HomeLatest Newsಮತ್ತೆ ಚಾಂಪಿಯನ್ ಆದ ಭಾರತ: ಒಮ್ಮೆಯೂ ಸೋಲದೇ ಆಡಿದ ಎಲ್ಲ 7 ಫೈನಲ್ ಪಂದ್ಯಗಳನ್ನೂ ಗೆದ್ದುಬೀಗಿದ...

ಮತ್ತೆ ಚಾಂಪಿಯನ್ ಆದ ಭಾರತ: ಒಮ್ಮೆಯೂ ಸೋಲದೇ ಆಡಿದ ಎಲ್ಲ 7 ಫೈನಲ್ ಪಂದ್ಯಗಳನ್ನೂ ಗೆದ್ದುಬೀಗಿದ ಏಕೈಕ ಕ್ರಿಕೆಟಿಗ ಈತ!

ನಿನ್ನೆ ( ಮಾರ್ಚ್ 8 ) ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಫೈನಲ್ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 96 ರನ್‌ಗಳ ಬೃಹತ್ ಗೆಲುವು ದಾಖಲಿಸಿ ಮೂರನೇ ಬಾರಿಗೆ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆರಿಸಿಕೊಂಡು ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಭಾರತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 255 ರನ್ ಕಲೆಹಾಕಿ ನ್ಯೂಜಿಲೆಂಡ್‌ಗೆ 256 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ನ್ಯೂಜಿಲೆಂಡ್ 19 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲ್‌ಔಟ್ ಆಯಿತು.

ಬ್ಯಾಟಿಂಗ್‌ನಲ್ಲಿ ಅಬ್ಬರಿಸಿ ಕಿವೀಸ್‌ ಕಾಡಿದ ಭಾರತ ತಂಡದ ಬೌಲಿಂಗ್ ವಿಭಾಗ ಸಹ ನ್ಯೂಜಿಲೆಂಡ್ ತಂಡದ ಆಟಗಾರರನ್ನು ಎಲ್ಲಿಯೂ ಗೆಲುವಿನ ಕುರಿತು ಚಿಂತನೆ ಮಾಡಲು ಬಿಡದ ಮಟ್ಟಿಗೆ ಕಟ್ಟಿಹಾಕಿಬಿಟ್ಟಿತು. ಈ ಮೂಲಕ ಭಾರತ ಮೂರನೇ ಬಾರಿಗೆ ಚಾಂಪಿಯನ್ ಆಗಿ ದಾಖಲೆ ಬರೆದಿದ್ದು, ಇದರ ಜತೆಗೆ ಟೀಮ್ ಇಂಡಿಯಾದ ಕ್ರಿಕೆಟಿಗನೋರ್ವ ಆಡಿದ ತನ್ನ ಏಳನೇ ಫೈನಲ್ ಪಂದ್ಯದಲ್ಲಿ ಗೆಲುವನ್ನು ಕಂಡು ಆಡಿದ ಯಾವ ಫೈನಲ್ ಪಂದ್ಯದಲ್ಲಿಯೂ ಸೋಲಿಲ್ಲ ಎಂಬ ವಿಶೇಷ ಸಾಧನೆ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೌದು, ಭಾರತ ತಂಡದ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಈ ಸಾಧನೆ ಮಾಡಿರುವ ಕ್ರಿಕೆಟಿಗ. ಚೊಚ್ಚಲ ಟಿ ಟ್ವೆಂಟಿ ವಿಶ್ವಕಪ್‌ನಲ್ಲಿ (2007) ಭಾರತದ ಪರ ಕಣಕ್ಕಿಳಿದಿದ್ದ ಗೌತಮ್ ಗಂಭೀರ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಬಳಿಕ ನಡೆದ 2011ರ ಏಕದಿನ ವಿಶ್ವಕಪ್‌ನಲ್ಲೂ ಸಹ ಭಾರತ ಗೆದ್ದಿತ್ತು, ಆ ತಂಡದಲ್ಲಿ ಗಂಭೀರ್ ಇದ್ದರು. 2012 ಹಾಗೂ 2014ರ ಐಪಿಎಲ್ ಟೂರ್ನಿಗಳಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದ ಗಂಭೀರ್ ಆ ಎರಡೂ ಆವೃತ್ತಿಯಲ್ಲೂ ಚಾಂಪಿಯನ್ ಆದರು.

2024ರ ಐಪಿಎಲ್ ಟೂರ್ನಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತೊಮ್ಮೆ ಚಾಂಪಿಯನ್ ಆಯಿತು. ಆ ಬಾರಿ ಗೌತಮ್ ಗಂಭೀರ್ ಕೆಕೆಆರ್‌ನ ಮಾರ್ಗದರ್ಶಕನ ಜವಾಬ್ದಾರಿ ಹೊತ್ತಿದ್ದರು. ಕಳೆದ ವರ್ಷ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡವನ್ನು ಕೋಚ್ ಆಗಿ ಮುನ್ನಡೆಸಿ ಗೆದ್ದು ಇದೀಗ ಟಿ ಟ್ವೆಂಟಿ ವಿಶ್ವಕಪ್‌ನಲ್ಲಿಯೂ ಕೋಚ್ ಆಗಿ ಗೆದ್ದಿರುವ ಗೌತಮ್ ಗಂಭೀರ್ ಆಡಿದ ಪ್ರಮುಖ 7 ಫೈನಲ್ ಪಂದ್ಯಗಳಲ್ಲಿಯೂ ಯಶಸ್ಸು ಸಾಧಿಸಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular