ನೀವು ರೈಲಿನಲ್ಲಿ ಪ್ರಯಾಣಿಸುವಾಗ ಟಿಕೆಟ್ ಬುಕ್ ಮಾಡಲು ಒಂದು ಆಪ್, ಟ್ರೈನ್ ಎಲ್ಲಿದೆ ಎಂದು ನೋಡಲು ಇನ್ನೊಂದು ಆಪ್ ಬಳಸಿ ಸುಸ್ತಾಗಿದ್ದೀರಾ? ಹಾಗಿದ್ದರೆ ನಿಮಗೊಂದು ಗುಡ್ ನ್ಯೂಸ್ ಭಾರತೀಯ ರೈಲ್ವೆ (IRCTC) ಈಗ ಎಲ್ಲ ಸೇವೆಗಳನ್ನು ಒಂದೇ ಡಿಜಿಟಲ್ ಯಡಿ ತರುವ ‘ಸ್ವಾರೈಲ್’ (SWARAIL) ಎಂಬ ಸೂಪರ್ ಆಪ್ ಅನ್ನು ಪರಿಚಯಿಸಿದೆ.
ಏನಿದು ಸ್ವಾರೈಲ್(SWARAIL) ಸೂಪರ್ ಆಪ್?
ಇದು ಕೇವಲ ಟಿಕೆಟ್ ಬುಕಿಂಗ್ ಆಪ್ ಅಲ್ಲ, ಬದಲಾಗಿ ರೈಲು ಪ್ರಯಾಣದ ಪ್ರತಿಯೊಂದು ಅಗತ್ಯಕ್ಕೂ ಇರುವ ಏಕೈಕ ವೇದಿಕೆ. ಪ್ರಸ್ತುತ ಬೀಟಾ ಹಂತದಲ್ಲಿರುವ ಈ ಆಪ್ ಈಗ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‌ನಲ್ಲಿ ಲಭ್ಯವಿದೆ. ನಿಮ್ಮ ಹಳೆಯ IRCTC ಖಾತೆಯ ಮೂಲಕವೇ ಇದಕ್ಕೆ ಲಾಗಿನ್ ಆಗಬಹುದು.
ಈ ಆಪ್‌ನ ವಿಶೇಷತೆಗಳೇನು?
ಈ ಸೂಪರ್ ಆಪ್ ರೈಲು ಪ್ರಯಾಣವನ್ನು ಸ್ಮಾರ್ಟ್ ಆಗಿಸಲಿದೆ:
ಮಲ್ಟಿ-ಬುಕಿಂಗ್: ಕಾಯ್ದಿರಿಸಿದ (Reserved), ಕಾಯ್ದಿರಿಸದ (Unreserved) ಮತ್ತು ಪ್ಲಾಟ್‌ಫಾರ್ಮ್ ಟಿಕೆಟ್‌ಗಳನ್ನು ಕ್ಯೂನಲ್ಲಿ ನಿಲ್ಲದೆ ಒಂದೇ ಕ್ಲಿಕ್‌ನಲ್ಲಿ ಬುಕ್ ಮಾಡಬಹುದು.
ರಿಯಲ್ ಟೈಮ್ ಟ್ರ್ಯಾಕಿಂಗ್: ರೈಲು ಎಲ್ಲಿದೆ? ನಿಮ್ಮ ಕೋಚ್ ಎಲ್ಲಿದೆ? ಪಿಎನ್‌ಆರ್ (PNR) ಸ್ಟೇಟಸ್ ಏನು? ಎಲ್ಲವನ್ನೂ ಲೈವ್ ಆಗಿ ನೋಡಬಹುದು.
ಫುಡ್ ಆರ್ಡರ್: ಪ್ರಯಾಣದ ಮಧ್ಯೆ ಇಷ್ಟವಾದ ಆಹಾರವನ್ನು ಆಪ್ ಮೂಲಕವೇ ಆರ್ಡರ್ ಮಾಡಬಹುದು.
ಹೆಲ್ಪ್ ಲೈನ್: ಅಧಿಕಾರಿಗಳ ಸಹಾಯ ಬೇಕಿದ್ದರೆ ಅಥವಾ ದೂರು ನೀಡಬೇಕಿದ್ದರೆ ಎಲ್ಲವೂ ಈ ಆಪ್‌ನಲ್ಲಿ ಲಭ್ಯ.
ಹೈ-ಟೆಕ್ ಸೆಕ್ಯುರಿಟಿ: ಐಫೋನ್ ಬಳಕೆದಾರರಿಗೆ ಫೇಸ್ ಐಡಿ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಫಿಂಗರ್‌ಪ್ರಿಂಟ್ ಮೂಲಕ ಸುರಕ್ಷಿತ ಲಾಗಿನ್ ವ್ಯವಸ್ಥೆ ಇದೆ.
Swarail ಆ್ಯಪ್‌ನಲ್ಲಿ ಟಿಕೆಟ್ ಬುಕ್ ಮಾಡುವ ಹಂತಗಳು
ಹಂತ 1: ಮೊದಲಿಗೆ ನಿಮ್ಮ ಫೋನ್‌ನಲ್ಲಿ Swarail ಆ್ಯಪ್ ಓಪನ್ ಮಾಡಿ, ನಿಮ್ಮ IRCTC ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ.
ಹಂತ 2: ಹೋಮ್ ಸ್ಕ್ರೀನ್‌ನಲ್ಲಿರುವ ‘Plan My Journey’ ಅಥವಾ ಟಿಕೆಟ್ ಬುಕಿಂಗ್ ವಿಭಾಗವನ್ನು ಆಯ್ಕೆ ಮಾಡಿ.
ಹಂತ 3: ನೀವು ಹೊರಡುವ ನಿಲ್ದಾಣ (From) ಮತ್ತು ತಲುಪಬೇಕಾದ ನಿಲ್ದಾಣ (To) ಹಾಗೂ ಪ್ರಯಾಣದ ದಿನಾಂಕವನ್ನು ನಮೂದಿಸಿ.
ಹಂತ 4: ಲಭ್ಯವಿರುವ ರೈಲುಗಳ ಪಟ್ಟಿಯಲ್ಲಿ ನಿಮಗೆ ಬೇಕಾದ ರೈಲು ಮತ್ತು ಕೋಚ್ (Sleeper/AC) ಅನ್ನು ಸೆಲೆಕ್ಟ್ ಮಾಡಿ.
ಹಂತ 5: ಪ್ರಯಾಣಿಕರ ವಿವರಗಳನ್ನು (ಹೆಸರು, ವಯಸ್ಸು) ಭರ್ತಿ ಮಾಡಿ.
ಹಂತ 6: ಕೊನೆಯದಾಗಿ ಯುಪಿಐ (UPI), ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಹಣ ಪಾವತಿಸಿ. ನಿಮ್ಮ ಟಿಕೆಟ್ ಈಗ ಬುಕ್ ಆಗಿದೆ

