HomeLatest Newsಸೆಮಿಫೈನಲ್‌ನಲ್ಲೂ ಮುಗ್ಗರಿಸಿದ ಅಭಿಷೇಕ್ ಶರ್ಮಾ: ತೀರಾ ಕೆಟ್ಟ ಆಟ ಆಡಿದ್ರೂ ಇವನಿಗ್ಯಾಕೆ ಇಷ್ಟು ಅವಕಾಶ?

ಸೆಮಿಫೈನಲ್‌ನಲ್ಲೂ ಮುಗ್ಗರಿಸಿದ ಅಭಿಷೇಕ್ ಶರ್ಮಾ: ತೀರಾ ಕೆಟ್ಟ ಆಟ ಆಡಿದ್ರೂ ಇವನಿಗ್ಯಾಕೆ ಇಷ್ಟು ಅವಕಾಶ?

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ( ಮಾರ್ಚ್ 5 ) ನಡೆಯುತ್ತಿರುವ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿವೆ.

ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆರಿಸಿಕೊಂಡಿದ್ದು, ಭಾರತ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದೆ. ಅದರಂತೆ ಬ್ಯಾಟಿಂಗ್‌ಗೆ ಇಳಿದ ಭಾರತ ತಂಡದ ಪರ ಆರಂಭಿಕರಾಗಿ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಕಣಕ್ಕಿಳಿದರು.

ಸಂಜು ಸ್ಯಾಮ್ಸನ್ ಮೊದಲ ಓವರ್‌ನಲ್ಲೇ ಒಂದು ಫೋರ್ ಹಾಗೂ ಒಂದು ಸಿಕ್ಸರ್ ಬಾರಿಸಿ ಸಿಂಗಲ್ ತೆಗೆದುಕೊಂಡರು. ಓವರ್‌ನ ಅಂತಿಮ ಎಸೆತಕ್ಕೆ ಸಿಂಗಲ್ ತೆಗೆದುಕೊಂಡ ಅಭಿಷೇಕ್ ಶರ್ಮಾ ವಿಲ್ ಜ್ಯಾಕ್ಸ್ ಎಸೆದ ಎರಡನೇ ಓವರ್‌ನಲ್ಲಿ ಮೊದಲ ಓವರ್‌ಗೆ ಬೌಂಡರಿ ಬಾರಿಸಿ ಹ್ಯಾಟ್ರಿಕ್ ಡಾಟ್ ಬಾಲ್ ತಿಂದು ಐದನೇ ಎಸೆತದಲ್ಲಿ ಮತ್ತೆ ಬೌಂಡರಿ ಬಾರಿಸಿ ಪರವಾಗಿಲ್ಲ ಎಂಬ ಆರಂಭ ಮಾಡುತ್ತಿರುವಾಗಲೇ ಕೊನೆಯ ಎಸೆತಕ್ಕೆ ಸಿಕ್ಸರ್ ಬಾರಿಸಲು ಹೋಗಿ ಫಿಲ್ ಸಾಲ್ಟ್‌ಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಮೂಲಕ ಅಭಿಷೇಕ್ ಶರ್ಮಾ ಮತ್ತೊಂದು ಪಂದ್ಯದಲ್ಲಿ ಮುಗ್ಗರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸ್ಲಾಗರ್ ಎಂಬ ಟ್ರೋಲ್ ಶುರುವಾಗಿವೆ. ಟೂರ್ನಿಯಲ್ಲಿ ಜಿಂಬಾಬ್ವೆ ಹೊರತುಪಡಿಸಿ ಉಳಿದೆಲ್ಲ ಬಲಿಷ್ಠ ತಂಡಗಳ ವಿರುದ್ಧ ಮುಗ್ಗರಿಸಿರುವ ಅಭಿಷೇಕ್ ಶರ್ಮಾಗೆ ಪದೇಪದೇ ಅವಕಾಶವೇಕೆ ಎಂಬ ಪ್ರಶ್ನೆ ಮತ್ತೊಮ್ಮೆ ಎದ್ದಿದೆ. ಪಂದ್ಯದಲ್ಲಿ 7 ಎಸೆತ ಎದುರಿಸಿದ ಅಭಿಷೇಕ್ ಶರ್ಮಾ ಎರಡುಅ ಬೌಂಡರಿ ಸಹಿತ 9 ರನ್ ಕಲೆಹಾಕಿದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular