ತುಮಕೂರು: ರಾಜ್ಯ ಕಾಂಗ್ರೆಸ್ ನಲ್ಲಿ ಅಧಿಕಾರ ಹಸ್ತಾಂತರ ಚರ್ಚೆ ನಡುವೆಯೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮತ್ತೆ ದಲಿತ ಸಿಎಂ ಕುರ್ತು ವಿಚಾರ ಪ್ರಸ್ತಾಪಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಕುರುತ ಚರ್ಚೆಗಳು ಸಧ್ಯಕ್ಕೆ ಮುಗಿಯುವ ಲಕ್ಷಗಳು ಕಾಣುತ್ತಿಲ್ಲ. ಕಾಂಗ್ರೆಸ್ ನಾಯಕರ ದಿನಕ್ಕೊಂದು ಹೇಳಿಕೆ, ದಿನಕ್ಕೊಂದು ಬೆಳವಣಿಗೆಗಳು ರಾಜ್ಯದ ಜನತೆಗೆ ರೋಸಿಹೋಗುವಂತೆ ಮಾಡಿದೆ. ಈ ನಡುವೆ ಮಾಜಿ ಸಚಿವ ಕೆ.ಎನ್.ರಾಜಣ್ಣ ಮತ್ತೆ ದಲಿತ ಸಿಎಂ ವಿಚಾರ ಪುನರುಚ್ಛರಿಸಿದ್ದಾರೆ.
ಬಿಜೆಪಿ ಬಂದರೆ ಲಿಂಗಾಯಿತರು ಮುಖ್ಯಮಂತ್ರಿಯಾಗುತ್ತಾರೆ. ಜೆಡಿಎಸ್ ಬಂದರೆ ಒಕ್ಕಲಿಗರು ಮುಖ್ಯಮಂತ್ರಿಯಾಗ್ತಾರೆ. ಇದರಿಂದ ಬೇರೆ ಸಮುದಾಯಕ್ಕೆ ನ್ಯಾಯ ಎಲ್ಲಿ ಕೊಟ್ಟಹಾಗ ಆಗುತ್ತೆ? ಎಂದು ಪ್ರಶ್ನಿಸಿದ್ದಾರೆ.
ದಲಿತರು ಯಾಕೆ ಮುಖ್ಯಮಂತ್ರಿಯಾಗಬಾರದು? ಅಲ್ಪಸಂಖ್ಯಾತರು ಯಾಕೆ ಸಿಎಂ ಆಗಬಾರದು? ವಾಸ್ತವಾಂಶ ಹೇಳಿದರೆ ಅದು ಬಹಳ ಜನಕ್ಕೆ ಹಿಡಿಸುವುದಿಲ್ಲ ಎಂದು ಹೇಳುವ ಮೂಲಕ ದಲಿತ ಸಿಎಂ ವಿಚಾರ ಪ್ರಸ್ತಾಪಿಸಿದ್ದಾರೆ.

