HomeEntertainmentಟಿ20 ವಿಶ್ವಕಪ್; ಇಂದು ಭಾರತ ಹಾಗೂ ಬಾಂಗ್ಲಾದೇಶ ಕಾದಾಟ

ಟಿ20 ವಿಶ್ವಕಪ್; ಇಂದು ಭಾರತ ಹಾಗೂ ಬಾಂಗ್ಲಾದೇಶ ಕಾದಾಟ

ನಿನ್ನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್ ಎದುರು ಕೇವಲ ಎಂಟು ರನ್ ಗಳಿಂದ ರೋಚಕ ಜಯ ಸಾಧಿಸಿದರೆ, ಇಂದು ಬೆಳಗಿನ ಪಂದ್ಯದಲ್ಲಿ ಯುಎಸ್ಎ  ಎದುರು ವೆಸ್ಟ್ ಇಂಡೀಸ್ ತಂಡ 9 ವಿಕೆಟ್ ಗಳಿಂದ ಜಯಭೇರಿಯಾಗಿದೆ. ಈ ಮೂಲಕ ವೆಸ್ಟ್ ಇಂಡೀಸ್ ತಂಡ ತನ್ನ ಸೆಮಿ ಫೈನಲ್ ಕನಸನ್ನು ಇನ್ನೂ ಜೀವಂತವಾಗಿಸಿಕೊಂಡಿದೆ.

ಟಿ20 ವಿಶ್ವಕಪ್ನ 47ನೇ ಪಂದ್ಯದಲ್ಲಿ ಇಂದು ಭಾರತ ಹಾಗೂ ಬಾಂಗ್ಲಾದೇಶ ಮುಖಾಮುಖಿಯಾಗಲಿದ್ದು, ಮತ್ತೊಂದು ರೋಚಕ ಪಂದ್ಯ ವೀಕ್ಷಿಸಲು ಪ್ರೇಕ್ಷಕರು ಸಜ್ಜಾಗಿದ್ದಾರೆ. ಕಳೆದ ಪಂದ್ಯದಲ್ಲಿ ಅಫ್ಘಾನಿಸ್ತಾನದ ಎದುರು ಜಯಭೇರಿಯಾಗಿದ್ದ, ಭಾರತ ತಂಡ ಇದೀಗ ಮತ್ತೊಂದು ಏಷ್ಯಾಕಪ್ ನಾ ಸ್ಪರ್ಧಿಯಾದ ಬಾಂಗ್ಲಾದೇಶದ ಎದುರು ಗರ್ಜನೆ ಮಾಡಲು ಸಜ್ಜಾಗಿದೆ. ಇದಾದ ಬಳಿಕ ಭಾರತ ತಂಡ ಏಕದಿನ  ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ ಜೊತೆ ಮುಖಾಮುಖಿಯಾಗಲಿದೆ.

For Latest News Updates, Join Our Whatsapp Community🚩
RELATED ARTICLES

Most Popular