HomeKarnatakaBIG NEWS: ದೇವರಾಜೇಗೌಡ ಜೀವಕ್ಕೆ ಕುತ್ತು: ಮಾಜಿ ಶಾಸಕ ಸುರೇಶ್ ಗೌಡ ಸ್ಫೋಟಕ ಹೇಳಿಕೆ

BIG NEWS: ದೇವರಾಜೇಗೌಡ ಜೀವಕ್ಕೆ ಕುತ್ತು: ಮಾಜಿ ಶಾಸಕ ಸುರೇಶ್ ಗೌಡ ಸ್ಫೋಟಕ ಹೇಳಿಕೆ

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಎಸ್ ಐಟಿ ಕಸ್ಟಡಿಯಲ್ಲಿರುವ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡಗೆ ಕಸ್ಟಡಿಯಲ್ಲಿರುವಾಗಲೇ ಅವರ ಜೀವಕ್ಕೆ ಅಪಾಯವಿದೆ ಎಂದು ಮಾಜಿ ಶಾಸಕ ಸುರೇಶ್ ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಗೌಡ, ಹಲವು ತಿಂಗಳ ಕಾಲ ದೇವರಾಜೇಗೌಡನನ್ನು ಕಸ್ಟಡಿಯಲ್ಲಿಯೇ ಇಡಲು ಸಂಚು ನಡೆದಿದೆ. ಈ ವೇಳೆ ಅವರ ಜೀವಕ್ಕೆ ದೊಡ್ಡ ಅಪಾಯವಿದೆ. ಇದು ನೂರಕ್ಕೆ ನೂರರಷ್ಟು ಸತ್ಯ ಎಂದು ಹೇಳಿದ್ದಾರೆ.

ಪ್ರಕರಣದ ಖಳನಾಯಕರು, ಸಚಿವರು ಭಯೋತ್ಪಾದಕರಂತೆ ವರ್ತಿಸುತ್ತಿದ್ದಾರೆ. ಪೆನ್ ಡ್ರೈವ್ ಪ್ರಕರಣದ ಮೂಲ ರೂವಾರಿಗಳಿಗೆ ಸರ್ಕಾರದಿಂದ ರಾಜಾತಿಥ್ಯ ನೀಡಲಾಗುತ್ತಿದೆ. ಇದುವರೆಗೂ ಅವರಿಗೆ ನೋಟಿಸ್ ನೀಡದೇ, ಬಂಧಿಸದೇ ಆಟವಾಡುತ್ತಿದ್ದಾರೆ. ಇತ್ತ ದೇವರಾಜೇಗೌಡನನ್ನು ಷಡ್ಯಂತ್ರ ಮಾಡಿ ಬಂಧಿಸಲಾಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ಸತ್ಯಾಸತ್ಯತೆ ಬೇಕಿಲ್ಲ. ಸಚಿವರ ಹೆಸರು ಹೇಳಿದ್ರೂ ಪರಿಗಣನೆ ಮಾಡಲ್ಲ. ಮೂಲ ಹುಡುಕಿ ತನಿಖೆಯನ್ನೂ ಮಾಡಲ್ಲ ಎಂದು ಕಿಡಿಕಾರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular