HomeKarnatakaBIG NEWS: ಸಚಿವರು ವರ್ಗಾವಣೆ ದಂಧೆಯಲ್ಲಿದ್ದರೆ ಮುಗಿಸಿಕೊಂಡೇ ಬರಲಿ...ಸದನಕ್ಕೆ ಗೈರಾದ ಸಚಿವರ ವಿರುದ್ಧ ಬಿಜೆಪಿ ಸದಸ್ಯರು...

BIG NEWS: ಸಚಿವರು ವರ್ಗಾವಣೆ ದಂಧೆಯಲ್ಲಿದ್ದರೆ ಮುಗಿಸಿಕೊಂಡೇ ಬರಲಿ…ಸದನಕ್ಕೆ ಗೈರಾದ ಸಚಿವರ ವಿರುದ್ಧ ಬಿಜೆಪಿ ಸದಸ್ಯರು ಕೆಂಡಾಮಂಡಲ

ಬೆಂಗಳೂರು: ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ವೇಳೆ ಗೈರಾದ ಸಚಿವರುಗಳ ವಿರುದ್ಧ ಬಿಜೆಪಿ ಸದಸ್ಯರು ಕೆರಳಿ ಕೆಂಡವಾದ ಘಟನೆ ವಿಧಾನಸಭೆಯಲ್ಲಿ ನಡೆದಿದೆ.

ಭೋಜನ ವಿರಾಮದ ನಂತರ ವಿಧಾನಸಭಾ ಕಲಾಪ ಆರಂಭವಾಗುತ್ತಿದ್ದಂತೆ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಸಾಗರ ಶಾಸಕ ಬೇಳೂರು ಗೋಪಾಲ ಕೃಷ್ಣ ಚರ್ಚೆ ಮುಂದುವರೆಸಿದರು. ಈ ವೇಳೆ ಕಲಾಪ ಆರಂಭವಾದರೂ ಸದನಕ್ಕೆ ಬಾರದ ಸಚಿವರ ವಿರುದ್ಧ ಬಿಜೆಪಿ ಸದಸ್ಯರು ವಾಗ್ದಾಳಿ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವೇಳೆ ಮಾತನಾಡಿದ ಶಾಸಕ ಸುನೀಲ್ ಕುಮಾರ್, ಕಲಾಪ ಆರಂಭವಾದರೂ ಸಚಿವರು ಆಗಮಿಸಿಲ್ಲ. ಸಚಿವರು ವರ್ಗಾವಣೆ ದಂಧೆಯಲ್ಲಿ ಇದ್ದಾರೆ ಎಂದರೆ ಮುಗಿಸಿಕೊಂಡೇ ಬರಲಿ… ಸದನವನ್ನು ಸ್ವಲ್ಪ ಹೊತ್ತು ಮುಂದೂಡಿ ಎಂದು ಸ್ಪೀಕರ್ ಖಾದರ್ ಅವರಿಗೆ ಒತ್ತಾಯಿಸಿದರು.

For Latest News Updates, Join Our Whatsapp Community🚩
RELATED ARTICLES

Most Popular