ಐಸಿಸಿ ಪುರುಷರ ಟಿ-20 ವಿಶ್ವಕಪ್ ಅನ್ನು ಪಾಕಿಸ್ತಾನ ಬಹಿಷ್ಕಾರ ಮಾಡಿದೆ. ಬಾಂಗ್ಲಾದೇಶ ಈಗಾಗಲೇ ಟೂರ್ನಿಯಿಂದ ಹೊರ ಹೋಗಿದೆ. ಫೆಬ್ರವರಿ 15ರಂದು ಭಾರತ-ಪಾಕಿಸ್ತಾನ ಪಂದ್ಯ ನಡೆಯಬೇಕಿತ್ತು. ಈಗ ಪಾಕ್ ನಿಲುವಿನ ಕುರಿತು ಚರ್ಚೆಗಳು ನಡೆಯುತ್ತಿವೆ.
ಪಾಕಿಸ್ತಾನ ತನ್ನ ತೀರ್ಮಾನ ಘೋಷಿಸಿದ ನಂತರ ಭಾರತ ತಂಡದ ನಡೆ ಏನು? ಎಂಬುದು ಚರ್ಚೆಯ ವಿಚಾರವಾಗಿದೆ. ಭಾರತ ತಂಡ ಶ್ರೀಲಂಕಾಕ್ಕೆ ಪ್ರಯಾಣಿಸಲಿದೆ ಮತ್ತು ಪಾಕಿಸ್ತಾನ ಜೊತೆಗಿನ ಪಂದ್ಯದ ದಿನದ ಎಲ್ಲಾ ಔಪಚಾರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಿದೆ.
ಬಿಸಿಸಿಐ ಮೂಲಗಳ ಪ್ರಕಾರ ಭಾರತವು ಐಸಿಸಿ ಪಂದ್ಯದ ದಿನದ ನಿಯಮಗಳನ್ನು ಅನುಸರಿಸಲಿದೆ. ತಂಡವು ಮೊದಲು ರೂಪಿಸಿದ ಯೋಜನೆಯಂತೆ ಅಭ್ಯಾಸ ಮಾಡುತ್ತದೆ, ಪಂದ್ಯದ ಪೂರ್ವಭಾವಿ ಪತ್ರಿಕಾಗೋಷ್ಠಿ ನಡೆಸುತ್ತದೆ ಮತ್ತು ಕೊಲಂಬೊದ ಕ್ರಿಕೆಟ್ ಮೈದಾನಕ್ಕೆ ಸಮಯಕ್ಕೆ ಸರಿಯಾಗಿ ತಲುಪುತ್ತದೆ.
ಪಂದ್ಯದ ರೆಫರಿ ಅಧಿಕೃತವಾಗಿ ಪಂದ್ಯವನ್ನು ರದ್ದುಗೊಳಿಸುವವರೆಗೆ ಭಾರತವು ಕಾಯುತ್ತದೆ. ಈ ನಡೆ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ-20 ವಿಶ್ವಕಪ್ ಸಮಯದಲ್ಲಿ ಭಾರತವು ಐಸಿಸಿ ನಿಯಮಗಳನ್ನು ಸಂಪೂರ್ಣವಾಗಿ ಅನುಸರಿಸುವುದನ್ನು ಖಚಿತಪಡಿಸುತ್ತದೆ.
ಪಾಕಿಸ್ತಾನ ಈಗಾಗಲೇ ಅಧಿಕೃತ ಪೋಸ್ಟ್ ಮೂಲಕ ವಿಶ್ವಕಪ್ ಬಹಿಷ್ಕಾರದ ನಿರ್ಧಾರವನ್ನು ದೃಢಪಡಿಸಿದೆ. ಫೆಬ್ರವರಿ 15ರಂದು ಭಾರತದ ವಿರುದ್ಧದ ಪಂದ್ಯಾವಳಿಯಲ್ಲಿ ಭಾಗವಹಿಸಲು ಅನುಮತಿಯನ್ನು ನೀಡಿದರೂ ಮೈದಾನಕ್ಕೆ ಇಳಿಯುವುದಿಲ್ಲ ಎಂದು ಸರ್ಕಾರ ಹೇಳಿದೆ.
ಆದರೆ ಈ ತೀರ್ಮಾನಕ್ಕೆ ಯಾವುದೇ ಕಾರಣ ನೀಡಲಾಗಿಲ್ಲ. ಈ ಹಠಾತ್ ಬೆಳವಣಿಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಾವಳಿಗೆ ಮುಂಚಿತವಾಗಿ ದೊಡ್ಡ ವಿವಾದವಾಗಿದೆ. ಇದು ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಐಸಿಸಿ ಎದುರಿಸುತ್ತಿರುವ ಮತ್ತೊಂದು ಸವಾಲಾಗಿದೆ.
ಬಾಂಗ್ಲಾದೇಶವು ಭದ್ರತಾ ಕಾರಣವನ್ನು ಉಲ್ಲೇಖಿಸಿ ಭಾರತಕ್ಕೆ ಪ್ರಯಾಣ ಮಾಡಲು ನಿರಾಕರಿಸಿತ್ತು. ಆಗ ಬಾಂಗ್ಲಾದೇಶವನ್ನು ನಾವು ಬೆಂಬಲಿಸುತ್ತೇವೆ ಎಂದು ಪಾಕಿಸ್ತಾನ ಹೇಳಿತ್ತು. ಪಿಸಿಬಿ ಅಧ್ಯಕ್ಷ ಮತ್ತು ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಕಳೆದ ತಿಂಗಳು ಐಸಿಸಿ ನಿರ್ಧಾರಗಳು ಮತ್ತು ಪಾಕಿಸ್ತಾನದ ನಿಲುವನ್ನು ಚರ್ಚಿಸಲು ಪ್ರಧಾನಿ ಶಹಬಾಜ್ ಷರೀಫ್ ಅವರನ್ನು ಭೇಟಿಯಾಗಿದ್ದರು.
ಭಾರತವು ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಟಿ-20 ಸರಣಿಯನ್ನು ಗೆದ್ದ ನಂತರ ವಿಶ್ವಕಪ್‌ಗೆ ಪ್ರವೇಶ ಪಡೆದಿದೆ. ಪಾಕಿಸ್ತಾಣದ ಟಿ-20 ವಿಶ್ವಕಪ್ ಬಹಿಷ್ಕಾರ ವಿಶ್ವದಾದ್ಯಂತದ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ. ಫೆಬ್ರವರಿ 15ರಂದು ಭಾರತ ವಿರುದ್ಧದ ಯಾವ ತಂಡ ಆಡಲಿದೆ? ಎಂದು ಪ್ರಶ್ನಿಸಲಾಗುತ್ತಿದೆ.
ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ಪಾಕಿಸ್ತಾನದ ನಿರ್ಧಾರವನ್ನು ಅನಗತ್ಯವಾದ ನಾಟಕ ಎಂದು ಟೀಕಿಸಿದ್ದಾರೆ. ಪಂದ್ಯಾವಳಿಗೆ ಷರತ್ತುಬದ್ಧ ಅನುಮೋದನೆಯನ್ನು ನೀಡಲಾಗಿದೆ. ಇದು ಜನರನ್ನು ದಾರಿ ತಪ್ಪಿಸುವ ಮತ್ತು ಬಾಂಗ್ಲಾದೇಶದೊಂದಿಗೆ ತನ್ನ ಒಗ್ಗಟ್ಟನ್ನು ಪ್ರದರ್ಶಿಸುವ ತಂತ್ರ ಎಂದು ದೂರಿದ್ದಾರೆ.
ಈಗಾಗಲೇ ಪಾಕಿಸ್ತಾನ ಕೊಲಂಬೊದಲ್ಲಿ ಭಾರತ ವಿರುದ್ಧದ ಫೆಬ್ರವರಿ 15ರ ಪಂದ್ಯವನ್ನು ಬಹಿಷ್ಕರಿಸುತ್ತದೆ ಎಂದು ಘೋಷಣೆ ಮಾಡಿದೆ. ಐಸಿಸಿ ವಿಶ್ವ ಟಿ-20 2026ರಲ್ಲಿ ಭಾಗವಹಿಸಲು ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಆದರೆ ಪಾಕಿಸ್ತಾನ ಕ್ರಿಕೆಟ್ ತಂಡವು ಭಾರತದ ವಿರುದ್ಧ ಪಂದ್ಯದಲ್ಲಿ ಮೈದಾನಕ್ಕೆ ಇಳಿಯುವುದಿಲ್ಲ ಎಂದು ಸರ್ಕಾರದ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಲಾಗಿದೆ.

