HomeSportsT20 World Cup 2026: ಹ್ಯಾರಿ ಬ್ರೂಕ್ ಶತಕಕ್ಕೆ ಪಾಕ್ ಕಂಗಾಲು; ಸೂಪರ್ 8ರಲ್ಲಿ ಎರಡನೇ...

T20 World Cup 2026: ಹ್ಯಾರಿ ಬ್ರೂಕ್ ಶತಕಕ್ಕೆ ಪಾಕ್ ಕಂಗಾಲು; ಸೂಪರ್ 8ರಲ್ಲಿ ಎರಡನೇ ಗೆಲುವು ಕಂಡ ಇಂಗ್ಲೆಂಡ್

ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಸೂಪರ್ 8 ಪಂದ್ಯದಲ್ಲಿ ಇಂಗ್ಲೆಂಡ್ 2 ವಿಕೆಟ್‌ಗಳ ಗೆಲುವನ್ನು ಸಾಧಿಸಿದೆ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನದ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 164 ರನ್ ಕೆಲಹಾಕಿ ಇಂಗ್ಲೆಂಡ್‌ಗೆ 165 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಬೇಗನೆ ಮೂರು ವಿಕೆಟ್ ಕಳೆದುಕೊಂಡರೂ ನಾಯಕ ಹ್ಯಾರಿ ಬ್ರೂಕ್ ಶತಕದ ನೆರವಿನಿಂದ 19.1 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 166 ರನ್ ಕಲೆಹಾಕಿತು.

ಪಾಕಿಸ್ತಾನದ ಇನ್ನಿಂಗ್ಸ್: ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ತಂಡ ಆರಂಭಿಕ ಆಘಾತ ಅನುಭವಿಸಿದರೂ ಜವಾಬ್ದಾರಿಯುತ ಆಟವನ್ನಾಡಿ 45 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 63 ರನ್ ಬಾರಿಸಿದರು. ಇನ್ನುಳಿದಂತೆ ಸೈಮ್ ಆಯೂಬ್ 7, ನಾಯಕ ಸಲ್ಮಾನ್ ಅಲಿ ಆಘಾ 5, ಬಾಬರ್ ಆಜಮ್ 25, ಶದಾಬ್ ಖಾನ್ 23, ಫಾಖರ್ ಜಮಾನ್ 25, ಉಸ್ಮಾನ್ ಖಾನ್ 8, ಮೊಹಮ್ಮದ್ ನವಾಜ್ ಡಕ್‌ಔಟ್, ಶಾಹೀನ್ ಅಫ್ರಿದಿ 2 ಹಾಗೂ ಸಲ್ಮಾನ್ ಮಿರ್ಜಾ ಅಜೇಯ 2 ರನ್ ಗಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂಗ್ಲೆಂಡ್ ಪರ ಲಿಯಾಮ್ ಡಾಸನ್ ಮೂರು ವಿಕೆಟ್, ಜೋಫ್ರಾ ಆರ್ಚರ್ ಹಾಗೂ ಜೇಮಿ ಓವರ್ಟನ್ ಎರಡು ವಿಕೆಟ್ ಮತ್ತು ಆದಿಲ್ ರಶೀದ್ ಒಂದು ವಿಕೆಟ್ ಪಡೆದರು.

ಇಂಗ್ಲೆಂಡ್ ಇನ್ನಿಂಗ್ಸ್: ತಂಡದ ಪರ ಫಿಲ್ ಸಾಲ್ಟ್ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದರು. ಬೆನ್ನಲ್ಲೇ 2 ರನ್ ಗಳಿಸಿದ್ದ ಜೋಸ್ ಬಟ್ಲರ್ ಹಾಗೂ 8 ರನ್‌ಗೆ ಜೇಕಬ್ ಬೆಥೆಲ್ ವಿಕೆಟ್ ಒಪ್ಪಿಸಿದರೆ, ಟಾಮ್ ಬ್ಯಾಂಟನ್ 2 ರನ್‌ಗೆ ಪೆವಿಲಿಯನ್ ಸೇರಿಕೊಂಡರು. ಹೀಗೆ ಒಂದೆಡೆ ವಿಕೆಟ್ ಬೀಳುತ್ತಿದ್ದರೆ ಮತ್ತೊಂದೆಡೆ ಏಕಾಂಗಿ ಹೋರಾಟ ನಡೆಸಿದ ಹ್ಯಾರಿ ಬ್ರೂಕ್ 51 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 100 ರನ್ ಬಾರಿಸಿದರು. ಇನ್ನುಳಿದಂತೆ ಸ್ಯಾಮ್ ಕರನ್ 16, ವಿಲ್ ಜ್ಯಾಕ್ಸ್ 28, ಜೇಮಿ ಓವರ್ಟನ್ ಡಕ್‌ಔಟ್, ಲಿಯಾಮ್ ಡಾಸನ್ 1 ಹಾಗೂ ಜೋಫ್ರಾ ಆರ್ಚರ್ ಅಜೇಯ 4 ರನ್ ಬಾರಿಸಿದರು.

ಶಾಹೀನ್ ಆಫ್ರಿದಿ ನಾಲ್ಕು ವಿಕೆಟ್, ಮೊಹಮ್ಮದ್ ನವಾಜ್ ಹಾಗೂ ಉಸ್ಮಾನ್ ತಾರಿಖ್ ತಲಾ ಎರಡು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular