HomeLatest NewsT20 World Cup 2026: ಭಾರತ vs ಪಾಕ್ ಪಂದ್ಯಕ್ಕೆ ಮಳೆ ಭೀತಿ; ರದ್ದಾದರೆ ಮತ್ತೊಂದು...

T20 World Cup 2026: ಭಾರತ vs ಪಾಕ್ ಪಂದ್ಯಕ್ಕೆ ಮಳೆ ಭೀತಿ; ರದ್ದಾದರೆ ಮತ್ತೊಂದು ದಿನ ನಡೆಯುತ್ತಾ ಪಂದ್ಯ?

ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 27ನೇ ಪಂದ್ಯದಲ್ಲಿ ಇಂದು ( ಫೆಬ್ರವರಿ 15 ) ಭಾರತ ಹಾಗೂ ಪಾಕಿಸ್ತಾನ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ.

ಟೂರ್ನಿಯಲ್ಲಿ ಇಲ್ಲಿಯವರೆಗೂ ತಲಾ ಎರಡು ಪಂದ್ಯಗಳನ್ನಾಡಿ ಎರಡರಲ್ಲಿಯೂ ಗೆಲುವು ಸಾಧಿಸಿರುವ ಭಾರತ ಹಾಗೂ ಪಾಕಿಸ್ತಾನ ಎ ಗುಂಪಿನ ಅಂಕಪಟ್ಟಿಯಲ್ಲಿ ನಾಲ್ಕು ಅಂಕಗಳನ್ನು ಪಡೆದು ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನವನ್ನು ಪಡೆದುಕೊಂಡಿವೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರುವುದು ಮಾತ್ರವಲ್ಲದೇ ಸೂಪರ್ 8ರ ಸುತ್ತಿಗೆ ಬಹುತೇಕ ಪ್ರವೇಶ ಪಡೆದುಕೊಳ್ಳಲಿವೆ.

ಇಷ್ಟರ ಮಟ್ಟಿಗೆ ಪ್ರಾಮುಖ್ಯತೆ ಪಡೆದುಕೊಂಡಿರುವ ಈ ಪಂದ್ಯ ಶ್ರೀಲಂಕಾದ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಶ್ರೀಲಂಕಾದ ಹವಾಮಾನ ಇಲಾಖೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಕಾರಣ ಕೊಲಂಬೊದಲ್ಲಿ ಇಂದು ಮಳೆಯಾಗುವ ಸಾಧ್ಯತೆ 65% ಇದೆ ಎಂದು ವರದಿ ಮಾಡಿದೆ. ಅಲ್ಲದೇ ಅಕ್ಯುವೆದರ್ ಸಹ 93% ಮಳೆಯಾಗುವ ಸಾಧ್ಯತೆಗಳಿವೆ ಎಂದು ವರದಿ ಮಾಡಿದ್ದು, ಪಂದ್ಯಕ್ಕೆ ಮಳೆ ಅಡ್ಡಿಯನ್ನುಂಟುಮಾಡಲಿದೆಯಾ, ಒಂದು ವೇಳೆ ಮಳೆ ಅಡ್ಡಿಯನ್ನುಂಟುಮಾಡಿದರೆ ರಿಸರ್ವ್ ಡೇ ಇದೆಯಾ ಎಂಬ ಪ್ರಶ್ನೆ ಎದ್ದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಳೆಯಿಂದೇನಾದರೂ ಪಂದ್ಯ ರದ್ದಾದರೆ ಯಾವುದೇ ರಿಸರ್ವ್ ಡೇ ಇರುವುದಿಲ್ಲ . ಟೂರ್ನಿಯ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಿಗೆ ಮಾತ್ರ ಮೀಸಲು ದಿನವಿದ್ದು, ಗ್ರೂಪ್ ಹಂತ ಹಾಗೂ ಸೂಪರ್ 8 ಸುತ್ತಿನ ಪಂದ್ಯಗಳಿಗೆ ಯಾವುದೇ ಮೀಸಲು ದಿನವಿರುವುದಿಲ್ಲ, ಅದೇ ದಿನ ಪಂದ್ಯಗಳನ್ನು ನಡೆಸಬೇಕಿದೆ. ಇನ್ನು ಫಲಿತಾಂಶ ಪಡೆಯಲು ಕನಿಷ್ಟ 5 ಓವರ್ ಪಂದ್ಯವಾದರೂ ನಡೆಯಬೇಕಿದೆ.

ಇನ್ನು ಟೂರ್ನಿಯಲ್ಲಿ ಇಲ್ಲಿಯವರೆಗೂ ನಡೆದ ಯಾವ ಪಂದ್ಯಕ್ಕೂ ಮಳೆ ಅಡ್ಡಿಯಾಗಿಲ್ಲ. ಆದರೆ ಪಾಕಿಸ್ತಾನ ಹಾಗೂ ಐರ್ಲೆಂಡ್ ತಂಡಗಳ ನಡುವಿನ ಅಭ್ಯಾಸ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular