ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಸೂಪರ್ 8 ಪಂದ್ಯದಲ್ಲಿ ಪಾಕಿಸ್ತಾನ ಇಂಗ್ಲೆಂಡ್‌ಗೆ 165 ರನ್‌ಗಳ ಗುರಿಯನ್ನು ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನದ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 164 ರನ್ ಕೆಲಹಾಕಿತು.
ಪಾಕಿಸ್ತಾನದ ಪರ ಆರಂಭಿಕನಾಗಿ ಕಣಕ್ಕಿಳಿದ ಸಹಿಬ್ಜಾದಾ ಫರ್ಹಾನ್ ತಂಡ ಆರಂಭಿಕ ಆಘಾತ ಅನುಭವಿಸಿದರೂ ಜವಾಬ್ದಾರಿಯುತ ಆಟವನ್ನಾಡಿ 45 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 63 ರನ್ ಬಾರಿಸಿದರು. ಇನ್ನುಳಿದಂತೆ ಸೈಮ್ ಆಯೂಬ್ 7, ನಾಯಕ ಸಲ್ಮಾನ್ ಅಲಿ ಆಘಾ 5, ಬಾಬರ್ ಆಜಮ್ 25, ಶದಾಬ್ ಖಾನ್ 23, ಫಾಖರ್ ಜಮಾನ್ 25, ಉಸ್ಮಾನ್ ಖಾನ್ 8, ಮೊಹಮ್ಮದ್ ನವಾಜ್ ಡಕ್‌ಔಟ್, ಶಾಹೀನ್ ಅಫ್ರಿದಿ 2 ಹಾಗೂ ಸಲ್ಮಾನ್ ಮಿರ್ಜಾ ಅಜೇಯ 2 ರನ್ ಗಳಿಸಿದರು.
ಇಂಗ್ಲೆಂಡ್ ಪರ ಲಿಯಾಮ್ ಡಾಸನ್ ಮೂರು ವಿಕೆಟ್, ಜೋಫ್ರಾ ಆರ್ಚರ್ ಹಾಗೂ ಜೇಮಿ ಓವರ್ಟನ್ ಎರಡು ವಿಕೆಟ್ ಮತ್ತು ಆದಿಲ್ ರಶೀದ್ ಒಂದು ವಿಕೆಟ್ ಪಡೆದರು.

