HomeSportsT20 World Cup 2026: ಫರ್ಹಾನ್ ಶತಕದ ಆರ್ಭಟ, ಫಖರ್ ಜಮಾನ್ ಅಬ್ಬರ; ಲಂಕಾಗೆ 200+...

T20 World Cup 2026: ಫರ್ಹಾನ್ ಶತಕದ ಆರ್ಭಟ, ಫಖರ್ ಜಮಾನ್ ಅಬ್ಬರ; ಲಂಕಾಗೆ 200+ ರನ್ ಗುರಿ ನೀಡಿದ ಪಾಕ್

ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್ 8ರಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿವೆ.

ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆರಿಸಿಕೊಂಡು ಪಾಕಿಸ್ತಾನ ತಂಡವನ್ನು ಮೊದಲು ಬ್ಯಾಟಿಂಗ್‌ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿ ಶ್ರೀಲಂಕಾ 213 ರನ್‌ಗಳ ಕಠಿಣ ಗುರಿಯನ್ನು ನೀಡಿದೆ.

ಪಾಕಿಸ್ತಾನದ ಪರ ಆರಂಭಿಕರಾಗಿ ಕಣಕ್ಕಿಳಿದ ಸಹಿಬ್ಜಾದಾ ಫರ್ಹಾನ್ ಹಾಗೂ ಫಖರ್ ಜಮಾನ್ 15.5 ಓವರ್‌ಗಳಲ್ಲಿ ಬರೋಬ್ಬರಿ 176 ರನ್‌ಗಳ ಜತೆಯಾಟವನ್ನಾಡಿದರು. ಇದು ಟಿ ಟ್ವೆಂಟಿ ವಿಶ್ವಕಪ್‌ನಲ್ಲೇ ದಾಖಲಾದ ಅತಿದೊಡ್ಡ ಜತೆಯಾಟ ಎಂಬ ದಾಖಲೆ ಇದು. ಫರ್ಹಾನ್ 60 ಎಸೆತಗಳಲ್ಲಿ 9 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 100 ರನ್ ಬಾರಿಸಿದರೆ, ಫಖರ್ ಜಮಾನ್ 42 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 84 ರನ್ ಬಾರಿಸಿದರು. ಇವರ ವಿಕೆಟ್ ಕಳೆದುಕೊಂಡ ಬಳಿಕ ಕಣಕ್ಕಿಳಿದ ಎಲ್ಲ ಆಟಗಾರರು ಸಹ ಒಂದಂಕಿಗೆ ವಿಕೆಟ್ ಒಪ್ಪಿಸಿ ಕಟ್ಟಿದ್ದ ಬೃಹತ್ ಇನ್ನಿಂಗ್ಸ್‌ ಮುಂದುವರಿಸುವಲ್ಲಿ ವಿಫಲರಾದರು. ಖವಾಜಾ ನಫೆ 2, ಶದಬ್ ಖಾನ್ 7, ಮೊಹಮ್ಮದ್ ನವಾಜ್ ಡಕ್‌ಔಟ್, ಸಲ್ಮಾನ್ ಅಲಿ ಆಘಾ ಡಕ್‌ಔಟ್, ಶಾಹೀನ್ ಅಫ್ರಿದಿ 4, ನಸೀಮ್ ಶಾ 1, ಉಸ್ಮಾನ್ ಖಾನ್ ಅಜೇಯ 8 ಹಾಗೂ ಅಬ್ರಾರ್ ಅಹ್ಮದ್ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶ್ರೀಲಂಕಾ ಪರ ದಿಲ್‌ಶನ್ ಮಧುಶಂಕ ಮೂರು ವಿಕೆಟ್, ದಸುನ್ ಶನಕ ಎರಡು ವಿಕೆಟ್ ಹಾಗೂ ದುಷ್ಮಂತ ಚಮೀರ ಒಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular