HomeEntertainment'ಭುವನಂ ಗಗನಂ' ಚಿತ್ರದ ಮೊದಲ ಹಾಡು ರಿಲೀಸ್

‘ಭುವನಂ ಗಗನಂ’ ಚಿತ್ರದ ಮೊದಲ ಹಾಡು ರಿಲೀಸ್

ಗಿರೀಶ್ ಮೂಲಿಮನಿ ನಿರ್ದೇಶನದ ಪೃಥ್ವಿ ಅಂಬಾರ್ ಅಭಿನಯದ ‘ಭುವನಂ ಗಗನಂ’ ಚಿತ್ರದ ಮೊದಲ ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದೆ. ಭುವನ ಗಗನ ಎಂಬ ಈ ಹಾಡಿಗೆ ಅರ್ಮಾನ್ ಮಲಿಕ್ ಹಾಗೂ ಐಶ್ವರ್ಯ ರಂಗರಾಜನ್ ಧ್ವನಿಯಾಗಿದ್ದು, ಗುಮ್ಮಿನೇನೀ ವಿಜಯ್ ಸಂಗೀತ ಸಂಯೋಜನೆ ನೀಡಿದ್ದಾರೆ ಇನ್ನುಳಿದಂತೆ ಅನಿರುದ್ಧ ಶಾಸ್ತ್ರಿ ಅವರ ಸಾಹಿತ್ಯವಿದೆ.

ಈ ಚಿತ್ರವನ್ನು ಎಸ್ ವಿ ಸಿ ಬ್ಯಾನರ್ ನಲ್ಲಿ ಎಮ್ ಮುನೇಗೌಡ ನಿರ್ಮಾಣ ಮಾಡಿದ್ದು, ಪೃಥ್ವಿ ಅಂಬಾರ್ ಸೇರಿದಂತೆ : ಪ್ರಮೋದ್, ರೇಚೆಲ್ ಡೇವಿಡ್, ಪೊನ್ನು ಅಶ್ವತಿ, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್ ಬಣ್ಣ ಹಚ್ಚಿದ್ದಾರೆ.

ಸುನೀಲ್ ಕಶ್ಯಪ್ ಅವರ ಸಂಕಲನ, ಉದಯ ಲೀಲಾ ಛಾಯಾಗ್ರಾಹಣ, ಗಿರೀಶ್ ಮೂಲಿಮನಿ, ಪ್ರಸನ್ನ ವಿಎಂ ಸಂಭಾಷಣೆ, ಹಾಗೂ ಗಿರೀಶ್ ಮೂಲಿಮನಿ ನೃತ್ಯ ನಿರ್ದೇಶನವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular