HomeLatest News'ಇವನ್ಯಾವ ಸೀಮೆ ನಾಯಕ?'; ಕಳೆದ ವಿಶ್ವಕಪ್ ಗೆಲ್ಲಲು ಕಾರಣನಾಗಿದ್ದ ಉಪನಾಯಕನನ್ನೇ ಕಣಕ್ಕಿಳಿಸದೇ ಹೊರಗಿಟ್ಟ ತಲೆಕೆಟ್ಟ ನಾಯಕ...

‘ಇವನ್ಯಾವ ಸೀಮೆ ನಾಯಕ?’; ಕಳೆದ ವಿಶ್ವಕಪ್ ಗೆಲ್ಲಲು ಕಾರಣನಾಗಿದ್ದ ಉಪನಾಯಕನನ್ನೇ ಕಣಕ್ಕಿಳಿಸದೇ ಹೊರಗಿಟ್ಟ ತಲೆಕೆಟ್ಟ ನಾಯಕ ಸೂರ್ಯ!

ನಿನ್ನೆ (ಫೆಬ್ರವರಿ 22) ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಟಿ ಟ್ವೆಂಟಿ ವಿಶ್ವಕಪ್ ಇತಿಹಾಸದಲ್ಲಿಯೇ ಟೀಮ್ ಇಂಡಿಯಾ ಕಂಡ ಅತಿ ಕೆಟ್ಟ ಸೋಲಿಗೆ ಸಾಕ್ಷಿಯಾಯಿತು.

ಪ್ರಸ್ತುತ ನಡೆಯುತ್ತಿರುವ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್ 8 ಸುತ್ತಿನ ಮೂರನೇ ಪಂದ್ಯದಲ್ಲಿ ವಿರುದ್ಧ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 76 ರನ್‌ಗಳ ಹೀನಾಯ ಸೋಲನ್ನು ಕಂಡು ಭಾರೀ ಮುಖಭಂಗ ಅನುಭವಿಸಿತು.

ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆರಿಸಿಕೊಂಡು 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 187 ರನ್ ಕಲೆಹಾಕಿ ದಕ್ಷಿಣ ಆಫ್ರಿಕಾಗೆ 188 ರನ್‌ಗಳ ಸವಾಲಿನ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಭಾರತ 18.4 ಓವರ್‌ಗಳಲ್ಲಿ 111 ರನ್ ಕಲೆಹಾಕಿ ಆಲ್‌ಔಟ್ ಆಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗೆ ಪ್ರತಿ ಪಂದ್ಯವೂ ಮಾಡು ಇಲ್ಲವೇ ಮಡಿ ಪಂದ್ಯದ ಮಹತ್ವ ಹೊಂದಿರುವ ಸೂಪರ್ 8 ಸುತ್ತಿನ ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಭಾರತದ ಸೆಮಿಫೈನಲ್ ಹಾದಿ ಕಷ್ಟಕರವಾಗಿದ್ದು, ಈ ಸೋಲಿನ ಬೆನ್ನಲ್ಲೇ ನಾಯಕ ಸೂರ್ಯಕುಮಾರ್ ಯಾದವ್ ವಿರುದ್ಧ ಭಾರೀ ದೊಡ್ಡ ಮಟ್ಟದ ಟೀಕೆಗಳು ವ್ಯಕ್ತವಾಗಿವೆ.

ಸತತ ವಿಫಲವಾದ ಅಭಿಷೇಕ್ ಶರ್ಮಾ ಬದಲು ಸಂಜು ಕಣಕ್ಕಿಳಿಸದೇ ಇದ್ದದ್ದು, ಸ್ಟ್ರೈಕ್ ರೇಟ್ ಇಲ್ಲದ ತಿಲಕ್ ವರ್ಮಾರನ್ನೂ ಸಹ ತಂಡದಲ್ಲಿ ಇರಿಸಿಕೊಂಡದ್ದು ಸೂರ್ಯಕುಮಾರ್ ಯಾದವ್ ನಾಯಕತ್ವದ ವಿರುದ್ಧ ಟೀಕೆಗಳು ಹೆಚ್ಚಾಗುವಂತೆ ಮಾಡಿದವು.

ಇಷ್ಟೇ ಅಲ್ಲದೇ ನಿನ್ನೆಯ ಪಂದ್ಯದಲ್ಲಿ ಭಾರತ ಟಿ ಟ್ವೆಂಟಿ ತಂಡದ ಉಪ ನಾಯಕ ಅಕ್ಷರ್ ಪಟೇಲ್‌ರನ್ನೇ ಆಡುವ ಬಳಗದಿಂದ ಕೈಬಿಟ್ಟು ವಾಷಿಂಗ್ಟನ್ ಸುಂದರ್ ಆಡಿಸಿದ್ದು ಸೂರ್ಯಕುಮಾರ್ ಯಾದವ್ ತಲೆ ಕೆಟ್ಟ ನಾಯಕತ್ವವನ್ನು ಸಾರಿ ಹೇಳಿತ್ತು.

ಇದೇ ಅಕ್ಷರ್ ಪಟೇಲ್ 2024ರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಇದೇ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದೇ ಅಹ್ಮದಾಬಾದ್ ಕ್ರೀಡಾಂಗಣದಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಕೇವಲ 34 ರನ್‌ಗೆ 3 ವಿಕೆಟ್ ಕಳೆದುಕೊಂಡಿತ್ತು. ನಾಯಕ ರೋಹಿತ್ ಶರ್ಮಾ, ರಿಷಬ್ ಪಂತ್ ಹಾಗೂ ಸೂರ್ಯಕುಮಾರ್ ಯಾದವ್ ಕಳಪೆ ಪ್ರದರ್ಶನ ನೀಡಿ ಪೆವಿಲಿಯನ್ ಸೇರಿಕೊಂಡಿದ್ದರು. ಈ ಸಂದರ್ಭದಲ್ಲಿ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಕ್ಷರ್ ಪಟೇಲ್ 31 ಎಸೆತಗಳಲ್ಲಿ 1 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 47 ರನ್ ಬಾರಿಸಿ ತಂಡದ ಪರ ವಿರಾಟ್ ಕೊಹ್ಲಿ ಬಳಿಕ ಎರಡನೇ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಆ ಪಂದ್ಯದಲ್ಲಿ 7 ರನ್‌ಗಳ ಜಯ ಕಂಡ ಭಾರತದ ಗೆಲುವಿಗೆ ಪ್ರಮುಖ ಕಾರಣಗಳಲ್ಲಿ ಓರ್ವರಾಗಿದ್ದರು.

ಆ ಪಂದ್ಯದಲ್ಲಿ 76 ರನ್ ಬಾರಿಸಿದ ಕೊಹ್ಲಿ ಜತೆ ನಾಲ್ಕನೇ ವಿಕೆಟ್‌ಗೆ ಕೈ ಜೋಡಿಸಿದ ಅಕ್ಷರ್ ಪಟೇಲ್ ತಂಡಕ್ಕೆ ಭಾರೀ ಸುಧಾರಣೆ ತಂದಿದ್ದರು. ಕೊಹ್ಲಿ ಹಾಗೂ ಅಕ್ಷರ್ ಪಟೇಲ ಜೋಡಿ ಅಂದು 72 ರನ್‌ಗಳ ಜತೆಯಾಟವನ್ನಾಡಿತ್ತು. ಈ ಮೂಲಕ ಕೇವಲ 34 ರನ್‌ಗೆ 3 ವಿಕೆಟ್‌ ಕಳೆದುಕೊಂಡಿದ್ದ ಭಾರತ ಅಕ್ಷರ್ ಪಟೇಲ್ ರನ್‌ಔಟ್ ಆಗುವ ಸಮಯಕ್ಕೆ 104 ರನ್ ಮುಟ್ಟಿತ್ತು. ಹೀಗೆ ಅಂದು ಭಾರತ ಸಂಕಷ್ಟದಲ್ಲಿದ್ದಾಗ ತನ್ನದಲ್ಲದ ಕ್ರಮಾಂಕದಲ್ಲಿ ಕಣಕ್ಕಿಳಿದು ಭಾರತವನ್ನು ಕಾಪಾಡಿದ್ದ ಅಕ್ಷರ್ ಪಟೇಲ್‌ರನ್ನು ನಿನ್ನೆ ಅದೇ ಕ್ರೀಡಾಂಗಣ, ಅದೇ ಎದುರಾಳಿ ಎದುರು ಬಳಸದೇ ಇದ್ದದ್ದು ಸೂರ್ಯಕುಮಾರ್ ಯಾದವ್ ದಡ್ಡತನವನ್ನು ಪ್ರದರ್ಶಿಸಿದೆ.

ಹೀಗೆ ಅಕ್ಷರ್ ಪಟೇಲ್‌ರನ್ನು ತಂಡದಿಂದ ಹೊರಹಾಕಿ ವಾಷಿಂಗ್ಟನ್ ಸುಂದರ್‌ಗೆ ಅವಕಾಶ ಕೊಟ್ಟ ಸೂರ್ಯಕುಮಾರ್ ಯಾದವ್ ವಿರುದ್ಧ ನೆಟ್ಟಿಗರು ಸಹ ಕಿಡಿಕಾರಿದ್ದು ಇವನ್ಯಾವ ಸೀಮೆ ನಾಯಕ, ಇಂಥ ಕೆಟ್ಟ ನಿರ್ಧಾರ ಯಾರಾದರೂ ಮಾಡ್ತಾರಾ ಎಂದು ಕಿಡಿಕಾರಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular