HomeLatest NewsT20 World Cup 2026: ಟೂರ್ನಿಯಿಂದ ಹರ್ಷಿತ್ ರಾಣಾ ಔಟ್; ಬೇರೆ ಆಟಗಾರನನ್ನು ಹುಡುಕುತ್ತಿದ್ದೇವೆ ಎಂದ...

T20 World Cup 2026: ಟೂರ್ನಿಯಿಂದ ಹರ್ಷಿತ್ ರಾಣಾ ಔಟ್; ಬೇರೆ ಆಟಗಾರನನ್ನು ಹುಡುಕುತ್ತಿದ್ದೇವೆ ಎಂದ ಸೂರ್ಯ!

ನಿನ್ನೆಯಷ್ಟೇ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿ ಮುಗಿದಿದ್ದು, ಇಂದು ಐಸಿಸಿ ಕಿರಿಯರ ವಿಶ್ವಕಪ್ ಟೂರ್ನಿ ಸಹ ಮುಕ್ತಾಯಗೊಳ್ಳುತ್ತಿದೆ. ಹೀಗೆ ಎರಡು ಮೆಗಾ ಟೂರ್ನಿಗಳು ಮುಕ್ತಾಯವಾಗುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳಲ್ಲಿ ನಾಳೆಯಿಂದ ( ಫೆಬ್ರವರಿ 7 ) ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಶುರುವಾಗಲಿದೆ ಎನ್ನುವ ಸಂತಸ ಮನೆಮಾಡಿದ್ದು, ಮನರಂಜನೆ ಮುಂದುವರಿಯಲಿದೆ.

ಉದ್ಘಾಟನಾ ಪಂದ್ಯ ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿದ್ದು, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಾಳೆಯೇ ನಡೆಯಲಿರುವ ಮೂರನೇ ಪಂದ್ಯದಲ್ಲಿ ಭಾರತ ನಮೀಬಿಯಾ ವಿರುದ್ಧ ಕಣಕ್ಕಿಳಿಯಲಿದೆ.

ಇನ್ನು ಇದಕ್ಕೂ ಮುನ್ನ ನಡೆದ ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ, ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯವನ್ನೂ ಸಹ ಗೆದ್ದಿರುವ ಭಾರತ ಈ ಬಾರಿ ಕಪ್ ಗೆಲ್ಲುವ ರೇಸ್‌ನಲ್ಲಿರುವ ಫೇವರಿಟ್ ತಂಡಗಳಲ್ಲೊಂದು. ಅದಕ್ಕಾಗಿ ಎಲ್ಲ ವಿಭಾಗಗಳೂ ಸಹ ಸಮತೋಲನದಿಂದ ಹಾಗೂ ದಕ್ಷತೆಯಿಂದ ಕೂಡಿರುವ ತಂಡವನ್ನು ಬಿಸಿಸಿಐ ಆರಿಸಿದೆ. ಆದರೆ ಟೂರ್ನಿಯ ಆರಂಭಕ್ಕೂ ಮುನ್ನವೇ ತಂಡದಲ್ಲಿ ಗಾಯದ ಸಮಸ್ಯೆ ತಲೆದೋರಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಂಡದ ಪ್ರಮುಖ ಬೌಲರ್ ಹಾಗೂ ಅಂತಿಮ ಹಂತದಲ್ಲಿ ರನ್ ಹೊಳೆ ಹರಿಸಬಲ್ಲ ಸಾಮರ್ಥ್ಯವಿರುವ ಹರ್ಷಿತ್ ರಾಣಾ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಹೀಗಾಗಿ ಹರ್ಷಿತ್ ರಾಣಾ ಟೂರ್ನಿಗೆ ಅಲಭ್ಯರಾಗಲಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಹರ್ಷಿತ್ ರಾಣಾ ರೂಲ್ಡ್ ಔಟ್ ಎಂದೇ ಮಾತನಾಡಿಕೊಳ್ಳಲಾಗುತ್ತಿದೆ. ನಿನ್ನೆ ( ಫೆಬ್ರವರಿ 5 ) ನಡೆದ ಪತ್ರಿಕಾಗೋಷ್ಠಿಯಲ್ಲಿ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಸಹ ಈ ಕುರಿತು ಮಾತನಾಡಿದ್ದಾರೆ.

‘ಹರ್ಷಿತ್ ರಾಣಾ ಇನ್ನೂ ಸಹ ಟೂರ್ನಿಯಿಂದ ಹೊರಬಿದ್ದಿಲ್ಲ. ಆದರೆ ಫಿಸಿಯೊ ರಾಣಾ ಇನ್ನೂ ಚೇತರಿಸಿಕೊಂಡಿಲ್ಲ ಎಂದು ಹೇಳಿದ್ದಾರೆ’ ಎಂದು ಹೇಳುವ ಮೂಲಕ ಸೂರ್ಯಕುಮಾರ್ ಯಾದವ್ ಹರ್ಷಿತ್ ರಾಣಾ ಗಾಯದ ಸಮಸ್ಯೆ ನಿಜ ಎಂಬುದನ್ನು ತಿಳಿಸಿದ್ದಾರೆ.

ಅಲ್ಲದೇ ‘ಬ್ಯಾಟಿಂಗ್ ಮಾಡಬಲ್ಲ ಯಾವ ಬೌಲರ್ ಕಳೆದ ಒಂದೆರಡು ವರ್ಷಗಳಲ್ಲಿ ಚೆನ್ನಾಗಿ ಪ್ರದರ್ಶನ ನೀಡಿದ್ದಾರೆ ಎಂಬುದನ್ನು ನೋಡಲಿದ್ದೇವೆ. ಆದರೆ ಒಂಬತ್ತನೇ ಆಟಗಾರನೂ ರನ್ ಬಾರಿಸಬೇಕು ಎಂದು ನಿರೀಕ್ಷಿಸಿದರೆ ಟಾಪ್ 8 ಬ್ಯಾಟ್ಸ್‌ಮನ್‌ಗಳು ಇರುವುದು ಯಾವುದಕ್ಕಾಗಿ? ನಾವು ಉತ್ತಮ ಆಟಗಾರನನ್ನು ಆರಿಸಲಿದ್ದೇವೆ’ ಎಂದರು.

ಹೀಗಾಗಿ ಹರ್ಷಿತ್ ರಾಣಾ ಟೂರ್ನಿಯಿಂದ ಹೊರಬೀಳುವ ಲಕ್ಷಣಗಳು ಕಾಣುತ್ತಿದ್ದು, ಬದಲಿ ಆಟಗಾರನಾಗಿ ಯಾರು ತಂಡ ಸೇರಲಿದ್ದಾರೆ ಎಂಬುದನ್ನು ನೋಡಬೇಕಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

Most Popular