HomeLatest NewsT20 World Cup 2026: ಫರ್ಹಾನ್ ಶತಕ; ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ನಮೀಬಿಯಾಗೆ ಕಠಿಣ...

T20 World Cup 2026: ಫರ್ಹಾನ್ ಶತಕ; ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ನಮೀಬಿಯಾಗೆ ಕಠಿಣ ಗುರಿ ನೀಡಿದ ಪಾಕ್

ಶ್ರೀಲಂಕಾದ ಕೊಲಂಬೊ ಸಿನ್ಹಳೀಸ್ ಕ್ರಿಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಟೂರ್ನಿಯ 35ನೇ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನಮೀಬಿಯಾ ತಂಡಗಳು ಮುಖಾಮುಖಿಯಾಗಿವೆ.

ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 199 ರನ್ ಕಲೆಹಾಕಿ ನಮೀಬಿಯಾ ತಂಡಕ್ಕೆ 200 ರನ್‌ಗಳ ಕಠಿಣ ಗುರಿಯನ್ನು ನೀಡಿದೆ.

ಪಾಕಿಸ್ತಾನ ತಂಡದ ಪರ ಆರಂಭಿಕರಾಗಿ ಸಹಿಬ್ಜಾದಾ ಫರ್ಹಾನ್ ಹಾಗೂ ಸೈಮ್ ಆಯೂಬ್ ಕಣಕ್ಕಿಳಿದರು. ಆಯೂಬ್ 14 ರನ್‌ಗೆ ವಿಕೆಟ್ ಒಪ್ಪಿಸಿದರೆ, ಫರ್ಹಾನ್ ಕೊನೆಯವರೆಗೂ ಕಣದಲ್ಲಿದ್ದು, 58 ಎಸೆತಗಳಲ್ಲಿ 11 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 100 ರನ್ ಗಳಿಸಿ ಅಬ್ಬರಿಸಿದರು. ಇದು ಈ ಬಾರಿಯ ಟೂರ್ನಿಯಲ್ಲಿ ದಾಖಲಾದ ಮೂರನೇ ಶತಕ ಹಾಗೂ ಫರ್ಹಾನ್ ಪಾಲಿಗೆ ಚೊಚ್ಚಲ ಟಿ ಟ್ವೆಂಟಿ ಶತಕವಾಗಿದೆ. ಇನ್ನುಳಿದಂತೆ ನಾಯಕ ಸಲ್ಮಾನ್ ಅಲಿ ಆಘಾ 38, ಖಾವಾಜಾ ನಫೆ 5 ಹಾಗೂ ಅಂತಿಮ ಹಂತದಲ್ಲಿ ಫರ್ಹಾನ್‌ಗೆ ಸರಿಯಾದ ಜತೆಯಾಟ ನೀಡಿದ ಶದಾಬ್ ಖಾನ್ 22 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 36 ರನ್ ಬಾರಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಮೀಬಿಯಾ ಪರ ಜಾಕ್ ಬ್ರಾಸೆಲ್ ಎರಡು ವಿಕೆಟ್ ಹಾಗೂ ನಾಯಕ ಜೆರಾರ್ಡ್ ಎರಾಸ್ಮಸ್ ಒಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular