ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆಸ್ಪತ್ರೆ ಸ್ವೀಪರ್ ಅರೆಸ್ಟ್

ಮುಂಬೈನ ಸರ್ಕಾರಿ ಸ್ವಾಮ್ಯದ ಜೆಜೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿರುವ 15 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದ 40 ವರ್ಷದ ಸ್ವೀಪರ್‌ನನ್ನು ಬಂಧಿಸಲಾಗಿದೆ.

ಭಾನುವಾರ ಬೆಳಿಗ್ಗೆ ಈ ಘಟನೆ ಸಂಭವಿಸಿದ್ದು ಸ್ವೀಪರ್ ರೋಹಿದಾಸ್ ಸೋಲಂಕಿ ಬಾಲಕಿಯ‌ ಡೈಪರ್ ಮತ್ತು ಹಾಸಿಗೆಯನ್ನು ಬದಲಾಯಿಸಲು ಸಹಾಯ ಮಾಡುವಾಗ ಅನುಚಿತವಾಗಿ ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೋಷಕರೊಂದಿಗೆ ವಾಗ್ವಾದದ ನಂತರ ಕೆಲವು ಮಾತ್ರೆಗಳನ್ನು ಓವರ್‌ಡೋಸ್ ತೆಗೆದುಕೊಂಡಿದ್ದ ಬಾಲಕಿಯನ್ನ ಶನಿವಾರ ಸಂಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಬಳಸಿದ ಡೈಪರ್ ಅನ್ನು ಶೌಚಾಲಯದಲ್ಲಿ ಇಟ್ಟಿದ್ದ ಡಸ್ಟ್ ಬಿನ್‌ನಲ್ಲಿ ಹಾಕಲು ಆರೋಪಿ ರೋಹಿದಾಸ್ ಸೋಲಂಕಿ ಆಕೆಯ ಸಂಬಂಧಿಕರನ್ನು ಕಳಿಸಿದ್ದ. ಅಲ್ಲದೇ ಹಾಸಿಗೆ ಮೇಲೆ ಮಲಗಿದ್ದ ಬಾಲಕಿಯನ್ನು ಚುಂಬಿಸಿ ಅನುಚಿತವಾಗಿ ಸ್ಪರ್ಶಿಸಿದನು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಘಟನೆಯ ಬಗ್ಗೆ ಬಾಲಕಿಯ ಸಂಬಂಧಿಕರಿಗೆ ತಿಳಿದಾಗ ಅವರು ಆಸ್ಪತ್ರೆಯ ಅಧಿಕಾರಿಗಳನ್ನು ಸಂಪರ್ಕಿಸಿ ಪೊಲೀಸರಿಗೆ ಕರೆ ಮಾಡಿದ್ದರು.

ಸೋಲಂಕಿಯನ್ನು ಬಂಧಿಸಲಾಗಿದೆ ಮತ್ತು ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆಯ ಸೆಕ್ಷನ್ 354 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read