HomeLatest NewsT20 World Cup 2026: ಕಿವೀಸ್ ಅಬ್ಬರಕ್ಕೆ ಯುಎಇ ತತ್ತರ; ವಿಕೆಟ್ ಕಳೆದುಕೊಳ್ಳದೇ ಚೇಸ್ ಮಾಡಿ...

T20 World Cup 2026: ಕಿವೀಸ್ ಅಬ್ಬರಕ್ಕೆ ಯುಎಇ ತತ್ತರ; ವಿಕೆಟ್ ಕಳೆದುಕೊಳ್ಳದೇ ಚೇಸ್ ಮಾಡಿ ದಾಖಲೆ ಬರೆದ ನ್ಯೂಜಿಲೆಂಡ್

ಚೆನ್ನೈನ ಎಂಎ ಚಿದಂಬಂರಂ ಕ್ರೀಡಾಂಗಣದಲ್ಲಿ ಇಂದು ( ಫೆಬ್ರವರಿ 10 ) ನಡೆದ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಟೂರ್ನಿಯ ಗ್ರೂಪ್ ಹಂತದ 11ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡದ ವಿರುದ್ಧ 10 ವಿಕೆಟ್‌ಗಳ ದಾಖಲೆಯ ಗೆಲುವನ್ನು ದಾಖಲಿಸಿದೆ.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಯುಎಇ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 6 ವಿಕೆಟ್ ನಷ್ಟಕ್ಕೆ 173 ರನ್ ಕಲೆಹಾಕಿ ನ್ಯೂಜಿಲೆಂಡ್‌ಗೆ 174 ರನ್‌ಗಳ ಸವಾಲಿನ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ನ್ಯೂಜಿಲೆಂಡ್ ಕೇವಲ 15.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 175 ರನ್ ಬಾರಿಸಿತು.

ಯುಎಇ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಆರ್ಯನ್ಶ್ ಶರ್ಮಾ 8 ರನ್ ಗಳಿಸಿದರೆ, ಮುಹಮ್ಮದ್ ವಸೀಂ ಕೊನೆಯವರೆಗೂ ಬ್ಯಾಟಿಂಗ್ ಮಾಡಿ 45 ಎಸೆತಗಳಲ್ಲಿ ಅಜೇಯ 66 ರನ್ ಬಾರಿಸಿದರು. ಬೇಗನೆ ತನ್ನ ಮೊದಲ ವಿಕೆಟ್ ಕಳೆದುಕೊಂಡು ಸಂಕಷ್ವದಲ್ಲಿದ್ದ ತಂಡಕ್ಕೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಲಿಶನ್ ಶರಫು ಮೊಹಮ್ಮುದ್ ವಸೀಮ್ ಜತೆ ಸೇರಿ 107 ರನ್‌ಗಳ ಜತೆಯಾಟವನ್ನಾಡಿ 47 ಎಸೆತಗಳಲ್ಲಿ 55 ರನ್ ಗಳಿಸಿದರು. ಇನ್ನುಳಿದಂತೆ ಹರ್ಷಿತ್ ಕೌಶಿಕ್ 2 ರನ್, ಮಯಾಂಕ್ ಕುಮಾರ್ 21, ಶೋಯೆಬ್ ಖಾನ್ 7 ರನ್ ಹಾಗೂ ಮುಹಮ್ಮದ್ ಅರ್ಫನ್ ಡಕ್‌ಔಟ್ ಆದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ರಿ ಎರಡು ವಿಕೆಟ್, ಜೇಕಬ್ ಡಫಿ, ಲಾಕಿ ಫೆರ್ಗ್ಯುಸನ್, ಮಿಚೆಲ್ ಸ್ಯಾಂಟ್ನರ್ ಹಾಗೂ ಗ್ಲೆನ್ ಫಿಲಿಪ್ಸ್ ತಲಾ ಒಂದೊಂದು ವಿಕೆಟ್ ಪಡೆದರು.

ಯುಎಇ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಟಿಮ್ ಸೈಫರ್ಟ್ ಹಾಗೂ ಫಿನ್ ಅಲೆನ್ ದಾಖಲೆಯ 175 ರನ್‌ಗಳ ಜತೆಯಾಟವನ್ನಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಸೈಫರ್ಟ್ ಹಾಗೂ ಅಲೆನ್ ಅಬ್ಬರಕ್ಕೆ ನಲುಗಿದ ಯುಎಇ ಬೌಲರ್‌ಗಳು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಲಿಲ್ಲ. ಟಿಮ್ ಸೈಫರ್ಟ್ 42 ಎಸೆತಗಳಲ್ಲಿ 12 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 89 ರನ್ ಗಳಿಸಿದರೆ, ಫಿನ್ ಅಲೆನ್ 50 ಎಸೆತಗಳಲ್ಲಿ 5 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ ಅಜೇಯ 84 ರನ್ ಬಾರಿಸಿದರು. ಹೀಗೆ ಟಿಮ್ ಸೈಫರ್ಟ್ ಹಾಗೂ ಫಿನ್ ಅಲೆನ್ ಆಡಿದ 175 ರನ್‌ಗಳ ಜತೆಯಾಟ ಟಿ ಟ್ವೆಂಟಿ ವಿಶ್ವಕಪ್‌ನಲ್ಲಿ ಯಾವುದೇ ವಿಕೆಟ್‌ನಲ್ಲಿ ದಾಖಲಾದ ಗರಿಷ್ಟ ಜತೆಯಾಟದ ರನ್ ಆಗಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

Most Popular