HomeEntertainmentಬ್ರೇಕಪ್‌ನ 2 ವರ್ಷಗಳ ನಂತರ ಮತ್ತೆ ಸ್ನೇಹಿತನೊಂದಿಗೆ ಕಾಣಿಸಿಕೊಂಡ ನಟಿ ಸುಶ್ಮಿತಾ ಸೇನ್

ಬ್ರೇಕಪ್‌ನ 2 ವರ್ಷಗಳ ನಂತರ ಮತ್ತೆ ಸ್ನೇಹಿತನೊಂದಿಗೆ ಕಾಣಿಸಿಕೊಂಡ ನಟಿ ಸುಶ್ಮಿತಾ ಸೇನ್

ಎರಡು ವರ್ಷಗಳ ಬ್ರೇಕಪ್ ನಂತರ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಮತ್ತು ರೋಹ್ಮನ್ ಶಾಲ್ ಮತ್ತೆ ಒಂದಾಗಿದ್ದಾರೆ. ನಿರ್ಮಾಪಕ ರಮೇಶ್ ತೌರಾನಿ ಅವರು ಆಯೋಜಿಸಿದ್ದ ದೀಪಾವಳಿ ಪಾರ್ಟಿಗೆ ಇಬ್ಬರೂ ಕೈ ಹಿಡಿದುಕೊಂಡು ಆಗಮಿಸಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ.

ಸುಶ್ಮಿತಾ ಸೇನ್ 2021 ರಲ್ಲಿ ರೋಹ್ಮನ್ ಜೊತೆಗೆ ಬ್ರೇಕಪ್ ಮಾಡಿಕೊಳ್ಳುತ್ತಿದ್ದೇನೆ ಎಂದು ಅಧಿಕೃತವಾಗಿ ಘೋಷಿಸಿದ್ದರು. ಆದರೀಗ, ಎರಡು ವರ್ಷಗಳ ನಂತರ ಮತ್ತೆ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.

ಮಂಗಳವಾರ ಸಂಜೆ, ಚಿತ್ರ ನಿರ್ಮಾಪಕ ರಮೇಶ್ ತೌರಾನಿ ಅವರು ಆಯೋಜಿಸಿದ್ದ ದೀಪಾವಳಿ ಪಾರ್ಟಿಯಲ್ಲಿ ಇಬ್ಬರೂ ಕೈ ಕೈ ಹಿಡಿದುಕೊಂಡು ಆಗಮಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಾರ್ಟಿಗೆ ಹೋಗುವ ಮುನ್ನ ಛಾಯಾಗ್ರಾಹಕರಿಗೆ ಇಬ್ಬರೂ ಒಟ್ಟಿಗೆ ನಿಂತು ಫೋಸ್ ನೀಡಿದ್ದಾರೆ. ಸುಶ್ಮಿತಾ ಕಪ್ಪು ಸೀರೆಯಲ್ಲಿ ಮಿಂಚಿದ್ರೆ, ರೋಹ್ಮನ್ ಬಿಳಿ ಕುರ್ತಾ ಮತ್ತು ಪೈಜಾಮ ಮತ್ತು ಬೀಜ್ ಬ್ಲೇಜರ್‌ ಧರಿಸಿದ್ರು. ಸುಶ್ಮಿತಾ-ರೋಹನ್ ಜೊತೆಗೆ ಇರುವುದನ್ನು ನೋಡಿದ ಅವರ ಅಭಿಮಾನಿಗಳು ಸಂತೋಷಗೊಂಡಿದ್ದಾರೆ.

ಅಂದಹಾಗೆ, 2021 ರಲ್ಲಿ ಸುಶ್ಮಿತಾ ರೋಹ್ಮನ್ ಅವರೊಂದಿಗೆ ಥ್ರೋಬ್ಯಾಕ್ ಫೋಟೋವನ್ನು ಹಂಚಿಕೊಂಡಿದ್ದರು. ಇನ್ನು ಮುಂದೆ ಒಟ್ಟಿಗೆ ಇರುವುದಿಲ್ಲ ಎಂದು ಅವರು ಘೋಷಿಸಿದ್ದರು. ತಮ್ಮ ಸಂಬಂಧದ ಬಗ್ಗೆ ಮಾತನಾಡುತ್ತಾ ರೋಹ್ಮನ್ ಅವರು, ಮದುವೆಯಾಗದಿದ್ದರೂ ತಾವು ಒಂದು ಕುಟುಂಬದಂತೆ ಇದ್ದೆವು ಎಂದು ಈ ಹಿಂದೆ ಹಂಚಿಕೊಂಡಿದ್ದರು. ನಾವು ಸಾಮಾನ್ಯ ಕುಟುಂಬದಂತೆ ಬದುಕುತ್ತೇವೆ. ಇಬ್ಬರು ಮಕ್ಕಳೊಂದಿಗೆ ತಂದೆಯಾಗಿ, ಸ್ನೇಹಿತನಾಗಿದ್ದೇನೆ ಎಂದು ಹೇಳಿದ್ದರು.

ಆರ್ಯ ಸೀಸನ್-3 ರಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಸುಶ್ಮಿತಾ ಅವರು ರೋಹ್ಮನ್ ಅವರನ್ನು ಸಾಮಾಜಿಕ ಮಾಧ್ಯಮದ ಮೂಲಕ ಭೇಟಿಯಾಗಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular