HomeEntertainment'Supplier ಶಂಕರ' ಚಿತ್ರದ ವಿಡಿಯೋ ಹಾಡು ರಿಲೀಸ್

‘Supplier ಶಂಕರ’ ಚಿತ್ರದ ವಿಡಿಯೋ ಹಾಡು ರಿಲೀಸ್

ರಂಜಿತ್ ಸಿಂಗ್ ನಿರ್ದೇಶನದ ‘Supplier ಶಂಕರ’ ಚಿತ್ರದ ವಿಡಿಯೋ ಹಾಡನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ‘ಮಾಡೋ ಕೆಲಸವ ನೀನು ಮರೆಸಿದೆ’ ಎಂಬ ಈ ಮೆಲೋಡಿ ಹಾಡಿಗೆ ನಕುಲ್ ಮತ್ತು ಐಶ್ವರ್ಯ ರಂಗರಾಜನ್ ಧ್ವನಿಗೂಡಿಸಿದ್ದು ಪ್ರಮೋದ್  ಸಾಹಿತ್ಯ ಹಾಗೂ ಆರ್ ಬಿ ಭರತ್ ಅವರ ಸಂಗೀತವಿದೆ.

‘ಟಾಮ್ ಅಂಡ್ ಜೆರ್ರಿ’ ಖ್ಯಾತಿಯ ನಿಶ್ಚಿತ್ ಕೊರೋಡಿ ಹಾಗೂ ದೀಪಿಕಾ ಆರಾಧ್ಯ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದು, ಗೋಪಾಲ್ ಕೃಷ್ಣನ್ ದೇಶಪಾಂಡೆ, ನವೀನ್ ಡಿ ಪಾಟೀಲ್, ಜ್ಯೋತಿ, ವಿಜಯ್ ವಿಶ್ವನಾಥ್ ತೆರೆ ಹಂಚಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತ್ರಿನೇತ್ರ ಫಿಲಂಸ್ ಬ್ಯಾನರ್ ನಲ್ಲಿ ಚಂದ್ರಶೇಖರ್ ಮತ್ತು ನಾಗೇಂದ್ರ ಸಿಂಗ್ ನಿರ್ಮಾಣ ಮಾಡಿದ್ದಾರೆ. ಸತೀಶ್ ಕುಮಾರ್ ಅವರ ಛಾಯಾಗ್ರಹಣವಿದ್ದು, ಸತೀಶ್ ಚಂದ್ರಯ್ಯ ಸಂಕಲನವಿದೆ.

For Latest News Updates, Join Our Whatsapp Community🚩
RELATED ARTICLES

Most Popular