HomeLatest NewsT20 World Cup 2026: ದೇವರೇ ಧರೆಗಿಳಿದು ಬಂದ್ರೂ ಭಾರತ ಸೆಮಿಫೈನಲ್ ತಲುಪಲ್ಲ, ವಿಂಡೀಸ್ ವಿರುದ್ಧ...

T20 World Cup 2026: ದೇವರೇ ಧರೆಗಿಳಿದು ಬಂದ್ರೂ ಭಾರತ ಸೆಮಿಫೈನಲ್ ತಲುಪಲ್ಲ, ವಿಂಡೀಸ್ ವಿರುದ್ಧ ಸೋಲ್ತಾರೆ ಎಂದ ಪಾಕ್ ಕ್ರಿಕೆಟಿಗ

ಪ್ರಸ್ತುತ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿ 2026ರ ಸೂಪರ್ 8 ಸುತ್ತು ಮುಕ್ತಾಯದ ಹಂತ ತಲುಪಿದ್ದು, ಈಗಾಗಲೇ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಯಶಸ್ವಿಯಾಗಿ ಸೆಮಿಫೈನಲ್ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡಿವೆ.

ಇನ್ನುಳಿದ ಎರಡು ಸ್ಥಾನಗಳಿಗಾಗಿ ಇದೀಗ ಜಟಾಪಟಿ ಶುರುವಾಗಿದ್ದು, ಪಾಕಿಸ್ತಾನ ಶ್ರೀಲಂಕಾ ವಿರುದ್ಧ ದೊಡ್ಡ ಗೆಲುವು ಸಾಧಿಸಿದರೆ ಸೆಮಿ ಫೈನಲ್ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಳ್ಳುವ ಸಾಧ್ಯತೆ ಇದ್ದು, ನಾಳೆ ನಡೆಯಲಿರುವ ಪಂದ್ಯದಲ್ಲಿ ಭಾರತ ವೆಸ್ಟ್ ಇಂಡೀಸ್ ವಿರುದ್ಧ ಗೆದ್ದರೆ ಸೆಮಿ ಫೈನಲ್ ಹಂತ ತಲುಪಲಿದೆ.

ಸೂಪರ್ 8 ಹಂತದಲ್ಲಿ ಮೊದಲಿಗೆ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು ಕಂಡು ಬಳಿಕ ಜಿಂಬಾಂಬೆ ವಿರುದ್ಧ ದೊಡ್ಡ ಗೆಲುವು ಕಂಡ ಭಾರತ ಇದೀಗ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಬೇಕಾಗಿರುವುದು ದೊಡ್ಡ ಸವಾಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಪಂದ್ಯದ ಕುರಿತು ಲೆಕ್ಕಾಚಾರ ಆರಂಭವಾಗಿದ್ದು ಹಲವಾರು ಮಂದಿ ಭವಿಷ್ಯ ನುಡಿಯುತ್ತಿದ್ದಾರೆ. ಅದರಲ್ಲೂ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಮೀರ್ ಯೂಟ್ಯೂಬ್ ಚಾನೆಲ್ ಸಂದರ್ಶನ ಒಂದರಲ್ಲಿ ಆ ದೇವರೇ ಧರೆಗಿಳಿದು ಬಂದರು ಭಾರತ ಸೆಮಿ ಫೈನಲ್ ತಲುಪುವುದಿಲ್ಲ ಎಂದು ಹೇಳಿಕೆ ನೀಡಿದ್ದರು.

ಇದೀಗ ತಮ್ಮ ಹೇಳಿಕೆಯನ್ನು ಮಹಮ್ಮದ್ ಅಮೀರ್ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಮೊದಲೇ ಹೇಳಿದಂತೆ ಪಾಕಿಸ್ತಾನ ಸೆಮಿ ಫೈನಲ್ ತಲುಪಲಿದೆ, ಆದರೆ ಭಾರತ ತಲುಪುವುದಿಲ್ಲ ಎಂದು ಅಮೀರ್ ತಿಳಿಸಿದ್ದಾರೆ. ಇಂದು ಶ್ರೀಲಂಕಾವನ್ನು ಮಣಿಸಿ ಪಾಕಿಸ್ತಾನ ಸೆಮಿ ಫೈನಲ್ ತಲುಪಲಿದೆ, ಆದರೆ ನಾಳೆ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಸೋಲಲಿದೆ ಎಂದು ಅಮೀರ್ ಹೇಳಿದ್ದಾರೆ.

ಮುಂದುವರೆದು ಪಾಕಿಸ್ತಾನ ಸೆಮಿ ಫೈನಲ್ ತಲುಪುವುದು ಮ್ಯಾಟರ್ ಅಲ್ಲ, ಭಾರತ ಶತಾಯಗತಾಯ ಸೆಮಿಫೈನಲ್ ತಲುಪುವುದಿಲ್ಲ ಎಂದು ಅಮೀರ್ ಹೇಳಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular