ನಿನ್ನೆ ( ಫೆಬ್ರವರಿ 16 ) ಶ್ರೀಲಂಕಾದ ಕ್ಯಾಂಡಿಯ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 30ನೇ ಪಂದ್ಯದಲ್ಲಿ ಶ್ರೀಲಂಕಾ ಆಸ್ಟ್ರೇಲಿಯಾ ವಿರುದ್ಧ 8 ವಿಕೆಟ್‌ಗಳ ಗೆಲುವನ್ನು ದಾಖಲಿಸುವ ಮೂಲಕ ಬಿ ಗುಂಪಿನಲ್ಲಿ ಸತತ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಸೂಪರ್ 8 ಸುತ್ತಿಗೆ ಅರ್ಹತೆ ಪಡೆದುಕೊಂಡಿತು.
ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಇಟಲಿ ವಿರುದ್ಧ ಇಂಗ್ಲೆಂಡ್ ಗೆಲುವು ಸಾಧಿಸುವ ಮೂಲಕ ಸೂಪರ್ 8 ಸುತ್ತಿಗೆ ಪ್ರವೇಶವನ್ನು ಪಡೆದುಕೊಂಡಿತು ಹಾಗೂ ಯುಎಇ ವಿರುದ್ಧ ಅಫ್ಘಾನಿಸ್ತಾನ ಗೆಲುವು ಸಾಧಿಸುವ ಮೂಲಕ ದಕ್ಷಿಣ ಆಫ್ರಿಕಾ ಸೂಪರ್ 8ಗೆ ಪ್ರವೇಶಿಸಿತು.
ಈ ಮೂಲಕ ಸೂಪರ್ 8ರ ಮೊದಲ ಗುಂಪಿನಲ್ಲಿ ಭಾರತ, ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ಈ ಮೂರು ತಂಡಗಳು ಸ್ಥಾನ ಪಡೆದುಕೊಂಡಿದ್ದು, ಉಳಿದ ತಂಡ ಯಾವುದು ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಅತ್ತ ಸೂಪರ್ 8 ಎರಡನೇ ಗುಂಪಿನಲ್ಲಿ ಇಂಗ್ಲೆಂಡ್ ಹಾಗೂ ಶ್ರೀಲಂಕಾ ತಂಡಗಳಿದ್ದು, ಇನ್ನೂ ಎರಡು ತಂಡಗಳು ಯಾವುವು ಎಂದು ತೀರ್ಮಾನವಾಗಬೇಕಿದೆ.
ಹೀಗೆ ಸೂಪರ್ 1 ಗುಂಪಿನಲ್ಲಿ ಭಾರತ ಸೇರಿ ಮೂರು ತಂಡಗಳು ಸ್ಥಾನ ಪಡೆದುಕೊಳ್ಳುತ್ತಿದ್ದಂತೆ ಭಾರತದ ಮೂರು ಪಂದ್ಯಗಳ ಪೈಕಿ ಎರಡು ಪಂದ್ಯಗಳ ವೇಳಾಪಟ್ಟಿ ಬಹಿರಂಗವಾಗಿದೆ. ಹಾಗಿದ್ದರೆ ಭಾರತ ಸೂಪರ್ 8 ಸುತ್ತಿನಲ್ಲಿ ಯಾವ ತಂಡಗಳ ವಿರುದ್ಧ ಯಾವ ದಿನ ಎಲ್ಲಿ ಕಣಕ್ಕಿಳಿಯಲಿದೆ ಎಂಬ ಮಾಹಿತಿ ಮುಂದಿದೆ.
ಭಾರತ vs ದಕ್ಷಿಣ ಆಫ್ರಿಕಾ – ಫೆಬ್ರವರಿ 22 – ನರೇಂದ್ರ ಮೋದಿ ಕ್ರೀಡಾಂಗಣ, ಅಹ್ಮದಾಬಾದ್
ಭಾರತ vs ಇನ್ನೂ ಆಯ್ಕೆಯಾಗಿಲ್ಲ – ಫೆಬ್ರವರಿ 26 – ಎಂಎ ಚಿದಂಬರಂ ಕ್ರೀಡಾಂಗಣ, ಚೆನ್ನೈ ( ಜಿಂಬಾಬ್ವೆ ಅಥವಾ ಆಸ್ಟ್ರೇಲಿಯಾ ಎದುರಾಳಿ )
ಭಾರತ vs ವೆಸ್ಟ್ ಇಂಡೀಸ್ – ಮಾರ್ಚ್ 1 – ಈಡನ್ ಗಾರ್ಡನ್ಸ್ , ಕೊಲ್ಕತ್ತಾ.

