಿರ್ದೇಶಿಸಿರುವ, ಅನುಪಮ್‌ ಖೇರ್‌ ಹಾಗೂ ಮಿಥುನ್‌ ಚಕ್ರವರ್ತಿ ಸೇರಿ ಹಲವರು ನಟಿಸಿರುವ ʼದಿ ಕಾಶ್ಮೀರ್‌ ಫೈಲ್ಸ್‌ʼ ಚಿತ್ರವು ಭಾರಿ ಯಶಸ್ಸಿನತ್ತ ಸಾಗುತ್ತಿದೆ. ಗಲ್ಲಾಪೆಟ್ಟಿಗೆಯಲ್ಲೂ ಭಾರಿ Read more…

BIG NEWS: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಣೆಗೆ ಸಚಿವರು, ಶಾಸಕರಿಗೆ ವ್ಯವಸ್ಥೆ

ಬೆಂಗಳೂರು: ದೇಶಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ವೀಕ್ಷಣೆಗೆ ರಾಜ್ಯದ ಸಚಿವರು, ಶಾಸಕರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ Read more…

‘ರಾಬರ್ಟ್’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 1 ವರ್ಷ

ತರುಣ್ ಸುಧೀರ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ ‘ರಾಬರ್ಟ್’ ಸಿನಿಮಾ ಕಳೆದ ವರ್ಷ ಮಾರ್ಚ್ 11ರಂದು ಬಿಡುಗಡೆಯಾಗಿ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಈ ಚಿತ್ರ Read more…

‘ಮೆಜೆಸ್ಟಿಕ್’ ಬಿಡುಗಡೆಯಾಗಿ ಇಂದಿಗೆ 20 ವರ್ಷ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಾಗಿ ನಟಿಸಿದ ಮೊಟ್ಟ ಮೊದಲ ಸಿನಿಮಾ ʼಮೆಜೆಸ್ಟಿಕ್ʼ ತೆರೆಮೇಲೆ ಬಂದು ಇಂದಿಗೆ 20 ವರ್ಷ ಗಳಾಗಿವೆ. ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ದರ್ಶನ್ ಅವರಿಗೆ Read more…

ಕಿಚ್ಚ ಸುದೀಪ್ ಸಿನಿ ಪಯಣಕ್ಕೆ 26 ವರ್ಷ; ಅಭಿಮಾನಿಗಳಿಂದ ಅಭಿನಂದನೆಯ ಮಹಾಪೂರ

ಕಿಚ್ಚ ಸುದೀಪ್ ಗೆ ರಾಜ್ಯವಷ್ಟೇ ಅಲ್ಲದೆ, ದೇಶದ ಹಲವೆಡೆ ಕೂಡ ಅಭಿಮಾನಿಗಳಿದ್ದಾರೆ. ಈಗ ಕಿಚ್ಚ ಚಂದನವನದೊಂದಿಗೆ ಟಾಲಿವುಡ್ ಹಾಗೂ ಬಾಲಿವುಡ್ ನಲ್ಲಿಯೂ ಹೆಸರು ಮಾಡಿದ್ದಾರೆ. ಸಾಕಷ್ಟು ಏಳು – Read more…

ಹಿಂದಿಗೆ ಡಬ್ ಆದ ಚಿತ್ರಗಳ ದಾಖಲೆ ಪುಡಿ ಪುಡಿ ಮಾಡಿದ ಪುಷ್ಪ…!

ನಟ ಅಲ್ಲು ಅರ್ಜುನ್ ನಟಿಸಿರುವ ಪುಷ್ಪ ಚಿತ್ರ ದೇಶ, ವಿದೇಶಗಳಲ್ಲಿಯೂ ಖ್ಯಾತಿ ಗಳಿಸಿದೆ. ಸಾಕಷ್ಟು ಸೆಲೆಬ್ರಿಟಿಗಳು ಚಿತ್ರದ ಡೈಲಾಗ್ ಹಾಗೂ ಹಾಡಿಗೆ ಹೆಜ್ಜೆ ಹಾಕಿದ್ದೆ ಇದಕ್ಕೆ ಕಾರಣ. ಈಗ Read more…

ಆಸ್ಕರ್ ಪ್ರಶಸ್ತಿಯ ಸನಿಹಕ್ಕೆ ಭಾರತೀಯ ಚಿತ್ರಗಳು…!

ಭಾರತದ ಎರಡು ಚಿತ್ರಗಳು ಆಸ್ಕರ್ ಪ್ರಶಸ್ತಿಯ ಸುತ್ತಿಗೆ ಬಂದು ನಿಂತಿವೆ. ಮರಕ್ಕರ್ ಹಾಗೂ ಜೈ ಭೀಮ್ ಚಿತ್ರಗಳು ಈ ಸಾಲಿಗೆ ಬಂದು ನಿಂತಿವೆ. 2021 ರಲ್ಲಿ ತೆರೆ ಕಂಡಿದ್ದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...