ಒಂದು ಕಾಲದಲ್ಲಿ ಬಾಲಿವುಡ್ ಚಿತ್ರರಂಗವನ್ನು ಆಳಿದ್ದ ನಟ ಗೋವಿಂದ ಅವರು ಇತ್ತೀಚೆಗೆ ಸಿನಿಮಾ ಕಾರಣಗಳಿಗಿಂತ ಹೆಚ್ಚಾಗಿ ವೈಯಕ್ತಿಕ ವಿಷಯಗಳಿಗಾಗಿ ಸುದ್ದಿಯಲ್ಲಿದ್ದಾರೆ. ಪತ್ನಿ ಸುನಿತಾ ಅಹುಜಾ ಅವರೊಂದಿಗಿನ ಭಿನ್ನಾಭಿಪ್ರಾಯದ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಗೋವಿಂದ ಅವರ ಸೋದರಳಿಯ ವಿನಯ್ ಆನಂದ್ ಅವರು ತಮ್ಮ ಮಾವನ ತಾಯಿ ಭಕ್ತಿಯ ಕುರಿತು ಒಂದು ಅಪರೂಪದ ಸಂಗತಿಯನ್ನು ಹಂಚಿಕೊಂಡಿದ್ದಾರೆ.
ಹೌದು. ಬಾಲಿವುಡ್‌ನ ಹಾಸ್ಯ ನಟ ಹಾಗೂ ನೃತ್ಯ ಸಾಮ್ರಾಟ ಗೋವಿಂದ ಅವರು ಇತ್ತೀಚೆಗೆ ಸಿನಿಮಾ ಕಾರಣಗಳಿಗಿಂತ ಹೆಚ್ಚಾಗಿ ತಮ್ಮ ಕೌಟುಂಬಿಕ ವಿಚಾರಗಳಿಂದಲೇ ಸುದ್ದಿಯಲ್ಲಿದ್ದಾರೆ. ಒಂದು ಕಾಲದಲ್ಲಿ ಇಡೀ ದೇಶವನ್ನೇ ನೃತ್ಯದ ಮೂಲಕ ಮರುಳು ಮಾಡಿದ್ದ ಈ ನಟನ ‘ತಾಯಿ ಭಕ್ತಿ’ ಮತ್ತು ಅವರ ಪತ್ನಿ ಸುನಿತಾ ಅಹುಜಾ ನೀಡಿರುವ ಕೆಲವು ಹೇಳಿಕೆಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿವೆ.
ತಾಯಿಯ ಪಾದ ತೊಳೆದು ತೀರ್ಥ ಕುಡಿದಿದ್ದ ಗೋವಿಂದ!
ಹಿಂದಿ ರಶ್’ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ವಿನಯ್ ಆನಂದ್, “ನನ್ನ ಜೀವನದುದ್ದಕ್ಕೂ ನಾನು ಗೋವಿಂದ ಅವರಿಂದ ಸ್ಫೂರ್ತಿ ಪಡೆದಿದ್ದೇನೆ. ಅವರು ನಂಬರ್ ಒನ್ ಸ್ಥಾನದಲ್ಲಿದ್ದಾಗ ಇಡೀ ದೇಶವೇ ಅವರನ್ನು ನೋಡಿ ಕಲಿಯುತ್ತಿತ್ತು. ಮನೆಯಲ್ಲಿಯೂ ಅವರನ್ನು ನೋಡುತ್ತಿದ್ದೇನೆ, ಒಮ್ಮೆ ನನ್ನ ಅಜ್ಜಿಯ (ಗೋವಿಂದ ಅವರ ತಾಯಿ) ಹುಟ್ಟುಹಬ್ಬದಂದು ಗೋವಿಂದ ಅವರು ಮನೆಗೆ ಬಂದಾಗ, ತಟ್ಟೆಯಲ್ಲಿ ಅಮ್ಮನ ಪಾದಗಳನ್ನು ತೊಳೆದು, ಭಕ್ತಿಯಿಂದ ಆ ನೀರನ್ನೇ ಕುಡಿದರು,” ಎಂದು ನೆನಪಿಸಿಕೊಂಡಿದ್ದಾರೆ.
ಗೋವಿಂದ ಅವರು ಎಷ್ಟೇ ದೊಡ್ಡ ಸ್ಟಾರ್ ಆಗಿದ್ದರೂ ತಾಯಿಯ ಮುಂದೆ ಮಗನಾಗಿಯೇ ಉಳಿದಿದ್ದರು. ಒಮ್ಮೆ ತಮ್ಮ ತಾಯಿಯ ಹುಟ್ಟುಹಬ್ಬದಂದು ಮನೆಗೆ ಬಂದಿದ್ದ ಗೋವಿಂದ, ಪೂಜೆಯ ತಟ್ಟೆಯಲ್ಲಿ ಅಮ್ಮನ ಪಾದಗಳನ್ನು ತೊಳೆದು ಆ ನೀರನ್ನೇ ತೀರ್ಥದಂತೆ ಕುಡಿದರು. ಅವರ ಈ ಭಕ್ತಿ ನಮಗೆಲ್ಲಾ ಮಾದರಿ,” ಎಂದು ವಿನಯ್ ಸ್ಮರಿಸಿದ್ದಾರೆ.
ಸಿನಿಮಾ ಅವಕಾಶಗಳನ್ನು ತಿರಸ್ಕರಿಸುವ ಗೋವಿಂದ: ಇದೇ ವೇಳೆ ವಿನಯ್ ಒಂದು ಅಸಮಾಧಾನವನ್ನೂ ಹೊರಹಾಕಿದ್ದಾರೆ. “ನಾನು ಅನೇಕ ಚಿತ್ರದ ಆಫರ್ ಮತ್ತು ಈವೆಂಟ್ ಅವಕಾಶಗಳನ್ನು ಅವರ ಬಳಿ ಕೊಂಡೊಯ್ದಿದ್ದೇನೆ. ಆದರೆ ಅವರು ಯಾವುದನ್ನೂ ಒಪ್ಪಿಕೊಳ್ಳುತ್ತಿಲ್ಲ. ಅವರದೇ ಆದ ಕಾರಣಗಳು ಅವರಿಗಿರಬಹುದು. ಅವರು ನನಗೆ ತಂದೆಯ ಸಮಾನ, ಹಾಗಾಗಿ ಗೌರವದಿಂದ ನಾನು ಅವರನ್ನು ‘ಏಕೆ?’ ಎಂದು ಎಂದೂ ಪ್ರಶ್ನಿಸಿಲ್ಲ,” ಎಂದು ವಿನಯ್ ಹೇಳಿದ್ದಾರೆ.
ತಾಯಿಗೆ ಹೆದರುತ್ತಿದ್ದ ಗೋವಿಂದ : ಪತ್ನಿ ಸುನಿತಾ ಅಹುಜಾ ಮಾತು
ಇನ್ನೊಂದೆಡೆ, ಗೋವಿಂದ ಅವರ ಪತ್ನಿ ಸುನಿತಾ ಅಹುಜಾ ಅವರು ಇತ್ತೀಚಿನ ವ್ಲಾಗ್‌ನಲ್ಲಿ ಕೆಲವು ಆಘಾತಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಗೋವಿಂದ ಅವರ ಅಫೇರ್ ವದಂತಿಗಳ ಬಗ್ಗೆ ಕೇಳಿದಾಗ, “ಆ ಕಾಲದಲ್ಲಿ ನನ್ನ ಅತ್ತೆ ಬದುಕಿದ್ದರು. ಗೋವಿಂದ ಅವರಿಗೆ ಅಮ್ಮ ಎಂದರೆ ವಿಪರೀತ ಭಯವಿತ್ತು. ಅವರ ನಿಧನದ ನಂತರ ಗೋವಿಂದ ಯಾರ ಭಯವೂ ಇಲ್ಲದಂತೆ ಬದುಕುತ್ತಿದ್ದಾರೆ. ಈಗ ಅವರು ತಮಗೆ ಇಷ್ಟ ಬಂದಂತೆ ಮಾಡುತ್ತಾರೆ. ಅವರ ಸುತ್ತಮುತ್ತಲಿನ ಗೆಳೆಯರ ಗುಂಪು ಸರಿಯಿಲ್ಲ. ಅವರೇನು ಮಗುವಲ್ಲ, ನಾನು ಯಾವಾಗಲೂ ಅವರ ಜೊತೆಗಿರಲು ಸಾಧ್ಯವಿಲ್ಲ,” ಎಂದು ಹೇಳಿದ್ದಾರೆ.”ಹಿಂದೆಯೂ ನಾನು ಹೇಳಿದ್ದೇನೆ, ಅವರಿಗೆ ಅಫೇರ್ ಇದ್ದರೆ ಇರಲಿ ಅದಕ್ಕೇನು? ಆದರೆ ಎಲ್ಲದಕ್ಕೂ ಒಂದು ವಯಸ್ಸಿದೆ. ಯೌವನದಲ್ಲಿ ನಾನೂ ಕೂಡ ಪಾರ್ಟಿ ಮಾಡಿ ಮಜಾ ಮಾಡಿದ್ದೇನೆ, ಆದರೆ ಈಗ ಅದಕ್ಕೆ ಸಮಯವಲ್ಲ,” ಎಂದು ಸುನಿತಾ ಮಾರ್ಮಿಕವಾಗಿ ನುಡಿದಿದ್ದಾರೆ.
ಗೋವಿಂದ ಮತ್ತು ಸುನಿತಾ ಅಹುಜಾ 1987 ರಲ್ಲಿ ವಿವಾಹವಾಗಿದ್ದು, ಅವರಿಗೆ ಟೀನಾ ಮತ್ತು ಯಶವರ್ಧನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇತ್ತೀಚಿನ ವ್ಲಾಗ್‌ಗಳಲ್ಲಿ ಸುನಿತಾ ಅವರು ತಮ್ಮ ಪತಿಯ ಮೇಲಿನ ಆರೋಪಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. “ಗೋವಿಂದ ನನ್ನ ಬಾಲ್ಯದ ಗೆಳೆಯ ಮತ್ತು ಪ್ರೀತಿ. ಅವರು ತಮ್ಮ ತಪ್ಪುಗಳನ್ನು ತಿದ್ದಿಕೊಂಡು, ನನ್ನ ನಿರೀಕ್ಷೆಯಂತೆ ಬದುಕಿದರೆ ನಾನು ಅವರನ್ನು ಕ್ಷಮಿಸಲು ಸಿದ್ಧ” ಎಂದು ಹೇಳಿದ್ದಾರೆ. ವರದಿಗಳ ಪ್ರಕಾರ, ಕಳೆದ ಕೆಲವು ಸಮಯದಿಂದ ಈ ದಂಪತಿಗಳು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಸುನಿತಾ ಅವರು ಮಕ್ಕಳೊಂದಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರೆ, ಗೋವಿಂದ ಅವರು ಎದುರಿನ ಬಂಗಲೆಯಲ್ಲಿ ಒಬ್ಬರೇ ಇರುವುದಾಗಿ ತಿಳಿದುಬಂದಿದೆ.

