HomeKarnatakaಸ್ವಿಗ್ಗಿ ಡೆಲಿವರಿ ಪಾರ್ಟ್ನರ್ಸ್ ಗೆ ಬಂಪರ್ ಆಫರ್: ರಿಯಾಯಿತಿ ದರದಲ್ಲಿ ಬೈಕ್, ಸುಲಭ ಸಾಲಕ್ಕಾಗಿ ಹೀರೋ...

ಸ್ವಿಗ್ಗಿ ಡೆಲಿವರಿ ಪಾರ್ಟ್ನರ್ಸ್ ಗೆ ಬಂಪರ್ ಆಫರ್: ರಿಯಾಯಿತಿ ದರದಲ್ಲಿ ಬೈಕ್, ಸುಲಭ ಸಾಲಕ್ಕಾಗಿ ಹೀರೋ ಜೊತೆ ಒಪ್ಪಂದ

ಬೆಂಗಳೂರು: ಪ್ರಮುಖ ಆನ್‌ಲೈನ್ ಫುಡ್ ಮತ್ತು ದಿನಸಿ ಡೆಲಿವರಿ ಪ್ಲಾಟ್‌ಫಾರ್ಮ್ ಸ್ವಿಗ್ಗಿ ತನ್ನ ಡೆಲಿವರಿ ಪಾರ್ಟ್ನರ್‌ಗಳ ಅನುಕೂಲಕ್ಕಾಗಿ ವಿಶ್ವದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾದ ಹೀರೋ ಮೋಟೋಕಾರ್ಪ್ ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ.

ಈ ಒಪ್ಪಂದದ ಮೂಲಕ ಸ್ವಿಗ್ಗಿಯ ಫುಡ್ ಮತ್ತು ಇನ್‌ಸ್ಟಾಮಾರ್ಟ್ ಡೆಲಿವರಿ ಸಿಬ್ಬಂದಿಗೆ ಸುಲಭವಾಗಿ ಹಾಗೂ ಕೈಗೆಟುಕುವ ದರದಲ್ಲಿ ದ್ವಿಚಕ್ರ ವಾಹನಗಳನ್ನು ಖರೀದಿಸಲು ನೆರವು ನೀಡಲಾಗುತ್ತಿದೆ. ಜೊತೆಗೆ, ರಸ್ತೆ ಸುರಕ್ಷತೆಯ ಬಗ್ಗೆ ಉಚಿತ ತರಬೇತಿಯನ್ನೂ ನೀಡಲಾಗುತ್ತಿದೆ.

ಒಪ್ಪಂದದ ಪ್ರಮುಖ ಆಕರ್ಷಣೆಗಳೇನು?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ವಿಗ್ಗಿ ಡೆಲಿವರಿ ಪಾರ್ಟ್ನರ್‌ಗಳು ಹೀರೋ ಕಂಪನಿಯ ಯಾವುದೇ ಬೈಕ್ ಅಥವಾ ಸ್ಕೂಟರ್ ಖರೀದಿಸಿದರೆ, ಅವರಿಗೆ ವಿಶೇಷ ರಿಯಾಯಿತಿ ಸಿಗಲಿದೆ. ಅಲ್ಲದೆ, ವಾಹನ ಖರೀದಿಸಲು ಒಟ್ಟು ಮೊತ್ತದ ಶೇ. 90ರಷ್ಟು ಬ್ಯಾಂಕ್ ಸಾಲವನ್ನು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಒದಗಿಸುವ ವ್ಯವಸ್ಥೆ ಮಾಡಲಾಗಿದೆ.

ಹೀರೋ ಮೋಟೋಕಾರ್ಪ್‌ನ ರೈಡ್ ಸೇಫ್ ಇಂಡಿಯಾ ಸಿಎಸ್ಆರ್ ಯೋಜನೆಯಡಿ, ಭಾರತದಾದ್ಯಂತ ಇರುವ ಸ್ವಿಗ್ಗಿ ಡೆಲಿವರಿ ಸಿಬ್ಬಂದಿಗೆ ಡಿಜಿಟಲ್ ಹಾಗೂ ಪ್ರಾಯೋಗಿಕವಾಗಿ ರಸ್ತೆ ಸುರಕ್ಷತೆ, ಟ್ರಾಫಿಕ್ ನಿಯಮಗಳ ಪಾಲನೆ ಮತ್ತು ತುರ್ತು ಸಂದರ್ಭಗಳಲ್ಲಿ ಹೇಗೆ ವರ್ತಿಸಬೇಕು ಎಂಬ ಬಗ್ಗೆ ತರಬೇತಿ ನೀಡಲಾಗುತ್ತದೆ.

ಆ್ಯಪ್‌ನಲ್ಲೇ ವಾಹನ ಬುಕ್

ವಾಹನ ಖರೀದಿಸುವ ಪ್ರಕ್ರಿಯೆಯನ್ನು ಅತ್ಯಂತ ಸರಳವಾಗಿ ವಿನ್ಯಾಸಗೊಳಿಸಲಾಗಿದೆ. ಡೆಲಿವರಿ ಪಾರ್ಟ್ನರ್‌ಗಳು ತಮ್ಮ ಸ್ವಿಗ್ಗಿ ಆ್ಯಪ್‌ನಲ್ಲೇ ತಮಗೆ ಇಷ್ಟವಾದ ಹೀರೋ ವಾಹನವನ್ನು ಆಯ್ಕೆ ಮಾಡಬಹುದು. ಈ ಆ್ಯಪ್ ನೇರವಾಗಿ ಹೀರೋ ಮೋಟೋಕಾರ್ಪ್ ಸಿಸ್ಟಮ್‌ಗೆ ಕನೆಕ್ಟ್ ಆಗಿರುತ್ತದೆ. ವಾಹನ ಆಯ್ಕೆ ಮಾಡಿದ ಬಳಿಕ ಸಮೀಪದ ಹೀರೋ ಶೋರೂಮ್‌ಗೆ ಭೇಟಿ ನೀಡಿದರೆ, ಅಲ್ಲಿನ ಸಿಬ್ಬಂದಿ ವಾಹನ ಖರೀದಿ ಮತ್ತು ಸಾಲ ಸೌಲಭ್ಯದ ಪ್ರಕ್ರಿಯೆಗಳನ್ನು ಸುಲಭವಾಗಿ ಮುಗಿಸಿಕೊಡಲಿದ್ದಾರೆ.

ಗುರುಗ್ರಾಮದಲ್ಲಿ ಚಾಲನೆ

ಈ ಮಹತ್ವದ ಒಪ್ಪಂದದ ಅಂಗವಾಗಿ, ಇತ್ತೀಚೆಗೆ ಗುರುಗ್ರಾಮದಲ್ಲಿರುವ ಹೀರೋ ಮೋಟೋಕಾರ್ಪ್‌ನ ಟ್ರಾಫಿಕ್ ಟ್ರೈನಿಂಗ್ ಪಾರ್ಕ್‌ನಲ್ಲಿ ಸ್ವಿಗ್ಗಿ ಡೆಲಿವರಿ ಪಾರ್ಟ್ನರ್‌ಗಳಿಗಾಗಿ ರಸ್ತೆ ಸುರಕ್ಷತಾ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಡೆಲಿವರಿ ಸಿಬ್ಬಂದಿಗೆ ಉಚಿತವಾಗಿ ಫುಲ್-ಫೇಸ್ ಹೆಲ್ಮೆಟ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಸೇಫ್ಟಿ ಜಾಕೆಟ್ ಮತ್ತು ತರಬೇತಿ ಪ್ರಮಾಣಪತ್ರವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎರಡೂ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಬಗ್ಗೆ ಮತ್ತಷ್ಟು ವಿವರಗಳನ್ನು ಹಂಚಿಕೊಂಡ ಸ್ವಿಗ್ಗಿ ಫುಡ್ ಮಾರ್ಕೆಟ್‌ಪ್ಲೇಸ್‌ನ ಚೀಫ್ ಆಪರೇಟಿಂಗ್ ಆಫೀಸರ್ ಸೌರವ್ ಗೋಯಲ್, “ನಮ್ಮ ಡೆಲಿವರಿ ಪಾರ್ಟ್ನರ್‌ಗಳೇ ನಮ್ಮ ಸಂಸ್ಥೆಯ ಬೆನ್ನೆಲುಬು. ಅವರ ವೃತ್ತಿಪರ ಬೆಳವಣಿಗೆಗೆ ಬೆಂಬಲ ನೀಡುವುದು ನಮ್ಮ ಬದ್ಧತೆಯಾಗಿದೆ. ವಾಹನವೊಂದು ಡೆಲಿವರಿ ಸಿಬ್ಬಂದಿಯ ಆದಾಯ ಹೆಚ್ಚಿಸಲು ಮತ್ತು ದೈನಂದಿನ ಕೆಲಸವನ್ನು ಸುಲಭಗೊಳಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಹೀರೋ ಸಂಸ್ಥೆಯೊಂದಿಗಿನ ಈ ಒಪ್ಪಂದದಿಂದ ನಮ್ಮ ಸಿಬ್ಬಂದಿ ಸುಲಭವಾಗಿ ವಾಹನ ಖರೀದಿಸಿ, ಹೆಚ್ಚು ಆದಾಯ ಗಳಿಸಲು ಸಾಧ್ಯವಾಗಲಿದೆ,” ಎಂದು ಹೇಳಿದ್ದಾರೆ.

ಹೀರೋ ಮೋಟೋಕಾರ್ಪ್‌ನ ಚೀಫ್ ಬ್ಯುಸಿನೆಸ್ ಆಫೀಸರ್ ಅಶುತೋಷ್ ವರ್ಮಾ, “ವಾಹನ ಸೌಕರ್ಯವು ಆರ್ಥಿಕ ಪ್ರಗತಿಗೆ ದೊಡ್ಡ ಅಸ್ತ್ರವಾಗಿದೆ. ಸ್ವಿಗ್ಗಿ ಜೊತೆಗಿನ ನಮ್ಮ ಈ ಒಪ್ಪಂದವು ಭಾರತದ ಡೆಲಿವರಿ ಪಾರ್ಟ್ನರ್‌ಗಳಿಗೆ ಕೈಗೆಟುಕುವ ದರದಲ್ಲಿ ವಾಹನ ಒದಗಿಸುವ ಜೊತೆಗೆ, ರಸ್ತೆ ಸುರಕ್ಷತಾ ತರಬೇತಿಯ ಮೂಲಕ ಅವರ ಪ್ರಾಣ ರಕ್ಷಣೆಗೂ ಆದ್ಯತೆ ನೀಡುತ್ತಿದೆ” ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular