HomeLatest NewsT20 World Cup 2026: ಪಾಕ್ vs ನಮೀಬಿಯಾ ಪಂದ್ಯ ಮಳೆಯಿಂದ ರದ್ದಾದರೆ ಟೂರ್ನಿಯಿಂದ ಹೊರಬೀಳುತ್ತಾ...

T20 World Cup 2026: ಪಾಕ್ vs ನಮೀಬಿಯಾ ಪಂದ್ಯ ಮಳೆಯಿಂದ ರದ್ದಾದರೆ ಟೂರ್ನಿಯಿಂದ ಹೊರಬೀಳುತ್ತಾ ಪಾಕ್?

ಇಂದು ( ಫೆಬ್ರವರಿ 18 ) ಶ್ರೀಲಂಕಾದ ಕೊಲಂಬೊದ ಸಿನ್ಹಳೀಸ್ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 35ನೇ ಪಂದ್ಯ ನಡೆಯಲಿದ್ದು, ಎ ಗುಂಪಿನ ಪಾಕಿಸ್ತಾನ ಹಾಗೂ ನಮೀಬಿಯಾ ತಂಡಗಳು ಮುಖಾಮುಖಿಯಾಗಲಿವೆ.

ಇನ್ನು ಈ ಪಂದ್ಯದ ಫಲಿತಾಂಶ ಈ ಬಾರಿಯ ಟೂರ್ನಿಯಲ್ಲಿ ಸೂಪರ್ 8 ಪ್ರವೇಶಿಸಲಿರುವ ಕೊನೆಯ ತಂಡ ಯಾವುದು ಎಂಬುದನ್ನು ನಿರ್ಧರಿಸಲಿದೆ. ಹೌದು, ಈಗಾಗಲೇ ಸೂಪರ್‌ 8 ಸುತ್ತಿಗೆ 7 ತಂಡಗಳು ಪ್ರವೇಶ ಪಡೆದುಕೊಂಡಿದ್ದು, 8ನೇ ತಂಡವಾಗಿ ಯಾವ ತಂಡ ಲಗ್ಗೆ ಇಡಲಿದೆ ಎಂಬ ಪ್ರಶ್ನೆ ಎದ್ದಿದೆ.

ಎ ಗುಂಪಿನಿಂದ ಈಗಾಗಲೇ ಭಾರತ ತಂಡ ಸೂಪರ್ 8 ಪ್ರವೇಶಿಸಿದ್ದು, ಟೂರ್ನಿಯಲ್ಲಿ 3 ಪಂದ್ಯಗಳನ್ನಾಡಿ ಎರಡು ಪಂದ್ಯಗಳಲ್ಲಿ ಗೆದ್ದು ಒಂದು ಪಂದ್ಯದಲ್ಲಿ ಸೋತು 4 ಅಂಕಗಳನ್ನು ಹೊಂದಿ ಮೂರನೇ ಸ್ಥಾನದಲ್ಲಿರುವ ಪಾಕಿಸ್ತಾನಕ್ಕೆ ಸೂಪರ್ 8 ಪ್ರವೇಶಿಸುವ ಸಾಧ್ಯತೆಗಳು ಹೆಚ್ಚಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯುಎಸ್‌ಎ ಎಲ್ಲ ಪಂದ್ಯಗಳನ್ನಾಡಿ 4 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಇಂದಿನ ಪಂದ್ಯದಲ್ಲಿ ಪಾಕಿಸ್ತಾನ ಸೋತರೆ ಪಾಕ್ ಟೂರ್ನಿಯಿಂದ ಹೊರಬಿದ್ದು, ಯುಎಸ್‌ಎ ಸೂಪರ್ 8 ಸುತ್ತಿಗೆ ಪ್ರವೇಶಿಸಲಿದೆ. ಪಾಕ್ ಜಯ ಸಾಧಿಸಿದರೆ ನೇರವಾಗಿ ಸೂಪರ್ 8 ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದೆ.

ಒಂದುವೇಳೆ ನಿನ್ನೆಯ ಜಿಂಬಾಬ್ವೆ ಹಾಗೂ ಐರ್ಲೆಂಡ್ ಪಂದ್ಯದ ಹಾಗೆ ಇಂದಿನ ಪಾಕ್ ಹಾಗೂ ನಮೀಬಿಯಾ ನಡುವಿನ ಪಂದ್ಯ ಸಹ ರದ್ದಾದರೆ ಆಗಲೂ ಪಾಕ್ ಸೂಪರ್ 8 ಪ್ರವೇಶಿಸಲಿದೆ. ಹೌದು, ಪಂದ್ಯ ರದ್ದಾದರೆ ಪಾಕ್‌ಗೆ ಒಂದು ಅಂಕ ಲಭಿಸಲಿದ್ದು, ಒಟ್ಟು ಅಂಕ 5ಕ್ಕೆ ಏರಿಕೆಯಾಗಲಿದೆ. ಈ ಮೂಲಕ ಪಾಕ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿ ಸೂಪರ್ 8 ಪ್ರವೇಶ ಪಡೆಯಲಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular