ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ ಗ್ರೂಪ್ ಹಂತದ 36ನೇ ಪಂದ್ಯ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಭಾರತ ಹಾಗೂ ನೆದರ್ಲೆಂಡ್ಸ್ ತಂಡಗಳು ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆರಿಸಿಕೊಂಡು ಶಿವಮ್ ದುಬೆ ಸ್ಪೋಟಕ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 193 ರನ್ ಕಲೆಹಾಕಿ ನೆದರ್ಲೆಂಡ್ಸ್‌ಗೆ 194 ರನ್‌ಗಳ ಕಠಿಣ ಗುರಿಯನ್ನು ನೀಡಿದೆ.
ಭಾರತದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಡಕ್‌ಔಟ್ ಆದರೆ, ಇಶಾನ್ ಕಿಶನ್ 18 ರನ್ ಗಳಿಸಿದರು. ಇನ್ನುಳಿದಂತೆ ತಿಲಕ್ ವರ್ಮಾ 31 ರನ್ ಕಲೆಹಾಕಿದರೆ, ನಾಯಕ ಸೂರ್ಯಕುಮಾರ್ ಯಾದವ್ 38 ರನ್ ಗಳಿಸಿದರು. ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಿವಮ್ ದುಬೆ 31 ಎಸೆತಗಳಲ್ಲಿ 4 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 66 ರನ್ ಚಚ್ಚಿದರು. ಇನ್ನುಳಿದಂತೆ ಹಾರ್ದಿಕ್ ಪಾಂಡ್ಯ 30 ರನ್ ಹಾಗೂ ರಿಂಕು ಸಿಂಗ್ 3 ಎಸೆತಗಳಲ್ಲಿ ಅಜೇಯ 6 ರನ್ ಬಾರಿಸಿದರು.
ನೆದರ್ಲೆಂಡ್ಸ್ ಪರ ಲೋಗನ್ ವಾನ್ ಬೀಕ್ ಮೂರು ವಿಕೆಟ್, ಆರ್ಯನ್ ದತ್ ಎರಡು ವಿಕೆಟ್ ಹಾಗೂ ಕೈಲ್ ಕ್ಲೈನ್ ಒಂದು ವಿಕೆಟ್ ಪಡೆದರು.

