HomeLive News8 ವರ್ಷದ ಬಾಲಕಿ ಮೇಲೆ ಕ್ಯಾನ್ಸರ್ ಪೀಡಿತ ವೃದ್ಧನಿಂದ ಲೈಂಗಿಕ ದೌರ್ಜನ್ಯ

8 ವರ್ಷದ ಬಾಲಕಿ ಮೇಲೆ ಕ್ಯಾನ್ಸರ್ ಪೀಡಿತ ವೃದ್ಧನಿಂದ ಲೈಂಗಿಕ ದೌರ್ಜನ್ಯ

ಹುಬ್ಬಳ್ಳಿ: 8 ವರ್ಷದ ಬಾಲಕಿ ಮೇಲೆ ಕ್ಯಾನ್ಸರ್ ಪೀಡಿತ 75 ವರ್ಷದ ವೃದ್ಧನೊಬ್ಬ ಲೈಂಗಿಕ ದೌರ್ಜನ್ಯವೆಸಗಿರುವ ಘೋರ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಜನವರಿ 29 ರಂದು ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಹುಬ್ಬಳ್ಳಿ-ಧಾರವಾಡ ಜನರು ಬೆಚ್ಚಿ ಬಿದ್ದಿದ್ದಾರೆ. ಪಕ್ಕದ ಮನೆಯ ಬಾಲಕಿ ಮೇಲೆ ವೃದ್ಧ ಅಟ್ಟಹಾಸ ಮೆರೆದಿದ್ದಾನೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಕ್ಕದ ಮನೆಯ 8 ವರ್ಷದ ಬಾಲಕಿಯನ್ನು ಚಾಅಕೊಲೇಟ್ ಕೊಡುತ್ತೇನೆ ಎಂದು ಮನೆಗೆ ಕರೆದ 75 ವರ್ಷದ ವೃದ್ಧ, ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ವಿಷಯ ತಿಳಿದ ಬಾಲಕಿ ಪೋಷಕರು ಕಂಗಾಲಾಗಿದ್ದು, ವೃದ್ಧನ ವಿರುದ್ಧ ದೂರು ದಾಖಲಿಸಿದ್ದಾರೆ.

ಪೋಕ್ಸೋ ಕೇಸ್ ನಡಿ ಪ್ರಕರಣ ದಾಖಲಿಸಿಕೊಂಡಿರುವ ಅಶೋಕನಗರ ಠಾಣೆ ಪೊಲೀಸರು ವೃದ್ಧನನ್ನು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular