HomeInternationalಬರುವ ಜುಲೈ 18ರಂದು ಭಯಾನಕ ಜ್ವಾಲಾಮುಖಿ: ಕಾಲಜ್ಞಾನಿಯಿಂದ ಭವಿಷ್ಯ

ಬರುವ ಜುಲೈ 18ರಂದು ಭಯಾನಕ ಜ್ವಾಲಾಮುಖಿ: ಕಾಲಜ್ಞಾನಿಯಿಂದ ಭವಿಷ್ಯ

ಭವಿಷ್ಯದ ಬಗ್ಗೆ ನುಡಿಯುವ ಹಲವು ಕಾಲಜ್ಞಾನಿಗಳು ಇದ್ದಾರೆ. ಅವರಲ್ಲಿ ಒಬ್ಬರು ಎನೋ ಅಲಾರಿಕ್. ನಿಗೂಢ ಸಾಮಾಜಿಕ ಮಾಧ್ಯಮ ಬಳಕೆದಾರರಾಗಿರುವ ಇವರು, ಸ್ವತಃ ಟೈಮ್ ಟ್ರಾವೆಲರ್ ಅರ್ಥಾತ್​ ಕಾಲಜ್ಞಾನಿ ಎಂದು ಹೇಳಿಕೊಳ್ಳುತ್ತಾರೆ. ಅವರು ಜ್ವಾಲಾಮುಖಿ ಸ್ಫೋಟದ ಬಗ್ಗೆ ಕೆಲವು ಆಘಾತಕಾರಿ ಹೇಳಿಕೆಗಳನ್ನು ನೀಡಿದ್ದು ಅದು ಸಾವಿರಾರು ಜನರನ್ನು ಕೊಲ್ಲುವ ಸಾಧ್ಯತೆಯಿದೆ ಎಂದಿದ್ದಾರೆ.

ಟಿಕ್ ಟಾಕ್‌ನಲ್ಲಿ 26 ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಎನೋ, ಮುಂಬರುವ ನೈಸರ್ಗಿಕ ವಿಪತ್ತಿನ ಬಗ್ಗೆ ಜನಸಾಮಾನ್ಯರಿಗೆ ಎಚ್ಚರಿಕೆ ನೀಡುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಯಾನಕ ಸೂಪರ್ ಜ್ವಾಲಾಮುಖಿ ಸ್ಫೋಟವು ಭೂಮಿಯ ಮೇಲಿನಿಂದ ಸಾವಿರಾರು ಜನರನ್ನು ನಾಶಪಡಿಸುತ್ತದೆ ಎಂದಿದ್ದಾರೆ. ಜುಲೈ 18, 2023 ರಂದು ಪ್ರಳಯ ಸಂಭವಿಸುವ ಬಗ್ಗೆ ಅವರು ಹಂಚಿಕೊಂಡಿದ್ದಾರೆ. ಪಶ್ಚಿಮ ಅಮೆರಿಕದಲ್ಲಿ ಈ ಘಟನೆ ಸಂಭವಿಸಲಿದೆ ಎಂದಿದ್ದಾರೆ. ಪಶ್ಚಿಮ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸೂಪರ್ ಜ್ವಾಲಾಮುಖಿ ಸ್ಫೋಟಗೊಳ್ಳುತ್ತದೆ, ದಟ್ಟವಾದ ಹೊಗೆ ಮತ್ತು ಬೂದಿಯಲ್ಲಿ ಆಕಾಶವನ್ನು ಆವರಿಸುತ್ತದೆ ಎಂದು ಅವರು ನುಡಿದಿದ್ದಾರೆ. ಇದರ ಸತ್ಯಾಂಶ ಶೀಘ್ರದಲ್ಲಿಯೇ ತಿಳಿಯಲಿದೆ.

For Latest News Updates, Join Our Whatsapp Community🚩
RELATED ARTICLES

Most Popular