HomeLatest NewsT20 World Cup 2026: ಅಭ್ಯಾಸದ ವೇಳೆ ಸೂರ್ಯ ಮಾಡಿದ ಬೌಲಿಂಗ್ ಕಂಡು ಭಾರತೀಯರು ಹೆದರಿದ್ದಾರೆ...

T20 World Cup 2026: ಅಭ್ಯಾಸದ ವೇಳೆ ಸೂರ್ಯ ಮಾಡಿದ ಬೌಲಿಂಗ್ ಕಂಡು ಭಾರತೀಯರು ಹೆದರಿದ್ದಾರೆ ಎಂದ ಪಾಕ್ ಫ್ಯಾನ್ಸ್

ಇಂದು ( ಫೆಬ್ರವರಿ 15 ) ಶ್ರೀಲಂಕಾದ ಕೊಲಂಬೋ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಐಸಿಸಿ ಟಿ20 ವಿಶ್ವಕಪ್ ಟೂರ್ನಿ 2026ರ ಗ್ರೂಪ್ ಹಂತದ 27ನೇ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.

ಭಾರತ ಹಾಗೂ ಪಾಕಿಸ್ತಾನ ತಂಡಗಳು ಇಲ್ಲಿಯವರಿಗೆ ತಲಾ 2 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ಎರಡು ಪಂದ್ಯಗಳಲ್ಲಿ ಗೆದ್ದು ತಲಾ 4 ಅಂಕಗಳೊಂದಿಗೆ ಕ್ರಮವಾಗಿ ಎ ಗುಂಪಿನ ಅಂಕಪಟ್ಟಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನದಲ್ಲಿವೆ. ಹೀಗಾಗಿ ಈ ಪಂದ್ಯದಲ್ಲಿ ಗೆಲ್ಲಲಿರುವ ತಂಡ ಅಗ್ರಸ್ಥಾನಕ್ಕೆ ತಲುಪುವುದರ ಜೊತೆಗೆ ಮುಂದಿನ ಸೂಪರ್ 8 ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದೆ.

ಹೀಗಾಗಿ ಈ ಮಹತ್ವದ ಪಂದ್ಯಕ್ಕಾಗಿ ಎರಡು ತಂಡಗಳು ಭಾರಿ ಅಭ್ಯಾಸದಲ್ಲಿ ತೊಡಗಿಕೊಂಡಿದ್ದು, ಈ ವೇಳೆ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಪಾಕಿಸ್ತಾನದ ಬೌಲರ್ ಉಸ್ಮಾನ್ ತಾರಿಕ್ ರೀತಿ ಬೌಲಿಂಗ್ ಹಾಕಿ ತಮ್ಮ ತಂಡದ ಆಟಗಾರರಿಗೆ ತರಬೇತಿ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೌದು, ಉಸ್ಮನ್ ತಾರಿಖ್ ಬೌಲಿಂಗ್ ಮಾಡುವಾಗ ಚಂಡನ್ನು ಒಂದು ಸೆಕೆಂಡ್ ಹಿಡಿದು ಬಳಿಕ ಬಿಡುಗಡೆ ಮಾಡುತ್ತಿದ್ದಾರೆ ಎಂಬ ಆರೋಪವಿದ್ದು, ಬೌಲಿಂಗ್ ಶೈಲಿ ಮಾತ್ರ ವಿಭಿನ್ನವಾಗಿದೆ. ಹೀಗಾಗಿ ಅದಕ್ಕಾಗಿ ಭಾರತೀಯ ಆಟಗಾರರು ವಿಶೇಷವಾಗಿ ತರಬೇತಿ ಪಡೆದುಕೊಳ್ಳುತ್ತಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅತ್ತ ಪಾಕಿಸ್ತಾನ ಕ್ರಿಕೆಟ್ ತಂಡದ ಅಭಿಮಾನಿಗಳು ಪಾಕಿಸ್ತಾನದ ಒಬ್ಬನೇ ಒಬ್ಬ ಬೌಲರ್ ಕಂಡುಹಿಡಿಯತ ತಂಡ ಭಯ ಬಿದ್ದಿದೆ, ಹೀಗಾಗಿಯೇ ಅವರು ಆತನ ಬೌಲಿಂಗ್ ವೈಖರಿ ಕುರಿತು ತಲೆಕೆಡಿಸಿಕೊಂಡು ಅಭ್ಯಾಸವನ್ನು ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳನ್ನು ಮಾಡುತ್ತಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular