HomeEntertainmentಟಿ ಟ್ವೆಂಟಿ ವಿಶ್ವಕಪ್; ನಾಳೆ ಫೈನಲ್ ನಲ್ಲಿ ಮುಖಾಮುಖಿಯಾಗಲಿವೆ ಭಾರತ ಹಾಗೂ ದಕ್ಷಿಣ ಆಫ್ರಿಕಾ

ಟಿ ಟ್ವೆಂಟಿ ವಿಶ್ವಕಪ್; ನಾಳೆ ಫೈನಲ್ ನಲ್ಲಿ ಮುಖಾಮುಖಿಯಾಗಲಿವೆ ಭಾರತ ಹಾಗೂ ದಕ್ಷಿಣ ಆಫ್ರಿಕಾ

ನಿನ್ನೆ ನಡೆದ  ಭಾರತ ಹಾಗೂ ಇಂಗ್ಲೆಂಡ್ ನಡುವಣ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ತಂಡ 68 ರನ್ ಗಳಿಂದ ಭರ್ಜರಿ ಜಯ ಸಾಧಿಸುವ ಮೂಲಕ ಫೈನಲ್ ಗೆ ಎಂಟ್ರಿ ಕೊಟ್ಟಿದೆ. ಮತ್ತೊಮ್ಮೆ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯಬೇಕೆಂಬುದು ಭಾರತೀಯ ಅಭಿಮಾನಿಗಳ ಕನಸಾಗಿದೆ.

ನಾಳೆ ಫೈನಲ್ ಅಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿದ್ದು, ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಉಭಯ ತಂಡಗಳು ಬಲಿಷ್ಠವಾಗಿದ್ದು, ದಕ್ಷಿಣ ಆಫ್ರಿಕಾ ತಂಡ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಫೈನಲ್ ಗೆ ಪ್ರವೇಶಿಸಿರುವ ಸಂತಸದಲ್ಲಿದೆ. ಇದುವರೆಗೂ ಏಕದಿನ ಹಾಗೂ ಟಿ 20 ವಿಶ್ವಕಪ್  ಟ್ರೋಫಿ ಗೆಲ್ಲಲು ವಿಫಲರಾಗಿರುವ ಈ ತಂಡ ಈ ಬಾರಿ ತುಂಬಾ  ಬಲಿಷ್ಠವಾಗಿಯೇ ಕಾಣುತ್ತಿದೆ. ಎಂ ಎಸ್ ಧೋನಿ ನಾಯಕತ್ವದಲ್ಲಿ ಟಿ 20 ವಿಶ್ವಕಪ್ ಗೆದ್ದಿದ್ದ ಭಾರತ ತಂಡ ಮತ್ತೊಂದು ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದೆ.

For Latest News Updates, Join Our Whatsapp Community🚩
RELATED ARTICLES

Most Popular