ದಾವಣಗೆರೆ: ಸಿಂಥೆಟಿಕ್ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಆರೋಪದಡಿ ಉದ್ಯಮಿ ಶಿವರಾಜ್ ಅವರನ್ನು ದಾವಣಗೆರೆ ವಿದ್ಯಾನಗರ ಠಾಣೆ ಪೋಲೀಸರು ಬಂಧಿಸಿದ್ದಾರೆ.
ಅಂತರ ರಾಜ್ಯ ಗಾಂಜಾ ವಹಿವಾಟು ನಡೆಸುತ್ತಿದ್ದ ಆರೋಪದಡಿ ಇತ್ತೀಚಿಗೆ ಉದ್ಯಮಿ ವೇದಮೂರ್ತಿ ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣದ ತನಿಖೆ ಮುಂದುವರೆಸಿದ ಪೊಲೀಸರು ಉದ್ಯಮಿ ಶಿವರಾಜ್ ಅವರನ್ನು ಕೂಡ ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಎಸ್.ಎಸ್. ಬಡಾವಣೆ ನಿವಾಸಿ ಉದ್ಯಮಿ ಶಿವರಾಜ್ ಆರ್.ಟಿ.ಒ. ಕಚೇರಿಯಲ್ಲಿ ಏಜೆಂಟ್ ಆಗಿದ್ದರು. ಸಂಘಟನೆಯೊಂದರಲ್ಲಿ ಗುರುತಿಸಿಕೊಂಡಿದ್ದ ಅವರು ಪ್ರಭಾವಿ ಎಂದು ಬಿಂಬಿಸಿಕೊಳ್ಳಲು ಪ್ರಭಾವಿ ವ್ಯಕ್ತಿಗಳು, ಪೊಲೀಸರ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದರು. ಅವರ ಬಂಧನದ ವೇಳೆ ಮಾದಕ ವಸ್ತು ಪತ್ತೆಯಾಗಿಲ್ಲ ಎನ್ನಲಾಗಿದೆ.

